ಜೂಡೊ ಪಂದ್ಯಾವಳಿಗೆ ೨೦ ವಿದ್ಯಾರ್ಥಿಗಳ ಆಯ್ಕೆ
ಕೋಲಾರ, ಸೆ,೧೬-ಜಿಲ್ಲಾಮಟ್ಟದ ೧೪ -೧೭ವರ್ಷ ಬಾಲಕ ಬಾಲಕಿಯರ ಜೂಡೋ ಪಂದ್ಯಾವಳಿಗಳಲ್ಲಿ ತಾಲ್ಲೂಕಿನ ತೊರದೇವಂಡಹಳ್ಳಿ ಶಾಲೆಯ ೨೦ ವಿಧ್ಯಾರ್ಥಿಗಳು ಆಯ್ಕೆಯಾಗಿದ್ದು ಮಕ್ಕಳನ್ನು ಮುಖ್ಯಶಿಕ್ಷಕ ಮುನಿಯಪ್ಪ ಹಾಗೂ ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ವಿ.ಮುರಳಿಮೋಹನ್ ಅಭಿನಂದಿಸಿದರು.
ಈ ಮಕ್ಕಳು ೧೮ಮತ್ತು೧೯ ರಂದು ರಾಜ್ಯಾ ಮಟ್ಟದಲ್ಲಿ ಭಾಗವಹಿಸುವ ಅರ್ಹತೆ ಪಡೆದುಕೊಂಡಿದ್ದು, ತಾಲ್ಲೂಕು ಮಟ್ಟದಲ್ಲಿ ೧೫ ವಿಧ್ಯಾರ್ಥಿಗಳು ಕುಸ್ತಿಯಲ್ಲಿ ಆಯ್ಕೆಯಾಗಿರುತ್ತಾರೆ ಮತ್ತು ಈ ಶಾಲೆಯ ಮಕ್ಕಳು ಬಾಲಕರ ಮತ್ತು ಬಾಲಕಿಯರ ಇಬ್ಬರೂ ಥ್ರೋಬಾಲ್ ನಲ್ಲಿ ತಾಲ್ಲೂಕು ಮಟ್ಟದಲ್ಲಿ ಗೆದ್ದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಜಯಶೀಲರಾದಂತಹ ವಿದ್ಯಾರ್ಥಿಗಳನ್ನು ಹಾಗೂ ತರಬೇತಿಗೊಳಿಸಿದಂತಹ ವಿ ಮುರುಳಿ ಮೋಹನ್ ರವರನ್ನು ಶಾಲೆಯ ಮುಖ್ಯೋಪಾಧ್ಯರಾದ ಮುನಿಯಪ್ಪ ರವರು ಹಾಗೂ ಶಾಲಾ ಸಿಬ್ಬಂದ ವರ್ಗದವರು ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.