ಐಸಿಯು ಅಂಬ್ಯೂಲೇನ್ಸ್  ಲೋಕಾರ್ಪಣೆಆರೋಗ್ಯ ಹಾಗೂ ಶಿಕ್ಷಣ ಆತ್ಮತೃಪ್ತಿಯ ಸೇವೆಗಳು – ಜಿಲ್ಲಾಧಿಕಾರಿ
ಸಂಜೆವಾಣಿ ವಾರ್ತೆ
ಹೊಸಪೇಟೆ ಫೆ27: ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸುವ ಸೇವೆ ಸಾರ್ಥಕತೆ ಜೊತೆ ತೃಪ್ತಿಕರವಾಗಿರಲು ಕಾರಣವಾಗಲಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಹೇಳಿದರು.
ಹೊಸಪೇಟೆಯ ರೋಟರಿ ಸಂಸ್ಥೆ ಮಂಗಳವಾರ ಸಾರ್ವಜನಿಕ ಬಳಕೆಗೆ ಐಸಿಯು ಆಂಬ್ಯೂಲೇನ್ಸ್ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು ನಿಸ್ವಾರ್ಥ ಸೇವೆಯೊಂದ ಮಾತ್ರ ಆತ್ಮತೃಪ್ತಿ ನೀಡಲು ಸಾಧ್ಯ ಸಾವಿನ ಅಂಚಿನಲ್ಲಿರುವ ಒಬ್ಬನೇ ವ್ಯಕ್ತಿ ಸಾವಿನಂಚಿನಿಂದ ಹೊರಬರುವಂತೆ ಮಾಡಿದರೂ ಒಂದು ದೊಡ್ಡ ಸಾಧನೆಯಾಗಲಿದೆ ಎಂದರು.  ಜಿಲ್ಲಾಡಳಿತ ಆರೋಗ ಮತ್ತು ಶಿಕ್ಷಣ ಅಭಿವೃದ್ಧಿಗೆ ಎಲ್ಲಾ ಹಂತದ ಸಹಾಯ ಸಹಕಾರ ನೀಡಲಿದೆ ಎಂದರು.
ಇದೆ ಸಂದರ್ಭದಲ್ಲಿ ಆಂಬ್ಯೂಲೇನ್ಸ್ ಸೇವೆಗೆ ಆರ್ಥಿಕ ನೆರವು ನೀಡಿದ ವಿ.ತಿರುಪತಿ ನಾಯ್ಡು ದಂಪತಿಗಳನ್ನು ಸನ್ಮಾನಿಸಲಾಯಿತು.
ರೋಟರಿ ಅಧ್ಯಕ್ಷ ಆರ್ ಸತ್ಯನಾರಾಯಣ,  ರೋಟರಿ ಡಿಸ್ಟ್ರಿಕ್ಟ್ ಗೌರ್ನರ್ ಮಾಣಿಕ ಪವಾರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶಂಕರ್ ನಾಯ್ಕ್ ,  ಪಿ.ಜಿ.ಚಂದ್ರಶೇಖರ, ಸೈಯದ್ ನಾಜೀಮುದ್ದೀನ್, ಪ್ರಾಯೋಜಕ ವಿ.ತಿರುಪತಿ ನಾಯ್ಡು,  ಕೆ.ಎಸ್. ದಾದಪೀರ್  ಇನ್ನವೀಲ್ ಅಧ್ಯಕ್ಷ ರಮ್ಯ ಸೇರಿದಂತೆ ಇತರರು ಪಾಲ್ಗೊಂಡಿದ್ದರು.