ಮಾ. 3ರಂದು 371(ಜೆ) ಜಾರಿ ದಶಮಾನೋತ್ಸವ ಒಂದು ಅವಲೋಕನ
ಕಲಬುರಗಿ:ಫೆ.27: ನಗರದ ಡಾ. ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಮಾರ್ಚ್ 3ರಂದು ಬೆಳಿಗ್ಗೆ 10-45ಕ್ಕೆ ಕರ್ನಾಟಕ ನಾಮಕರಣಕ್ಕೆ 50ರ ಸುವರ್ಣ ಸಂಭ್ರಮ-2024ರ ನಿಮಿತ್ಯವಾಗಿ ಕಲಂ-371(ಜೆ) ಜಾರಿ ದಶಮಾನೋತ್ಸವ ಒಂದು ಅವಲೋಕನ ಮತ್ತು ಸಾಧಕರಿಗೆ ಸುವರ್ಣ ಕರ್ನಾಟಕ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ದೇವರಾಜ್ ಅರಸು ಮತ್ತು ಎಸ್. ಬಂಗಾರಪ್ಪ ಸಾಂಸ್ಕøತಿಕ ಪ್ರತಿಷ್ಠಾನದ ಅಧ್ಯಕ್ಷ ಡಾ. ಚಿ.ಸಿ. ನಿಂಗಣ್ಣ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉದ್ಘಾಟನೆಯನ್ನು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಹಾಗೂ ಜೇವರ್ಗಿ ಶಾಸಕ ಡಾ. ಅಜಯಸಿಂಗ್ ಅವರು ನೆರವೇರಿಸುವರು. ದಿವ್ಯ ಸಾನಿಧ್ಯವನ್ನು ಶ್ರೀಶೈಲಂ, ಸುಲಫಲ ಮಠದ ಡಾ. ಸಾರಂಗಧರೇಶ್ವರ್ ಸ್ವಾಮೀಜಿ ವಹಿಸುವರು. ಶ್ರೀನಿವಾಸ್ ಸರಡಗಿಯ ರೇವಣಸಿದ್ಧ ಶಿವಾಚಾರ್ಯರು ಆಶೀರ್ವಚನ ನೀಡುವರು ಎಂದರು.
ರಾಜ್ಯ ವಿಧಾನ ಪರಿಷತ್ ಸದಸ್ಯ ಡಾ. ಚಂದ್ರಶೇಖರ್ ಪಾಟೀಲ್ ಹುಮ್ನಾಬಾದ್ ಅವರು ಪ್ರಶಸ್ತಿ ಪ್ರದಾನ ಮಾಡುವರು. ಬಿಜೆಪಿ ಮುಖಂಡ ಶಿವಕಾಂತ್ ಮಹಾಜನ್ ಅವರು 371(ಜೆ) ಜಾರಿ ಹೋರಾಟ ಕಿರು ಸಂಚಿಕೆ ಬಿಡುಗಡೆ ಮಾಡುವರು. ಅಧ್ಯಕ್ಷತೆಯನ್ನು ಪ್ರಾಧ್ಯಾಪಕ ಡಾ. ಚಂದ್ರಕಾಂತ್ ಯಾತನೂರು ಅವರು ವಹಿಸುವರು. ಮುಖ್ಯ ಅತಿಥಿಗಳಾಗಿ ರಾಜ್ಯ ವಿಧಾನ ಪರಿಷತ್ ಮಾಜಿ ಸದಸ್ಯ ಶರಣಪ್ಪ ಮಟ್ಟೂರ್, ಕಾಂಗ್ರೆಸ್ ಮುಖಂಡ ನೀಲಕಂಠರಾವ್ ಮೂಲಗೆ, ದಿಶಾ ಕಾಲೇಜಿನ ಅಧ್ಯಕ್ಷ ಶಿವಾನಂದ್ ಖಜೂರಗಿ, ಜೆಡಿಎಸ್ ಜಿಲ್ಲಾಧ್ಯಕ್ಷ ಬಾಲರಾಜ್ ಗುತ್ತೇದಾರ್, ನಿವೃತ್ತ ಪ್ರಾಧ್ಯಾಪಕ ಡಾ. ವಾಸುದೇವ್ ಸೇಡಂ ಅವರು ಆಗಮಿಸುವರು ಎಂದು ಅವರು ಹೇಳಿದರು.
ಬಸವರಾಜ್ ಕೋನೆಕ್, ಪ್ರೊ. ವಾಸುದೇವ್ ಸೇಡಂ, ಡಾ. ಸದಾನಂದ್ ಪೆರ್ಲ, ಮಲ್ಲಿಕಾರ್ಜುನ್ ವಡ್ಡನಕೇರಿ, ಶ್ರೀಮತಿ ಮಂಜುಳಾ ಬಿ. ಜಾನೆ, ಪ್ರೊ. ಭುವನೇಶ್ವರಿ ಚಿಮಕೋಡ್, ಲಕ್ಷ್ಮಣ್ ದಸ್ತಿ, ಹನುಮಂತ್ ಯಳಸಂಗಿ, ಡಾ. ಬುರ್ಲಿ ಪ್ರಲ್ಹಾದ್, ಶರಣಪ್ಪ ತಳವಾರ್, ಸಿದ್ರಾಮಪ್ಪ ಜಿ. ಗೋಧಿ, ನಿತಿನ್ ಎ. ನಾಯ್ಕ್, ಪ್ರೊ. ಶಿವರಾಜ್ ಪಾಟೀಲ್, ಶರಣು ಪಪ್ಪಾ, ಕಲ್ಯಾಣಕುಮಾರ್ ಶೀಲವಂತ್, ವಿಜಯಕುಮಾರ್ ಪರೂತೆ, ಮಲ್ಲಯ್ಯ ಗುತ್ತೇದಾರ್, ಲಿಂಗರಾಜ್ ಸಿರಗಾಪೂರ್, ಪ್ರೊ. ಬಿ.ಎಸ್. ಮಾಲಿಪಾಟೀಲ್, ಡಾ. ಕಲ್ಯಾಣರಾವ್ ಪಾಟೀಲ್, ಡಾ. ವಿನೋದಕುಮಾರ್ ರಾಠೋಡ್, ಡಾ. ಎ.ಪಿ. ಜಂಪಾ, ಪ್ರೊ. ಶಮಸುದ್ದೀನ್ ಪಟೇಲ್, ಅಶೋಕ್ ನಾಯಕ್, ಡಾ. ವಿಜಯಕುಮಾರ್ ಸಾಲಿಮನಿ, ಡಾ. ಗೌಸುದ್ದೀನ್ ತುಮಕೂರಕರ್, ಪ್ರೊ. ಶೈಲೇಂದ್ರಸಿಂಗ್ ಠಾಕೂರ್, ಡಾ. ಜಗನ್ನಾಥ್ ಪಟ್ಟಣಕರ್, ಡಾ. ಶರಣಪ್ಪ ಸೈದಾಪೂರ್, ಪ್ರೊ. ಜಗಪ್ಪ ಆರ್. ಹೊಸಮನಿ, ಡಾ. ಅನಿಲಕುಮಾರ್ ಹಾಲು, ಡಾ. ಜಯದೇವಿ ಗಾಯಕವಾಡ್, ಮಲ್ಲಿಕಾರ್ಜುನ್ ಪಾಲಾಮೂರ್, ಶ್ರೀಮತಿ ಮೀನಾಕ್ಷಿ ಎ. ಗುತ್ತೇದಾರ್, ಸಿದ್ದಲಿಂಗಪ್ರಭು ಪೂಜಾರಿ, ಡಾ. ಚಂದ್ರಶೇಖರ್ ದೊಡ್ಡಮನಿ, ಡಾ. ಸುರೇಖಾ ಎಸ್. ಬೂಸಾಳೆ, ಸುಧಾಕರ್ ಎಸ್. ಭೀಮಳ್ಳಿ, ಡಾ. ಉಮಾದೇವಿ ಆರ್. ವಿಭೂತಿ, ಶ್ರೀಮತಿ ಶೋಭಾ ಪಿ. ಜವಳಿ, ಅಮೃತಾ ಪಿ. ಕೊರಳ್ಳಿ, ಡಾ. ನಾಗಪ್ಪ ಗೋಗಿ, ಸಂಗಮನಾಥ್ ರೇವತಗಾಂವ್, ಪ್ರಕಾಶ್ ಅಂಗಡಿ ಕನ್ನೆಳ್ಳಿ, ಗಂಗಾಧರ್ ಬಡಿಗೇರ್, ರಾಜಕುಮಾರ್ ಉದನೂರ್, ಪ್ರೊ. ಮಲಕನಗೌಡ ಪಾಟೀಲ್, ಡಾ. ಭಾಗೀರಥಿ ಬಿ.ಕೆ., ಡಾ. ಅಪ್ಪಾಸಾಬ್ ಬಿರಾದಾರ್, ಡಾ. ಆನಂದ್ ಸಿದ್ದಾಮಣಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರತಿಷ್ಠಾನದ ಗೌರವ ಅಧ್ಯಕ್ಷ ಪಂ. ಮಾನು ಸಗರ್, ಉಪಾಧ್ಯಕ್ಷ ಲಕ್ಷ್ಮೀಕಾಂತ್ ಹೊಸಮನಿ, ಡಾ. ಶಂಕರ್ ಬಾಳಿ, ಪ್ರೊ. ದೇವಿದಾಸ್ ಪವಾರ್, ವೆಂಕಟೇಶ್ ನೀರಡಗಿ, ಚಂದ್ರಕಾಂತ್ ಕಣವೇಶ್ವರ್ ಮುಂತಾದವರು ಉಪಸ್ಥಿತರಿದ್ದರು.