ನಾಡಕಚೇರಿ,ನೆಮ್ಮದಿ ಕೇಂದ್ರಗಳಲ್ಲಿ ಭ್ರಷ್ಟಾಚಾರ ಆರೋಪ9 ಕಡೆ ಲೋಕಾಯುಕ್ತ ದಾಳಿ: 1 ಲಕ್ಷ ನಗದು ವಶ
ಕಲಬುರಗಿ,ಫೆ 27: ಜಿಲ್ಲೆಯ ವಿವಿಧ ನಾಡಕಚೇರಿಗಳ ಮೇಲೆ 50 ಕ್ಕೂ ಅಧಿಕ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ,ಕಡತಗಳನ್ನು ಪರಿಶೀಲಿಸಿದ್ದು,1 ಲಕ್ಷ ರೂ ನಗದು ವಶಕ್ಕೆ ಪಡೆದರು.
ಜಿಲ್ಲೆಯ ನಾಡಕಚೇರಿ,ಅಟಲ್ ಜನಸ್ನೇಹಿ,ಆಧಾರ್ ಸೇವಾ ಮತ್ತು ನೆಮ್ಮದಿ ಕೇಂದ್ರಗಳಲ್ಲಿ ವ್ಯಾಪಕ ಭ್ರಷ್ಟಾಚಾರ ಹಾಗೂ ಏಜೆಂಟರÀ ಮೂಲಕ ಹಣ ಪಡೆಯುವ ಆಪಾದನೆಯ ದೂರುಗಳ ಬಂದಿದ್ದವು.ಈ ಹಿನ್ನೆಲೆಯಲ್ಲಿ ಕಲಬುರಗಿ ನಗರ,ಜೇವರಗಿ,ಅಫಜಲಪುರ,ಶಹಬಾದ್,ಸೇಡಂ,ಚಿಂಚೋಳಿ,ಅಳಂದ,ಚಿತ್ತಾಪುರ,ಯಡ್ರಾಮಿ ತಾಲೂಕುಗಳಲ್ಲಿ ದಾಳಿ ಮಾಡಿ ಕಡತಗಳ ತಪಾಸಣೆ ನಡೆಸಲಾಗಿದೆ .ಗ್ರಾಮೀಣ ಭಾಗದಿಂದ ಬರುವ ಜನರನ್ನು ವಿನಾಕಾರಣ ಅಲೆದಾಡಿಸುತ್ತಿರುವ ದೂರುಗಳು ಇವೆ.ಕಡತಗಳಲ್ಲಿ ಲೋಪದೋಷ ಕಂಡು ಬಂದಲ್ಲಿ ಆ ನೌಕರ ಹಾಗೂ ಹಿರಿಯ ಅಧಿಕಾರಿಗಳ ಮೇಲಿನ ಕ್ರಮಕ್ಕಾಗಿ ಸರಕಾರಕ್ಕೆ ವರದಿ ಸಲ್ಲಿಸುವದಾಗಿ ಅಧಿಕಾರಿಗಳು ತಿಳಿಸಿದ್ದಾರೆ
ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಆ್ಯಂಟನಿ ಜಾನ್ ಜೆ.ಕೆ ಮಾರ್ಗದರ್ಶನದಲ್ಲಿ ಒಂಬತ್ತು ತಂಡಗಳು ದಾಳಿ ನಡೆಸಿವೆ.ಲೋಕಾಯುಕ್ತ ಡಿವೈಎಸ್ಪಿ,ಉಪ ಅಧೀಕ್ಷಕರು,ನಿರೀಕ್ಷಕರು,ಸಿಬ್ಬಂದಿ ದಾಳಿ ಮಾಡಿ ತಡರಾತ್ರಿಯವರೆಗೂ ಕಡತಗಳ ಪರಿಶೀಲನೆ ನಡೆಸಿದರು.