ಜೂಜಾಟ: 6 ಜನರ ಬಂಧನ
ಕಲಬುರಗಿ,ಫೆ.27-ನಗರದ ಗದಲೇಗಾಂವ ಕಲ್ಯಾಣ ಮಂಟಪ ಹತ್ತಿರದ ಖಾಲಿ ಜಾಗದಲ್ಲಿ ಜೂಜಾಟವಾಡುತ್ತಿದ್ದ 6 ಜನರನ್ನು ಆರ್.ಜಿ.ನಗರ ಪೊಲೀಸರು ಬಂಧಿಸಿದ್ದಾರೆ.
ಶರಣು ಉಪಾರ, ವಿಜಯಕುಮಾರ ಪೂಜಾರಿ, ಬಸವರಾಜ ಕಡಗಂಚಿ, ವಿಶ್ವನಾಥ ಮಠ, ಮಲ್ಲಿಕಾರ್ಜುನ ಪಾಟೀಲ ಎಂಬುವವರನ್ನು ಬಂಧಿಸಿ 1,310 ರೂ.ನಗದು, 52 ಇಸ್ಪೆಟ್ ಎಲೆಗಳನ್ನು ಜಪ್ತಿ ಮಾಡಿದ್ದಾರೆ. ಆರ್.ಜಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.