ಅಪಘಾತಕ್ಕೆ ಆಹ್ವಾನ ನೀಡುತ್ತಿರುವ ಗುಂಡಿ
ಯಡ್ರಾಮಿ:ಫೆ.27:ತಾಲೂಕಿನಿಂದ ಅರಳಗುಂಡಗಿ ಗ್ರಾಮಕ್ಕೆ ಹೋಗುವ ಮುಖ್ಯ ರಸ್ತೆಯ ಮೂಲೆಯಲ್ಲಿ ಗುಂಡಿಯೊಂದು ಬಾಯ್ತೆರೆದುಕೊಂಡಿದೆ.ನಿತ್ಯ ಸಂಚಾರ ಮಾಡುವ ಸಂಚಾರಿಗಳಿಗೆ ಅಪಘಾತ ಗುಂಡಿಯಾಗಿ ನಿರ್ಮಾಣವಾಗಿದೆ ಎಂದು ದಲಿತ ಸೇನೆ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಕಲಕೇರಿ ಅವರು ಆಕ್ರೋಷ ವ್ಯಕ್ತಪಡಿಸಿದ್ದಾರೆ.
ಯಡ್ರಾಮಿ ತಾಲೂಕಿನಿಂದ ಅರಳಗುಂಡಗಿ ಮಾರ್ಗದ ಮಾದ ಹಳ್ಳದ ಮುಖ್ಯ ಸೇತುವೆ ಮೇಲೆ
ಭಯಾನಕ ಗುಂಡಿ ಬಿದ್ದು ವರ್ಷಗಳೇ ಕಳೆದರು ಕೂಡ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ನಿರ್ಲಕ್ಷವಹಿಸಿದ್ದಾರೆ.
ಅರಳಗುಂಡಗಿ ಹಾಗೂ ಕೋಣಸಿರಸಗಿ,ನೇದಲಗಿ, ಮೋರಟಗಿ ಗ್ರಾಮಕ್ಕೆ ಹೋಗವ ಸಾರ್ವಜನಿಕ ವಾಹನ ಸವಾರರು ಹಲವಾರು ಬಾರಿ ಶಾಸಕರಿಗೂ ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಗೆ ಮನವಿ ಮಾಡಿದರು ಯಾವುದೇ ಕ್ರಮ ಇಲ್ಲ ಎಂದು ಆರೋಪಿಸಿದರು.
ಈ ಭಯಾನಕ ಗುಂಡಿಯಿಂದ ಯಾವುದೇ ಅನಾಹುತ ಸಂಭವಿಸಿದಲ್ಲಿ ನೇರ ಹೊಣೆಗಾರರು ಲೋಕೋಪಯೋಗಿ ಇಲಾಖೆ ಹಾಗೂ ಕ್ಷೇತ್ರದ ಶಾಸಕ ಅಜಯಸಿಂಗ್ ಅವರು ಆಗುತ್ತಾರೆ ಎಂದು ಅಧಿಕಾರಿಗಳಿಗೆ ಮತ್ತು ಶಾಸಕರಿಗೆ ಎಚ್ಚರಿಕೆ ನೀಡಿದ್ದಾರೆ.
ಯಡ್ರಾಮಿ ತಾಲೂಕಿನ ಬಹುತೇಕ ಗ್ರಾಮ ರಸ್ತೆಗಳು ಸಂಪೂರ್ಣ ಹಾಳಾಗಿದ್ದರು ಕೂಡ ಕ್ಷೇತ್ರದ ಶಾಸಕರು ನಿರ್ಲಕ್ಷಿಸುತ್ತಿದ್ದು ಹೀಗೆ ಮುಂದಿನ ದಿನಮಾನದಲ್ಲಿ ಮುಂದುವರಿದರೆ.ಕ್ಷೇತ್ರದ ಶಾಸಕ ಅಜಯಸಿಂಗ್ ಅವರ ವಿರುದ್ಧ ಹಾಗೂ ಯಡ್ರಾಮಿ ಆಡಳಿತದ ವಿರುದ್ಧ ತಾಲೂಕು ಬಂದ ಮಾಡಿ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ತಿಳಿಸಿದ್ದಾರೆ.