ಅಪರಾಧ ಪ್ರಕಾರಗಳನ್ನು ತಡೆಗಟ್ಟಲು ಸಿಸಿಟಿವಿ ಅಳವಡಿಕೆಗೆ ಒತ್ತಾಯ

ಸಂಜೆವಾಣಿ ವಾರ್ತೆ
ಹರಿಹರ ಫೆ 27;  ನಾಗರೀಕರ ಸಂರಕ್ಷಣೆ ಹಾಗೂ ಅಪರಾಧಿಕ ಚಟುವಟಿಕೆಗಳ ನಿಯಂತ್ರಣಕ್ಕೆ ಹರಿಹರ ನಗರದಲ್ಲಿ ಸಿಸಿಟಿವಿ ಅಳವಡಿಕೆಗೆ 1 ಕೋಟಿ ರೂ. ಅನುದಾನ ಮೀಸಲಿಡಲು ಒತ್ತಾಯಿಸಿ  ಜಿಲ್ಲೆಯ ಅಪಾರ ಜಿಲ್ಲಾ ಅಧಿಕಾರಿಗಳಿಗೆ ಮನವಿ ನೀಡಿದರು. ದಾವಣಗೆರೆ ಜಿಲ್ಲೆ  2ನೇ ದೊಡ್ಡ ನಗರ, ದಕ್ಷಿಣ ಕಾಶಿ,  ಕೈಗಾರಿಕ ನಗರವಾಗಿ ಹರಿಹರ ಗುರುತಿಸಿಕೊಂಡಿದೆ. ಭೌಗೋಳಿಕವಾಗಿ ರಾಜ್ಯದ ಮಧ್ಯ ಭಾಗದಲ್ಲಿರುವ ಹರಿಹರ ನಗರದೊಳಗೆ ಹೊಸಪೇಟೆ-ಶಿವಮೊಗ್ಗ ಮತ್ತು ಬೀರೂರು-ಸಮ್ಮಸಗಿ ಹೆದ್ದಾರಿ ಹಾದು ಹೋಗಿದೆ. ನಗರದ ಹೊರವಲಯದಲ್ಲಿ ರಾಷ್ಟ್ರೀಯ ಹೆದ್ದಾರಿ ಇದೆ, ಪೂನಾ-ಬೆಂಗಳೂರು ರೈಲು ಮಾರ್ಗವಿದೆ.ಇಲ್ಲಿನ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣಕ್ಕೆ ನಿತ್ಯ 1800 ಬಸ್ಸುಗಳು ಬಂದು ಹೋಗುತ್ತದೆ. ಎರಡೂ ಹೆದ್ದಾರಿಗಳಲ್ಲಿ ನಿತ್ಯ ಅಂದಾಜು 15-20 ಸಾವಿರ ಭಾರಿ ವಾಹನಗಳು ಸಂಚರಿಸುತ್ತವೆ. ಇದೆಲ್ಲದರ ಪರಿಣಾಮವಾಗಿ ಸಹಜವಾಗಿ ಇಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗಿದೆ, ಹೊಸಪೇಟೆ-ಶಿವಮೊಗ್ಗ ಹೆದ್ದಾರಿಯಂತೂ ಕಿಲ್ಲರ್ ರಸ್ತೆ ಎಂದೆ ಕುಖ್ಯಾತಿ ಪಡೆದಿದೆ.ಬೈಕ್ ಗಳ ಕಳ್ಳತನ, ಮನೆ, ಅಂಗಡಿಗಳ ಕಳ್ಳತನವೂ ಗಣನೀಯವಾಗಿ ನಡೆದಿದೆ. ಇಲ್ಲಿನ ಬೀರೂರು-ಸಮ್ಮಸಗಿ ಹೆದ್ದಾರಿಯಲ್ಲಿರುವ ಹಲವಾರು ಬ್ಯಾಂಕುಗಳ ಹೊರಭಾಗದಲ್ಲಿ ಲಕ್ಷಾಂತರ ರೂ. ನಗದನ್ನು ಕಳ್ಳರು ಅಮಾಯಕ ನಾಗರೀಕರಿಂದ ಎಗರಿಸಿದ್ದಾರೆ. ಸಿಗ್ನಲ್ ಜಂಪ್, ವಾಹನ ಚಾಲಕರಿಂದ ದುಡುಕಿನ ಚಾಲನೆ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿವೆ.ಈ ಎಲ್ಲಾ ಸಮಸ್ಯೆಗಳ ನಿಯಂತ್ರಣಕ್ಕೆ ನಗರದ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮರಾಗಳ ಅಳವಡಿಕೆ ಪರಿಹಾರವಾಗಿದೆ. ಏಳೆಂಟು ವಷಱ ಕೆಲವು ಸರ್ಕಲ್ ಗಳಲ್ಲಿ ಸಿಸಿಟಿವಿ ಕ್ಯಾಮರಾಗಳ ಅಳವಡಿಕೆ ಮಾಡಲಾಗಿತ್ತು, ಆದರೆ ಅವುಗಳ ನಿರ್ವಹಣೆ ಮಾಡಲಾಗದೆ ಅವುಗಳೆಲ್ಲಾ ನಿರುಪಯುಕ್ತವಾಗಿ ಹೋಗಿವೆ.ನಗರದ ಅಂದಾಜು ಒಂದುಕಾಲು ಲಕ್ಷ ಜನರ ಸುರಕ್ಷತೆಗಾಗಿ ನಗರದ ಹತ್ತಾರು ಆಯಕಟ್ಟಿನ ಸ್ಥಳಗಳಲ್ಲಿ ಆಧುನಿಕ ಹಾಗೂ ಉತ್ತಮ ಸಾಮರ್ಥ್ಯದ ಸಿಸಿಟಿವಿ ಕ್ಯಾಮರಾಗಳ ಅಳವಡಿಕೆ ಮಾಡಬೇಕಿದೆ. ಇದಕ್ಕಾಗಿ ಹರಿಹರ ನಗರಸಭೆಯ 2024-25ನೇ ಸಾಲಿನ ಬಜೆಟ್ ಶೀಘ್ರವೇ ಮಂಡನೆ ಆಗಲಿದೆ. ಸದರಿ ಬಜೆಟ್ ನಲ್ಲಿ ಈ ಕಾರ್ಯಕ್ಕಾಗಿ ಕನಿಷ್ಟ 1 ಕೋಟಿ ರೂ. ಅನುದಾನವನ್ನು ಮೀಸಲಿಡಲು ನಗರಸಭೆಯ ಆಡಳಿತಾಧಿಕಾರಿಗಳೂ ಆಗಿರುವ ತಾವು ಸೂಚಿಸಬೇಕೆಂದು ಈ ಮೂಲಕ ತಮ್ಮಲ್ಲಿ ಹರಿಹರದ ನಾಗರೀಕರ ಪರವಾಗಿ ಮನವಿ ಮಾಡಿಕೊಳ್ಳುತ್ತೇವೆ .ರಾಜ್ಯ ಉಪಾಧ್ಯಕ್ಷರು ನಾಗರಾಜ್ ಭಂಡಾರಿ, ತಾಲೂಕಾ ಅಧ್ಯಕ್ಷ ರಘುಲ್ ಮೆಹರವಾಡೆ, ತಾಲೂಕು ಗೌರವ ಅಧ್ಯಕ್ಷರು ಪ್ರವೀಣ್ ಜಿ ವಿ, ರಿಷಬ್ ರಾಜ್, ಲಿಂಗರಾಜ್ ದಾವಣಗೆರೆ, ಗಣೇಶ್ ಬಿ, ಹರೀಶ್ ಇಂಡಿ, ಉಮೇಶ್ ಎ ಬಿ, ಪ್ರವೀಣ್ ಕುಮಾರ್, ಪವನ್ ಕುಮಾರ್ ಹೆಚ್ ಬಿಇತರರು ಇದ್ದರು