ಹೆಚ್‍ಐವಿ, ಏಡ್ಸ್ ಕುರಿತು ಬೀದಿ ನಾಟಕ ಪ್ರದರ್ಶನ
ಕಲಬುರಗಿ,ಫೆ.27-ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‍ಷನ್ ಸೊಸೈಟಿ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಹಾಗೂ ಪ್ರತಿಬಂಧಕ ಘಟಕದ ಸಂಯುಕ್ತಾಶ್ರಯದಲ್ಲಿ ಆಳಂದನ ಶ್ರೀ ಸಾಯಿ ಜನಜಾಗೃತಿ ಕಲಾ ಸಂಘದ ವತಿಯಿಂದ ಸೇಡಂನ ಬಸ್ ನಿಲ್ದಾಣದಲ್ಲಿ ಎಚ್‍ಐವಿ/ಏಡ್ಸ್ ಕುರಿತು ಬೀದಿ ನಾಟಕ ಪ್ರದರ್ಶನ ನಡೆಯಿತು.
ಆರೋಗ್ಯ ಅಧಿಕಾರಿ ಪ್ರೀತಿ ಅವರು ಮಾತನಾಡಿ, ಹೆಚ್‍ಐವಿ/ಏಡ್ಸ್ ಬಗ್ಗೆ ಜನರಲ್ಲಿ ಅರಿವು ಮೂಡಿಸಿದರು. ರೇಖಾ ನಾಗರಹಳ್ಳಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ತಂಡದ ಮುಖ್ಯಸ್ಥರಾದ ಗಂಗೂಬಾಯಿ ಎಂ.ಕೌಲಗಿ, ಮಲ್ಲಿಕಾರ್ಜುನ ಖಾನಾಪೂರ, ಮಹಾಂತೇಶ ಆಳಂದ, ಚಂದ್ರಕಾಂತ, ಶಿವಕುಮಾರ ಗಂಗಾನಗರ, ಸಿದ್ದಣ್ಣ ಜಮಾದಾರ, ಸಾವಿತ್ರಿ ಬಿರಾದಾರ, ಲಕ್ಷ್ಮೀ ಆಳಂದ, ಉದಯ ಸಾಗರ, ಮಲ್ಲಿಕಾರ್ಜುನ ಜಾನಿ ಕಾರ್ಯಕ್ರಮ ನಡೆಸಿಕೊಟ್ಟರು.