ಈರಣ್ಣ ಶಿರಮಗೊಂಡಗೆ ‘ಕನ್ನಡ ಮಾಣಿಕ್ಯ’ ಪ್ರಶಸ್ತಿ ಪ್ರದಾನ
ವಿಜಯಪುರ,ಫೆ.27:ವಿಜಯಪುರದ ಚೇತನಾ ಕಾಲೇಜಿನ ಸಭಾಂಗಣದಲ್ಲಿ ನಡೆದ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಹಾಗೂ ನಗರ ಘಟಕ ವತಿಯಿಂದ ಕೊಡಮಾಡುವ ರಾಜ್ಯಮಟ್ಟದ “ಕನ್ನಡ ಮಾಣಿಕ್ಯ” ಪ್ರಶಸ್ತಿಯನ್ನು ಬಬಲೇಶ್ವರ ಪಟ್ಟಣದ ಸಮಾಜ ಸೇವಕÀ ಈರಣ್ಣ ಶಿರಮಗೊಂಡ ಅವರ ಸೇವೆಯನ್ನು ಪರಿಗಣಿಸಿ ರಾಜ್ಯ ಮಟ್ಟದ ಪ್ರಶಸ್ತಿಯನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಬೆಂಗಳೂರು ಸಾರ್ವಜನಿಕ ಗ್ರಂಥಾಲಯ ಉಪನಿರ್ದೇಶಕÀ ಡಾ. ಸತೀಶಕುಮಾರ ಹೊಸಮನಿ, ಮಕ್ಕಳ ಸಾಹಿತಿ ಫ.ಗು.ಸಿದ್ದಾಪೂರ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷÀ ಸಂಗಮೆಶ ಚೂರಿ, ಮುರುಗೇಶ ಸಂಗಮ, ವಿಜಯಪುರ ಗ್ರಂಥಾಲಯ ನಿರ್ದೇಶಕÀ ಅಜಯಕುಮಾರ ಡಿ., ರಾಜೇಂದ್ರ ನಾವಿ, ಸಾಹಿತಿ ಸಿದ್ದಲಿಂಗ ಮನಹಳ್ಳಿ, ನಗರ ಘಟಕ ಅಧ್ಯಕ್ಷÀ ಶಿವಾಜಿ ಮೋರೆ, ಸಿ.ಪಿ.ಐ. ಕವಟೆಕರ ಮತ್ತಿತರರು ಉಪಸ್ಥಿತರಿದ್ದರು.