ಅರ್ಜುಣಗಿ:ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳವರ 15ನೇ ಸ್ಮರಣೋತ್ಸವ
ಕಲಬುರಗಿ,ಫೆ.27-ಜಿಲ್ಲೆಯ ಅಫಜಲಪುರ ತಾಲೂಕಿನ ಅರ್ಜುಣಗಿ ಗ್ರಾಮದ ಶ್ರೀ ಗುರು ಕುಮಾರೇಶ್ವರ ವಿರಕ್ತ ಮಠದ ಪೀಠಾಧಿಪತಿಗಳಾದ ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳವರ 16ನೇ ಸ್ಮರಣೋತ್ಸವ ಕಾರ್ಯಕ್ರಮ ಫೆ.28 ರಿಂದ ಮಾ.7 ರವರೆಗೆ ಅಫಜಲಪುರ ತಾಲ್ಲೂಕಿನ ಅರ್ಜುಣಗಿ ಗ್ರಾಮದಲ್ಲಿ ನಡೆಯಲಿದೆ.
ಫೆ.28 ರಂದು ಬೆಳಿಗ್ಗೆ 8.30ಕ್ಕೆ ಶ್ರೀಗಳ ಅಮೃತ ಹಸ್ತದಿಂದ ದ್ವಾರ ಬಾಗಿಲು ಉದ್ಘಾಟನೆ ನಂತರ ಬೆಳಿಗ್ಗೆ 9ಕ್ಕೆ ಷಟಸ್ಥಲ ಧ್ವಜಾರೋಹಣ ನಡೆಯಲಿದೆ. ಫೆ.28 ರಿಂದ ಮಾ.7 ರವರೆಗೆ ಪ್ರತಿದಿನ 8.30 ಗಂಟೆಗೆ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಮಹಾಪುರಾಣ ಪ್ರವಚನ ಶಿವಾನುಭವ ಸಂಗೀತ ಕಾರ್ಯಕ್ರಮ ಜರಗುವವು. ಮಾ.7 ರಂದು ಬೆಳಿಗ್ಗೆ 11 ಗಂಟೆಗೆ ಮಹಾಪುರಾಣ ಮಹಾಮಂಗಲಗೊಳ್ಳುವದು.
28 ರಂದು ಆಳಂದ ತಾಲ್ಲೂಕಿನ ಚೆಲಗೇರಾದ ಜಗದ್ಗುರು ರೇಣುಕಾಚಾರ್ಯ ಪ್ರಣವ ಕುಟೀರದ ಶಾಂತವೀರ ಶಿವಾಚಾರ್ಯ ಮಹಾಸ್ವಾಮಿಗಳಿಂದ ಆಶೀರ್ವಚನ ನಡೆಯಲಿದ್ದು, ಎಚ್.ಕೆ.ಇ.ಸೊಸೈಟಿ ನಿರ್ದೇಶಕ ಅರುಣಕುಮಾರ ಎಂ.ವೈ.ಪಾಟೀಲ, ಜಿ.ಪಂ.ಮಾಜಿ ಸದಸ್ಯರಾದ ಮತೀನ ಪಟೇಲ್, ಸಿದ್ಧಾರ್ಥ ಬಸರಿಗಿಡ, ಸೋಲಾಪುರ ಎಪಿಎಂಸಿ ಆಡಳಿತ ವ್ಯಾಪಾರಿ ಗುರುಶಾಂತಪ್ಪ ಗಾಡಿ, ಎಂ.ಬಿ.ಹಿರೇಮಠ ಮುಖ್ಯ ಅತಿಥಿಗಳಾಗಿ ಆಗಮಿಸುವರು.
29 ರಂದು ಆಳಂದ ತಾಲ್ಲೂಕಿನ ಯಳಸಂಗಿ ಸಿದ್ಧಾರೂಢ ಮಠದ ಪರಮಾನಂದ ಮಹಾಸ್ವಾಮಿಗಳು, ಮಾರ್ಚ್ 3 ರಂದು ಅಫಜಲಪುರ ತಾಲ್ಲೂಕಿನ ಚಿನ್ಮಯಗಿರಿಯ ಮಹಾಂತೇಶ್ವರ ಮಠದ ವೀರ ಮಹಾಂತ ಶಿವಾಚಾರ್ಯ ಮಹಾಸ್ವಾಮಿಗಳು, ಮಾ. 5 ರಂದು ಅಫಲಪುರ ಸಂಸ್ಥಾನ ಹಿರೇಮಠದ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು, ಮಾ.6 ರಂದು ಬಡದಾಳ ತೇರಿನ ಮಠದ ಡಾ.ಚನ್ನಮಲ್ಲ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು, 7 ರಂದು ಶಿವಮೊಗ್ಗ ಜಿಲ್ಲೆಯ ಸೊರಬ ಹಿರೇಮಠದ ಘನಬಸವ ಅಮರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡುವರು.