ಮಾಣಿಕನಗರ: ನೂತನ ಸುಸಜ್ಜಿತ ಓಪನ ಜಿಮ್ ಉಪಕರಣಗಳ ಉದ್ಘಾಟನೆ
ಹುಮನಾಬಾದ್: ಫೆ.27:ಕೇಂದ್ರದ ನವೀಕರಿಸಬಹುದಾದ ಇಂಧನ ಮೂಲ, ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವರ ಭಗವಂತ ಖುಬಾ ಅನುದಾನದ ಕೇಂದ್ರ ಸರ್ಕಾರದ ಯೋಜನೆಯ ಅಡಿಯಲ್ಲಿ ಸಮೀಪದ ಮಾಣಿಕನಗರದ ಶ್ರೀ ಮಾಣಿಕ ಪ್ರಭು ಆಟದ ಮೈದಾನದ ವಾಯು ವಿಹಾರದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ನೂತನ ಸುಸಜ್ಜಿತ ಓಪನ ಜಿಮ್ ಉಪಕರಣಗಳನ್ನು ಶಾಸಕ ಡಾ. ಸಿದ್ದಲಿಂಗಪ್ಪಾ ಪಾಟೀಲ ರವರು ಉದ್ಘಾಟಿಸಿದ್ದರು. ಬಳಿಕ ಕೆಲ ಹೊತ್ತು ಜನರೊಂದಿಗೆ ವಾಯು ವಿಹಾರದಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಕುಂಬಾರ, ಬಾಸಿದ್ ಕಮರ್, ಸಿದ್ದು ಚಕ್ಕಪಳ್ಳಿ, ಮಾಣಿಕ ರೆಡಿ, ಗಿರೀಶ ತುಂಬಾ, ರಾಕೇಶ ಪಾಟೀಲ, ಮಲ್ಲಿಕಾರ್ಜುನ ಕಿಟ್ಟಾ, ಶ್ರೀನಾಥ ದೇವಣಿ, ಸಂಜು ವಾಡೇಕರ್, ಕಿಶೋರ ನಟ್ಟಿ, ಇದ್ದರು.