ದೇಶದ ಸ್ವಾತಂತ್ರ್ಯಕ್ಕೆ ಚಂದ್ರಶೇಖರ ಆಜಾದ್‍ರ ಕೊಡುಗೆ ಅನನ್ಯ
ಕಲಬುರಗಿ:ಫೆ.27:ದೇಶದ ಆಜಾದವೇ ನನ್ನು ಗುರಿಯೆಂದು ಬಾಲ್ಯದಲ್ಲಿಯೇ ಬ್ರಿಟಿಷರ ವಿರುದ್ಧ ಗರ್ಜಿಸಿದ ಚಂದ್ರಶೇಖರ ಆಜಾದ್ ಅವರು ದೇಶದ ಸ್ವಾತಂತ್ರ್ಯಕ್ಕೆ ನೀಡಿರುವ ಕೊಡುಗೆ ತುಂಬಾ ಅನನ್ಯವಾಗಿದೆಯೆಂದು ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಆಳಂದ ರಸ್ತೆಯ ಜೆ.ಆರ್ ನಗರದಲ್ಲಿರುವ ‘ಶ್ರೇಯಸ್ ಟ್ಯುಟೋರಿಯಲ್ಸ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ ‘ಚಂದ್ರಶೇಖರ ಆಜಾದ್‍ರ ಪುಣ್ಯಸ್ಮರಣೆ’ಯಲ್ಲಿ ಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ ಮಾತನಾಡಿ, ಕ್ರಾಂತಿಕಾರಿಯಾಗಿ ನಿರಂತರವಾಗಿ ಹೋರಾಟ ಮಾಡಿದ ಆಜಾದರು ಸ್ವಾತಂತ್ರ್ಯಕಾಗಿ ವೀರಮರಣ ಹೊಂದಿದ್ದಾರೆ.ಆಜಾದ್‍ರಲ್ಲಿರುವ ಅಪ್ಪಟವಾದ ದೇಶಭಕ್ತಿ ಇಂದಿನ ಯುವಕರಿಗೆ ಮಾದರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಬಸಯ್ಯಸ್ವಾಮಿ ಹೊದಲೂರ, ಅಸ್ಲಾಂ ಶೇಖ್, ಸೋಹೆಲ್ ಶೇಖ್ ಸೇರಿದಂತೆ ಮತ್ತಿತರರಿದ್ದರು.