ಹನುಮನ ಹಲಿಗೆ ಬಿಡುಗಡೆ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಫೆ.27: ಶಿವರಾಮ ಕರಾಂತರ “ಚೋಮನ ದುಡಿ”, ಇನ್ನೊಂದು ನಾ. ಡಿಸೋಜ ಬರೆದ “ಕೊಳಗ” ಭೂಮಿ ಮತ್ತು ಮನುಷ್ಯನ ಸಂಬಂಧಗಳು ಕುರಿತಾದ ಕಾದಂಬರಿಗಳ ಸಾಲಿನಲ್ಲಿ ಪಿ.ಆರ್. ವೆಂಕಟೇಶ್  ಅವರ “ಹನುಮನ ಹಲಿಗೆ” ಕಾದಂಬರಿ ಸೇರ್ಪಡೆಯಾಗುತ್ತದೆಂದು ನಾಡಿನ ಹಿರಿಯ ಸಾಹಿತಿ , ಜ್ಞಾನ ಭಾರತಿ, ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ಡಾ. ರಾಜಪ್ಪ ದಳವಾಯಿ ತಿಳಿಸಿದರು
ಅವರು ನಗರದ ಗಾಂಧಿ ಭವನದಲ್ಲಿ ಬಂಡಾಯ ಸಾಹಿತ್ಯ ಸಂಘಟನೆ, ಸಮಾಜ ವಿಜ್ಞಾನ ವೇದಿಕೆ ಜಂಟಿಯಾಗಿ ಹಮ್ಮಿಕೊಂಡಿದ್ದ ಪುಸ್ತಕ ಜನಾರ್ಪಣೆ, ಪ್ರಶಸ್ತಿ ಸಮಾರಂಭ, ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಪುಸ್ತಕಗಳನ್ನು ಜನಾರ್ಪಣೆ ಗೊಳಿಸಿ ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಪತ್ರಕರ್ತ ಅರ್. ಜಿ ಹಳ್ಳಿ ಮಾತನಾಡಿ, ವ್ಯಕ್ತಿಗೆ, ಜನ ಸಮುದಾಯಕ್ಕೆ, ಇಡೀದೇಶದ ಮುನ್ನಡೆಗೆ ದಾರಿದೀಪವಾದ ಸಂವಿದಾನದ ಬಗ್ಗೆ ಮಾತಾಡಿದವರಿಗೆ ದೇಶದ್ರೋಹದ ಪಟ್ಟ ನೀಡುವ ವ್ಯವಸ್ಥೆ ಅಡಿಯಲ್ಲಿ ಬದುಕುವ ದಾರುಣ ಸ್ಥಿತಿಲ್ಲಿದ್ದೇವೆ ಎಂದು ಪ್ರಸ್ತುತ ಭಾರತದ ಸಂದರ್ಭವನ್ನು ವಿವರಿಸಿದರು.
ನಂತರ  ಕಳೆದು ಹೋದ ಕವನ ಸಂಕಲನ ಕುರಿತು ಖ್ಯಾತ ವಿಮರ್ಶಕ ಗಂಗಾವತಿ ಪ್ರಥಮ ದರ್ಜೆ ಕಾಲೇಜು ಪ್ರಾಂಸುಪಾಲ ಡಾ. ಜಾಜಿ ದೇವೇಂದ್ರಪ್ಪ ಮಾತನಾಡಿ, ರೂಪಕಗಳನ್ನು ಮುರಿದು ಕಟ್ಟುವ ಕವಿತೆಗಳಿಗೆ ಹೊಸ ಶಕ್ತಿಯನ್ನು ತುಂಬುತ್ತಾರೆ. ಅವರ ಮೇಲೆ ಅರೂಢ, ಸೂಪಿ, ಅವಧೂತರ ಪ್ರಭಾವವೂಇದೆ.  ಅಲ್ಲದೆ ಜನರ ಹೋರಟದ ಅನುಭವಗಳಿವೆ ಎಂದರು.
 ಕ.ಸಾ.ಪ ಜಿಲ್ಲಾ ಅಧ್ಯಕ್ಷ ಡಾ. ನಿಷ್ಠಿರುದ್ರಪ್ಪ  ಅಧ್ಯಕ್ಷತೆ ವಹಿಸಿದ್ದರು.
ಅಬ್ದುಲ್ ಹೈ ತೋರಣಗಲ್ಲು ಪ್ರಾಸ್ತಾವಿಕ ನುಡಿದರು. ಜನಪದ ಗಾಯಕ ರಮೇಶ್ ಗಬ್ಬೂರ್ ಪ್ರರ್ಥನಾ ಗೀತೆ ಹಾಡಿದರು.
ಕವಿ ಅಜಯ ಬಣಕಾರ್ ನಿರ್ವಹಿಸಿದರೆ, ಕೆ. ಕಾಂತರಾಜ್ ಸ್ವಾಗತಿಸಿ ವಂದಿಸಿದರು.  ಟಿ.ಜಿ.ವಿಠಲ್ ವೇದಿಕೆಯಲ್ಲಿ ಇದ್ದರು.
One attachment • Scanned by Gmail