ಅಂಬಿಗರ ಚೌಡಯ್ಯನವರ 904ನೇ ಜಯಂತಿ ಆಚರಣೆ
ಕಲಬುರಗಿ:ಫೆ.27: ನಗರದ ಕುಸನೂರಲ್ಲಿ ತೊನಸನಳ್ಳಿ ಅಲ್ಲಮಪ್ರಭು ಸಂಸ್ಥಾನ ಮಠ ಪೂಜ್ಯ ಡಾ. ಮಲ್ಲಣ್ಣಪ್ಪ ಮಹಾಸ್ವಾಮಿಗಳು ಶ್ರೀ ಅಂಬಿಗರ ಚೌಡಯ್ಯನವರ ಜಯಂತೋತ್ಸ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಚೌಡಯ್ಯ ಅವರ ಭಾವಚಿತ್ರಕ್ಕೆ ಪುμÁ್ಪರ್ಚನೆ ನೆರವೇರಿಸಿದರು.
‘ ಇಡೀ ಜಗತ್ತಿಗೆ ಜ್ಞಾನ ಕೊಟ್ಟ ಸಮಾಜ ಯಾವುದಾದರೂ ಇದೆ ಅಂದ್ರೆ ಅದುವೇ ಕೋಲಿ ಸಮಾಜ ಎಂದು ಅಭಿಪ್ರಾಯಪಟ್ಟರು
ಎಲ್ಲರೂ ಒಬ್ಬರನ್ನು ಒಬ್ಬರು ತಿಳಿದುಕೊಂಡು ಹೋಗಬೇಕು ಹೊರತು ಟೀಕೆ ಮಾಡಿಕೊಂಡು ಹೋಗುವುದರಲ್ಲಿ ಯಾರು ಉದ್ಧಾರ ಆಗುವುದಿಲ್ಲ. ಎಲ್ಲರಿಗೆ ನಾವು ಒಂದೇ ಎಂಬ ಅರಿವು ಬಂದಾಗ ಮಾತ್ರ ಜೀವನದಲ್ಲಿ ಮುಂದೆ ಬರಲು ಆಗುವುದು ಎಂದು ಹೇಳಿದರು.
ಮನುಷ್ಯನ ಆಸೆ ಎಲ್ಲಿವರೆಗೆ ಇರುತ್ತದೆ ಅಲ್ಲಿಯವರೆಗೆ ಮನುಷ್ಯ ಗುಲಾಮನಾಗಿ ದುಡಿಯುತ್ತದೆ ಅದಕ್ಕೆ ಪ್ರತಿಯೊಬ್ಬ ಮನುಷ್ಯ ತಮ್ಮಲ್ಲಿ ಬದಲಾವಣೆ ತರಬೇಕಾದರೆ ಜ್ಞಾನ, ಬುದ್ಧಿ ಮತ್ತು ಶಿಕ್ಷಣ ಬಹಳ ಮುಖ್ಯವಾಗಿದೆ ಎಂದು ತಿಳಿಸಿದರು.
ಪ್ರತಿಯೊಬ್ಬ ಪೆÇೀಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕೆಂದು ಕಿವಿಮಾತು ಹೇಳಿದರು.
ಯಾವ ಮನೆಯಲ್ಲಿ ಹೆಣ್ಣು ಮಗಳಿಗೆ ಗೌರವ ಇರುತ್ತದೆ ಆ ಮನೆವು ಉದ್ಧಾರವಾಗಿರುತ್ತದೆ ಎಂದು ಹೇಳಿದರು.
ಎಸ್.ಟಿ ಹೋರಾಟ ಸಮಿತಿ ರಾಜಾಧ್ಯಕ್ಷ ಲಚ್ಚಪ್ಪ ಜಮಾದರ ಅವರು ಮಾತನಾಡಿ ನಿಜಶರಣ ಅಂಬಿಗರ ಚೌಡಯ್ಯನವರ ಆದರ್ಶಗಳನ್ನು ನಾವೆಲ್ಲರೂ ಪಾಲಿಸಬೇಕು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕು. ಚೌಡಯ್ಯನವರ ವಚನಗಳು ನಮ್ಮಲ್ಲರಿಗೂ ದಾರಿದೀಪವಾಗಿವೆ. ಸಮಾಜದಲ್ಲಿ ಮುಂದೆ ಬರಬೇಕಾದರೆ ಮಕ್ಕಳಿಗೆ ಉತ್ತಮವಾದ ಶಿಕ್ಷಣ ಒದಗಿಸಬೇಕೆಂದು ಹೇಳಿದರು.
ಎಲ್ಲ ವಚನಕಾರರನ್ನು ಗಮನಿಸುತ್ತಾ ಬಂದರೆ ಅಂಬಿಗರ ಚೌಡಯ್ಯ ಅವರ ನಡೆ, ನುಡಿ ವಿಶಿಷ್ಟವಾಗಿರುವುದನ್ನು ಕಾಣಬಹುದು. ಯಾವುದೇ ಒಂದು ವಿಷಯವನ್ನು ನಿಷ್ಠುರವಾಗಿ ಸತ್ಯದ ಹಾದಿಯಲ್ಲಿ ಅಂಬಿಗರ ಚೌಡಯ್ಯ ಅವರು ಹೇಳುತ್ತಿದ್ದರು. ಇರುವುದನ್ನು ಇದ್ದ ಹಾಗೆ ಹೇಳುವ ವಿಶೇಷ ವ್ಯಕ್ತಿತ್ವ ಚೌಡಯ್ಯರವರದ್ದಾಗಿತ್ತು. ಪ್ರತಿಯೊಬ್ಬ ವಚನಕಾರರು ತಮ್ಮ ವಚನದ ಕೊನೆಯ ಸಾಲಿನಲ್ಲಿ ಅವರ ಆರಾಧ್ಯ ದೈವದ ನಾಮವನ್ನು ಬಳಸುತ್ತಿದ್ದರು. ಆದರೆ ಇವರು ತಾವು ಮಾಡಿದ ವೃತ್ತಿಯನ್ನು ಅಂಕಿತ ನಾಮವನ್ನಾಗಿ ಬಳಸುತ್ತಿದ್ದರು’ ಎಂದರು.
ಕಲಬುರಗಿ ಕೃಷ್ಣ ಕಾಡಾ ಮಾಜಿ ಅಧ್ಯಕ್ಷ ಶರಣಪ್ಪ ತಳವಾರ ಅವರು ಮಾತನಾಡಿ ರಾಜ್ಯ ಸರ್ಕಾರ ಆಗಲಿ ಕೇಂದ್ರ ಸರ್ಕಾರ ಆಗಲಿ ಮುಂದೆ ಬರುವ ದಿನಗಳಲ್ಲಿ ಕೋಲಿ ಸಮಾಜಕ್ಕೆ ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಹೇಳಿದರು.
ಇವರ ಅಚಾರ-ವಿಚಾರ, ತತ್ವಾದರ್ಶಗಳು ನಮ್ಮ ಸಂಸ್ಕøತಿಯನ್ನು ಬಿಂಬಿಸುತ್ತದೆ. ವಚನಕಾರರು ಸಮಾಜದ ಅವ್ಯವಸ್ಥೆಯ ವಿರುದ್ಧ ವಚನ ಸಾಹಿತ್ಯದ ಮೂಲಕ ಹೋರಾಟ ನಡೆಸಿದ್ದಾರೆ. ಇವರ ವಿಚಾರಧಾರೆಗಳು ಮುಂದಿನ ಪೀಳಿಗೆಗೂ ತಲುಪಿಸುವಂತಾಗಬೇಕು ಎಂದು ನುಡಿದರು.
ಈ ಸಂದರ್ಭದಲ್ಲಿ ಕುಸನೂರ ಗ್ರಾಮ ಗ್ರಾಮ ಪಂಚಾಯತಿ ಅಧ್ಯಕ್ಷ ಕುಪೇಂದ್ರ ಎಂ ಬರಗಾಲಿ, ಗ್ರಾಮ ಪಂಚಾಯತಿ ಸದಸ್ಯರಾದ ರಮೇಶ ಎಂ ತೆಗ್ಗಿನಮನಿ, ರೇವಣಸಿದ್ದ ಎಂ ಚೆಂಗಟಿ, ಶ್ರೀಮತಿ ದೇವಿಕಾ ರೇವಣಸಿದ್ದಯ್ಯ ಮಠಪತಿ, ಶ್ರೀಮತಿ ನಾಗೀಣಿ ಎಸ್ ದೊಡ್ಮನಿ, ಮಾಜಿ ಉಪಾಧ್ಯಕ್ಷರಾದ ಪರಮೇಶ್ವರ ಎಸ್ ಬಟ್ಟರ್ಕಿ, ನಿವೃತ್ತ ಡಿ ವಾಯ್ ಎಸ್.ಪಿ ಸಿದ್ರಾಮಪ್ಪ ಸಣ್ಣೂರಕರ, ಶ್ರೀಮತಿ ಸುನಿತಾ ತಳವಾರ, ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತ್ಯೋತ್ಸವ ಸಮಿತಿ ಅಧ್ಯಕ್ಷರಾದ ಸಿದ್ದಪ್ಪ ಎನ್ ಮೂಲಿಮನಿ, ಉಪಾಧ್ಯಕ್ಷರಾದ ಡುರ್ಕಿ , ಕಾರ್ಯದರ್ಶಿಗಳಾದ ಕೃμÁ್ಣ ವಯ್ ತಳವಾರ , ಸಿದ್ದು ಎಸ್ ತೆಗನೂರ, ಕೋಲಿ ಸಮಾಜದ ಹಿರಿಯ ಮುಖಂಡರಾದ ಪೀರಪ್ಪ ಬಿ ತಳವಾರ್, ದಶರಥ ಹೆಚ್ ತೆಗನೂರ, ಬಸವರಾಜ ಡುರ್ಕಿ, ಸಿದ್ದಪ್ಪ ಎಂ ಹುಲೆಪ್ಪಗೋಳ, ಶರಣಪ್ಪ ಬಿ ತಳವಾರ, ಪೀರಪ್ಪ ಎಸ್ ಮೂಲಿಮನಿ, ಶಿವಶಂಕರ ಎಂ ತಳವಾರ, ಯಶ್ವಂತ ಬಿ ತಳವಾರ, ಪೀರಪ್ಪ ಎಸ್ ಝಾಪೂರ, ಪರಮೇಶ್ವರ ಬೋಳೆವಾಡ, ಸಾಯಬಣ್ಣ ಬಳವಡಗಿ, ಈರಣ್ಣ ಬಿ ತಳವಾರ, ಕುಮಾರಿ ಡಾ. ಗೀತಾ ತಳವಾರ, ಹಣಮಂತ ಹುಲಪ್ಪಗೋಳ, ಕಾಶಪ್ಪ ಸಿದ್ದಪ್ಪ ಮೂಲಿಮನಿ, ಬಾಬು ಡುರ್ಕಿ, ಕಾಶಪ್ಪ ಹುಲಪ್ಪಗೋಳ, ನಾಗಪ್ಪ ಹುಲಪ್ಪಗೋಳ, ಸಿದ್ದರಾಮ ತೇಗನೂರ, ಚಂದ್ರಕಾಂತ ತಳವಾರ, ಕಾಶಪ್ಪ ದೊಡ್ಡಮನಿ, ಶಿವಯೋಗಿ ಬೋಳೆವಾಡ, ನಾಗಣ್ಣ ಸಂಗೊಳಗಿ, ಕಮಲಾಕಾರ ಡುರ್ಕಿ, ಮಹದೇವಪ್ಪ ಸರಡಗಿ ಹಾಗೂ ಮಾಳಪ್ಪ ಝಾಪೂರ ಸೇರಿದಂತೆ ಗ್ರಾಮದ ಹಿರಿಯರು ಯುವಕರು ಹಾಗೂ ಮಹಿಳೆಯರು ಭಾಗಿಯಾಗಿದ್ದರು.