ದೇಶಭಕ್ತರ ಆದರ್ಶ ಮೈಗೂಡಿಸಿಕೊಳ್ಳಬೇಕು-ನಾಗರತ್ನಾ
ಸಂಜೆವಾಣಿ ವಾರ್ತೆ
ಹೊಸಪೇಟೆ ಫೆ27: ಕಾಂತ್ರಿಕಾರಿ ಸ್ವಾತಂತ್ರ್ಯ ಹೋರಾಟಗಾರ ಚಂದ್ರಶೇಖರ ಆಜಾದ್ ಸೇರಿದಂತೆ ಎಲ್ಲಾ ಆದರ್ಶ ಪುರುಷರ ಆದರ್ಶಗಳನ್ನು ಮೈಗೂಡಿಸಿಕೊಂಡು ನಮ್ಮ ಹಂತದಲ್ಲಿ ಅನುಷ್ಠಾನಗೊಳಿಸುವ ಮೂಲಕ ದೇಶಾಭಿಮಾನ ಮೆರೆಯಬೇಕಾಗಿದೆ ಎಂದು ಉಪನ್ಯಾಸಕಿ ನಾಗರತ್ನಾ ಹೇಳಿದರು.
ಸ್ವಾತಂತ್ರ್ಯ ಹೋರಾಟಗಾರ ಚಂದ್ರಶೇಖರ ಆಜಾದ್ ಪುಣ್ಯತಿಥಿಯನ್ನು ಬಲಿದಾನ ದಿವಸವಾಗಿ ಪತಂಜಲಿ ಯೋಗ ಸಮಿತಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಭುತ್ವದ ವಿರುದ್ದ ಧ್ವನಿ ಎತ್ತುವುದೇ ಸಾಹಸವಾದ ಸಮಯದಲ್ಲಿ ಆಜಾದ್ ಸೇರಿದಂತೆ ಅನೇಕರು ತಮ್ಮ ತಮ್ಮ ಹಂತದಲ್ಲಿ ಯುವಕರನ್ನು ಸಂಘಟಿಸುವ ಕಾರ್ಯದಲ್ಲಿ ತೊಡಗಿದ್ದರು. ಸ್ವಾತಂತ್ರ್ಯವೇ ನಮ್ಮ ಗುರಿ ದೇಶಾಭಿಮಾನ, ಸ್ವಾತಂತ್ರ್ಯಕ್ಕೆ ಚುತಿ ಬಂದರೆ ಸಹಿಸುವ ಮಾತೇ ಇಲ್ಲಾ ಎಂದು ಆಡಳಿತದ ವಿರುದ್ಧ ಕ್ರಾಂತಿಯ ಕಿಚ್ಚು ಹಚ್ಚಿದ ಆಜಾದ್ ಅನಿಕರಿಣೀಯ ಎಂದರು. ಆಜಾದ್‍ರಂತೆ ದೇಶಕ್ಕಾಗಿ ಇಂದು ಪ್ರಾಣ ನೀಡಬೇಕಾದ ಅಗತ್ಯವಿಲ್ಲಾ ಆದರೆ ಸತ್ಯ, ಅಹಿಂಸೆ, ನ್ಯಾಯ ಸ್ವಚ್ಛತೆಯನ್ನು ಕಾಪಾಡುವ ಮೂಲಕ ನಮ್ಮ ನಮ್ಮ ಹಂತದಲ್ಲಿ ಶಿಸ್ತು ಬದ್ಧ ಜೀವನ ನಡೆಸುವ ಅಗತ್ಯವಿದೆ ಎಂದರು.
ಬಲಿದಾನ ದಿವಸ್ ಪ್ರಯುಕ್ತ ಹಿರಿಯ ಮಾಜಿ ಸೈನಿಕ ಹಾಗೂ ಯೋಗ ತರಬೇತುದಾರರಾದ ಅಶೋಕ ಚಿತ್ರಗಾರರವನ್ನು ಸನ್ಮಾನಿಸಲಾಯಿತು. ಪತಂಜಲಿ ಯೋಗ ಸಮಿತಿಯ ಜಿಲ್ಲಾ ಉಸ್ತುವಾರಿ ಡಾ.ಎಫ್.ಟಿ.ಹಳ್ಳಿಕೇರಿ ಮಾತನಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.  ಪತಂಜಲಿ ಯೋಗ ಸಮಿತಿಯ ರಾಜ್ಯ ಯುವ ಪ್ರಭಾರಿ ಕಿರಣ್‍ಕುಮಾರ ಹಾಗೂ ರಾಮಲಿಂಗೇಶ್ವರ ಯೋಗ ಕೇಂದ್ರದ ಮುಖ್ಯಸ್ಥ ಶ್ರೀಧರ, ಹಿರಿಯ ಯೋಗಸಾಧಕರು ರಾಜ್ಯ ಸಮಿತಿ ಸದಸ್ಯ ಬಾಲಚಂದ್ರ ಶರ್ಮಾ, ಮಂಗಳಮ್ಮ, ವೀರೇಶ್, ಫ್ರೀಡಂ ಪಾರ್ಕ್ ಉಸ್ತುವಾರಿ ಅನಂತ ಜೋಶಿ, ವಿಠೋಬಣ್ಣ ಶಿವಮೂರ್ತಿ, ಶ್ರೀರಾಮ ಪಾಲ್ಗೊಂಡಿದ್ದರು.