ಹಗಲಲ್ಲೂ ಉರಿಯುವ ಬೀದಿದೀಪ
ಬೀದರ,ಫೆ.27: ಜಿಲ್ಲೆಯಾದ್ಯಂತ ಬರುವ ಪಂಚಾಯತ್ ವ್ಯಾಪ್ತಿಯ ಗ್ರಾಮಗಳಲ್ಲಿ ದಾರಿದೀಪಗಳು ವಿದ್ಯುಚ್ಛಕ್ತಿ ಅವಶ್ಯಕತೆ ಇಲ್ಲದ ಸಮಯದಲ್ಲೂ ದಾರಿದೀಪಗಳು ಉರಿಯುತ್ತಿದ್ದು, ಇದನ್ನು ನಿಯಂತ್ರಿಸಲು ಪಂಚಾಯತ್ ಅಧಿಕಾರಿಗಳ ಮುಖಾಂತರ, ಪ್ರತಿ ಗ್ರಾಮಗಳಲ್ಲಿ ಗ್ರಾಮಕ್ಕೆ ನೀರು ಬಿಡುವ ವ್ಯಕ್ತಿಯಾಗಲಿ ಅಥವಾ ತಮ್ಮ ಪಂಚಾಯತ್ ಒಳಬರುವ ಯಾರನ್ನೊಬ್ಬನಾದರೂ ಪ್ರತಿ ಗ್ರಾಮದಲ್ಲಿ ದಾರಿದೀಪಗಳು ಸಾಯಂಕಾಲ ಹಾಕಿ ಬೆಳಗ್ಗೆ ಬಂದ್ ಮಾಡುವಂತೆ ಸೂಚಿಸಿ ವಿದ್ಯುಚ್ಛಕ್ತಿ ಸಂರಕ್ಷಣೆ ಮಾಡಬೇಕು. ಅದನ್ನು ರೈತರಿಗೆ ಹೊಲ ಗದ್ದೆಗಳಿಗೆ ಬಳಸಬಹುದು ಎಂದು ಅನಂತರೆಡ್ಡಿ ಟಿ. ಮಿರ್ಜಾಪುರ ಜಿಪಂ ಸಿಇಒ ಡಾ. ಗಿರೀಶ್ ಬದೋಲೆರಿಗೆ ಮನವಿ ಸಲ್ಲಿಸಿದ್ದಾರೆ.