ಸಿದ್ದಮ್ಮ ಪಾರ್ಕ ಬೆಂಚ್‌ಗಳಿಗೆ ಸುಣ್ಣ-ಬಣ್ಣ

ಸಂಜೆವಾಣಿ ವಾರ್ತೆ
ದಾವಣಗೆರೆ: ಫೆ.27: ದಾವಣಗೆರೆ ಕೆ.ಬಿ ಬಡಾವಣೆಯ ಬಳ್ಳಾರಿ ಸಿದ್ದಮ್ಮ ಪಾರ್ಕನಲ್ಲಿರುವ ಈ ಹಿಂದೆ ದಾನಿಗಳು ನೀಡಿದ 32 ಕ್ಕೂ ಹೆಚ್ಚು ಬೆಂಚ್‌ಗಳು ಮತ್ತು ಕುಟೀರಕ್ಕೆ ದಾನಿಗಳು ನೀಡಿದ ಬಣ್ಣದಿಂದ ಶೃಂಗಾರಗೊಂಡಿವೆ. ಇತ್ತೀಚೆಗೆ ಪಾರ್ಕ ಅಭಿವೃದ್ದಿ ಸಮಿತಿಯ ಸದ್ಯಸರು  ಮುರುಗೇಶಪ್ಪ ಅವರನ್ನು ಭೇಟಿಯಾಗಿ ಪಾರ್ಕನ ಸಮಸ್ಯೆಯ ಬಗ್ಗೆ ವಿವರಿಸಿದಾಗ ಬೆಂಚ್‌ಗಳು ಮತ್ತು ಕುಟೀರಕ್ಕೆ ಬೇಕಾಗುವ ಬಣ್ಣವನ್ನು ಉಚಿತವಾಗಿ ನೀಡಿ ತಮ್ಮ ಔರ‍್ಯತೆಯನ್ನು ಮೆರೆದಿದ್ದಾರೆ. ಪಾರ್ಕ ಅಭಿವೃದ್ದಿ ಸಮಿತಿಯ ಸದ್ಯಸರುಗಳಾದ  ಎಂ. ಕುಬೇರಪ್ಪ, ಮಾಜಿ ಕಾಪೋರೇಟರ್ ಸುರೇಂದ್ರಮೊಯ್ಲಿ, ಆಕಾಶ್ ಪ್ರಿಂರ‍್ಸನ್ ಟಿ ಸುರೇಶ್,  ಉದಯಸಿಂಗ್,  ಬಿ.ಎಂ ಅರುಣ್‌ಕುಮಾರ್ ರೆಡ್ಡಿ, ಬಾಲಾಜಿ ಗೋಲ್ಡ್ ಸತ್ಯನಾರಾಯಣ್,  ಸತ್ಯನಾರಾಯಣ್ ಶೆಟ್ರು, ರಮೇಶ್ ಆಡಿಟರ್, ಪಾಂಡುರAಗ್‌ರಾವ್ ಇಂಜಿನಿಯರ್, ಕರಿಸಿದ್ದಪ್ಪ, ಕೋರಿ ಹಿರಿಯಣ್ಣ, ಷಡಕಪ್ಪ ವಡ್ಡನಹಳ್ಳಿ, ಕೆ,ಇ.ಬಿ ಸತ್ಯನಾರಾಯಣ್‌ರಾವ್, ಕೆ.ಜಿ. ಮಹೇಶಣ್ಣ ಮುಂತಾದವರು ಹಿರಿಯ ನಾಗರೀಕರು ಸೇರಿ  ಮುರುಗೇಶ್‌ಪ್ಪ ಅವರಿಗೆ ಶಾಲು ಹೊದಿಸಿ ಹಾರ ಹಾಕುವುದರ ಮೂಲಕ ಅವರ ಮನೆಗೆ ತೆರಳಿ ಅಭಿನಂದಿಸಿದರು.