ಹಣಕುಣಿ: ವೈಭವದಿಂದ ನಡೆದ ಲಕ್ಷ್ಮೀ ದೇವಿಯ ಜಾತ್ರಾ ಮಹೋತ್ಸವ, ಕಿರೀಟ ರೋಹಣ
ಹುಮನಾಬಾದ್:ಫೆ.27: ತಾಲ್ಲೂಕಿನ ಹಣಕುಣಿ ಗ್ರಾಮದಲ್ಲಿ ವೈಭವದಿಂದ ನಡೆದ ಲಕ್ಷ್ಮೀ ದೇವಿಯ ಜಾತ್ರಾ ಮಹೋತ್ಸವ, ಕಿರೀಟ ರೋಹಣ ಕಾರ್ಯಕ್ರಮ ವೈಭವದಿಂದ ಜರುಗಿತು.
ಈ ಮೂರ್ತಿಯ ಪ್ರಾಣ ಪ್ರತಿμÁ್ಠಪನೆಯನ್ನು ಹುಡುಗಿ ಗ್ರಾಮದ ಕರಿಬಸವೇಶ್ವರ ಮಠದ ಪೂಜ್ಯರು, ಶ್ರೀ ವಿರೂಪಾಕ್ಷ ಶಿವಚಾರ್ಯರು ಹಾಗೂ ತಡೋಳ ಮಠದ ಪರಮ ಪೂಜ್ಯ ರಾಜೇಶ್ವರ್ ಶಿವಚಾರ್ಯರು ಹಾಗೂ ಇಟಗಾ ಮಠದ ಪೂಜ್ಯ ದಾಸೋಹ ಮೂರ್ತಿ ಶ್ರೀ ಚನ್ನ ಮಲ್ಲೇಶ್ವರ ತ್ಯಾಗಿಗಳು ಹಾಗೂ ಶಿವಸಿದ್ಧ ಯೋಗಾಶ್ರಮ ಶಾಖಾ ಮುಕ್ತಿಮಠ ಸುಕ್ಷೇತ್ರ ಇಟಗಾದ ಪರಮ ಪೂಜ್ಯ ಶ್ರೀ ಮಹರ್ಷಿ ಧರ್ಮಶ್ರೀ ತಪೆÇೀರತ್ನ ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯರ ಹಾಗೂ ಶ್ರೀ ಶಂಭುಲಿಂಗ ಶಿವಾಚಾರ್ಯರ ಪವಿತ್ರ ಹಸ್ತದಿಂದ ಮೂರ್ತಿ ಪ್ರಾಣ ಪ್ರತಿμÁ್ಠಪನ ಕಾರ್ಯ ನೇರವೆರಿತು.
ಹಿರಿಯರ ಸಂಕಲ್ಪದಂತೆ ಗ್ರಾಮದ ಹಲವು ಭಕ್ತಾದಿಗಳ ಮನಸ್ಸಿನ ಇನ್ನೊಂದು ಅಪೇಕ್ಷೆಯನ್ನು ದೇವಸ್ಥಾನ ಕಮಿಟಿಯ ಅಧ್ಯಕ್ಷ ರಾಜಣ್ಣ ಭೀಮರಾವ ಹುಡುಗಿಕರ್ ಅವರ ಬಳಿ ದೇವಿಯ ಮೂರ್ತಿಗೆ ಬೆಳ್ಳಿ ಕಿರೀಟ ಮಾಡಿಸುವ ಇಚ್ಛೆ ವ್ಯಕ್ತ ಪಡಿಸಿದಾಗ ಇಡಿ ಗ್ರಾಮಕ್ಕೆ ದೇವಿಯ ಆಶೀರ್ವಾದ ಆಗುತ್ತದೆ ಎಂದರೆ ನಾನೇಕೆ ಬೇಡ ಎನ್ನಲ್ಲಿ ಎಂದು ಒಪ್ಪಿಕೊಂಡು ಮಹಾರಾಷ್ಟ್ರದ ಕೊಲ್ಹಾಪುರದ ಮಹಾಲಕ್ಷ್ಮಿಯ ದೇವಾಲಯದಲ್ಲಿರುವಂತೆ ದೇವಿಯ ಹಿಂದುಗಡೆ ಹಿತ್ತಾಳೆಯ ಪ್ರಭಾವಳಿ ಹಾಗೂ ಒಂದು ಕೆಜಿ ಬೆಳ್ಳಿಯ ಕಿರೀಟವನ್ನು ಹುಡುಗಿಕರ್ ಮನೆತನದಿಂದ ಭಕ್ತಿ ಸೇವೆ ಮಾಡಲು ಒಪ್ಪಿಕೊಂಡು ಸುಂದರವಾದ ಬೆಳ್ಳಿ ಕಿರೀಟವನ್ನು ಕೋಲ್ಹಾಪುರದಿಂದ ಮಾಡಿಸಿಕೊಂಡು ಬಂದಿದ್ದಾರೆ. ಹಣಕುಣಿ ಗ್ರಾಮದಲ್ಲಿ ಶನಿವಾರ ನಡೆದ ದೇವಿಯ ಜಾತ್ರೆ ಮಹೋತ್ಸವದಂದು ಶಿವಸಿದ್ಧ ಯೋಗಾಶ್ರಮ ಶಾಖಾ ಮುಕ್ತಿಮಠ ಸುಕ್ಷೇತ್ರ ಇಟಗಾದ ಪರಮ ಪೂಜ್ಯ ಶ್ರೀ ಮಹರ್ಷಿ ಧರ್ಮಶ್ರೀ ತಪೆÇೀರತ್ನ ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯರ ಹಾಗೂ ಪರಮಪೂಜ್ಯ ಶ್ರೀ ಶಂಭುಲಿಂಗ ಶಿವಾಚಾರ್ಯರು ಹಿರೇ ಮುನ್ನಳಿ ಇವರ ಅಮೃತ ಹಸ್ತದಿಂದ ಗ್ರಾಮದ ಭಕ್ತಾದಿಗಳ ಸಮ್ಮುಖದಲ್ಲಿ ಕಿರೀಟವನ್ನು ಮೆರವಣಿಗೆ ಮುಖಾಂತರ ದೇವಾಲಯಕ್ಕೆ ತಂದು ಲಕ್ಷ್ಮಿ ದೇವಿಗೆ ಬೆಳ್ಳಿ ಕಿರೀಟ ಧಾರಣ ಕಾರ್ಯಕ್ರಮ ಭಕ್ತಿ ಪೂರ್ವಕವಾಗಿ ನೆರವೇರಿಸಿದರು.
ಗ್ರಾಮದ ಹಿರಿಯರಾದ ಅಣ್ಣರಾವ್ ಮಾಲಿ ಪಾಟೀಲ, ಭದ್ರಪ್ಪ ಪದ್ಮನೋರ, ಮಡೆಪ್ಪ ಪದ್ಮನೋರ, ಮಾಧವರಾವ ಮಾಲಿ ಪಾಟೀಲ, ಕಾಶಣ್ಣ ಪರಿಟ್, ಮಲ್ಲಿನಾಥ್ ಸೇರಿಕರ್, ವಾಸುದೇವ ಕುಲಕರ್ಣಿ ಮಡಿವಾಳಯ್ಯ ಸ್ವಾಮಿ, ದೇವಿದಾಸ ಸುತಾರ್, ಗುರುನಾಥ್ ಸುತಾರ್, ರಾಜಪ್ಪ ಕರಗಾರ್, ಚಂದ್ರ ಕಾಂತ್ ಹುಡುಗಿಕರ್, ಜಗನ್ನಾಥ್ ಹಾಸರೆಡ್ಡಿ, ಶಾಂತಕುಮಾರ್ ಹುಡುಗಿಕರ್, ಸಿದ್ದಪ್ಪ ರಾಚರೆಡ್ಡಿ, ಕಲ್ಯಾಣ್ ರಾವ ಮಾಲಿ ಪಾಟೀಲ್, ತೀರ್ಥಯ್ಯ ಸ್ವಾಮಿ, ಬಸ್ತಿತೀರ್ಥಯ್ಯ ಸ್ವಾಮಿ, ಶಿವಯ್ಯ ಸ್ವಾಮಿ ಕಲ್ಲಯ್ಯ ಸ್ವಾಮಿ, ರವಿಕಾಂತ್ ರೆಡ್ಡಿ ಪ್ರಭು ರೆಡ್ಡಿ, ಶ್ರೀನಿವಾಸ ರೆಡ್ಡಿ, ಶಾಮರಾವ್ ಪರಿಟ್, ಗ್ರಾಮ ಪಂಚಾಯಿತಿ ಸದಾಸ್ಯರಾದ ಮಚೇಂದ್ರನಾಥ ಬೈಲಳ್ಳಿ, ಖಾಜಾ ಪಾಶಾ ಹಾಗೂ ಎಲ್ಲಾ ಸದಸ್ಯರು ಎಲ್ಲಾ, ಸಮುದಾಯದ ಜನರು ಭಾಗವಹಿಸಿದ್ದರು.