ಬೀದಿಬದಿ ವ್ಯಾಪಾರಸ್ಥರ ಸಂಘದಿಂದ ಮೆರವಣಿಗೆ; ಪ್ರತಿಭಟನೆ
ಸಂಜೆವಾಣಿ ವಾರ್ತೆ
ದಾವಣಗೆರೆ. ಫೆ.27; ಜಕಾತಿಯನ್ನು ಖಾಸಗಿಯವರಿಗೆ ನೀಡಿರುವುದನ್ನು ವಿರೋಧಿಸಿ ನಗರದ ಕೆ.ಆರ್.ಮಾರುಕಟ್ಟೆಯಿಂದ ಬೀದಿ ಬದಿ ವ್ಯಾಪಾರಸ್ಥರ ಸಂಘದ ಸದಸ್ಯರು ಮೆರವಣಿಗೆ ನಡೆಸಿದರು.ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಇಸ್ಲಾಂ ಸಾಬ್ ಮಾತನಾಡಿ ಪಾಲಿಕೆಯು ಬೀದಿ ಬದಿ ವ್ಯಾಪಾರಸ್ಥರಿಂದ ಜಕಾತಿ ವಸೂಲಿ ಮಾಡುವುದನ್ನು ಖಾಸಗಿ ಅವರಿಗೆ ವಹಿಸಬಾರದು, ವಸೂಲಿ ಮಾಡಿದ ಜಕಾತಿಗೆ ಬಿಲ್ ನೀಡಬೇಕು, ಬೀದಿ ಬದಿ ವ್ಯಾಪಾರಸ್ಥರಿಗೆ ಮೀಸಲಿಟ್ಟ ಕಲ್ಯಾಣ ನಿಧಿಯನ್ನು ನೈಜ್ಯ ವಾಪಾರಸ್ಥರಿಗೆ ಬಳಸಬೇಕು ಎಂಬ ಘೋಷಣೆಗಳನ್ನು ಮೆರವಣಿಗೆಯಲ್ಲಿ ಕೂಗಲಾಯಿತು. ಮೆರವಣಿಗೆಯಲ್ಲಿ ಭಾರತಿ, ಪೂಜಾ, ಮಲ್ಲಪ್ಪ ಇತರರು ಇದ್ದರು.