ಭಾತಂಬ್ರಾದಲ್ಲಿ ಶರಣ ದರ್ಶನ ಪ್ರವಚನ ಪ್ರಾರಂಭ
ಭಾಲ್ಕಿ:ಫೆ.27:ತಾಲೂಕಿನ ಭಾತಂಬ್ರಾ ಗ್ರಾಮದಲ್ಲಿ ಹಾನಗಲ್ ಗುರುಕುಮಾರ ಶಿವಯೋಗಿಗಳ 94ನೆಯ ಪುಣ್ಯ ಸ್ಮರಣೆ ಮತ್ತು ನಮ್ಮೂರ ಹಬ್ಬ-2024 ಅಂಗವಾಗಿ ಶರಣ ದರ್ಶನ ಪ್ರವಚನ ಪ್ರಾರಂಭಗೊಂಡಿದೆ ಎಂದು ಜಗದ್ಗುರು ನಿರಂಜನ ಸಂಸ್ಥಾನ ಮಠದ ಜಗದ್ಗುರು ಶಿವಯೋಗೀಶ್ವರ ಸ್ವಾಮೀಜಿ ತಿಳಿಸಿದ್ದಾರೆ.
ಮಾ.6 ರಿಂದ 8ರ ವರೆಗೆ ಹಾನಗಲ್ ಕುಮಾರ ಶಿವಯೋಗಿಗಳ ಪುಣ್ಯಸ್ಮರಣೆ, ಮಹಿಳಾ ಗೋಷ್ಠಿ, ಸಾಧಕರಿಗೆ ಸನ್ಮಾನ, ಗ್ರಂಥ ಬಿಡುಗಡೆ, ಪಲ್ಲಕ್ಕಿ ಉತ್ಸವ, ರಥೋತ್ಸವ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
ಪ್ರಯುಕ್ತ ಫೆ.24 ರಿಂದ ಮಾ.6ರ ವರೆಗೆ ಶರಣ ದರ್ಶನ ಪ್ರವಚನ ನಡೆಯಲಿದೆ. ಕೃಷ್ಣಾಪೂರದ ಡಾ.ಗುರುಬಸವ ದೇವರು ಅವರು ಪ್ರತಿದಿನ ರಾತ್ರಿ 8 ಗಂಟೆಯಿಂದ 10 ಗಂಟೆ ವರೆಗೆ ಪ್ರವಚನ ನಡೆಸಿ ಕೊಡುತ್ತಿದ್ದಾರೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸದುಪಯೋಗ ಪಡೆದುಕೊಳ್ಳುವಂತೆ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.