ವೈ.ಎ ನಾರಾಯಣಸ್ವಾಮಿ ಪರ ಮತಯಾಚನೆ

ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಫೆ.೨೭: ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕರ ಹಿತ ಕಾಪಾಡಲು ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ವೈ.ಎ ನಾರಾಯಣಸ್ವಾಮಿಯವರನ್ನು ಬೆಂಬಲಿಸುವಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ವಿಶ್ರಾಂತ ಕಾರ್ಯದರ್ಶಿಗಳಾದ ಎಂ. ರೇವಣಸಿದ್ದಪ್ಪ ಮನವಿ ಮಾಡಿದರು. ಅವರು ಸೋಮವಾರ ಹಿರಿಯೂರು (ತಾ) ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ಇಲ್ಲಿಗೆ ಭೇಟಿ ನೀಡಿ ವೈ.ಎ ನಾರಾಯಣಸ್ವಾಮಿ ಪರ ಮತಯಾಚನೆ ಮಾಡಿ ಬೆಂಬಲಿಸುವAತೆ ಕೋರಿದರು. ಈ ಸಂದರ್ಭದಲ್ಲಿ ಚಿತ್ರದುರ್ಗ ಮಹಾರಾಣಿ ಕಾಲೇಜಿನ ವಿಶ್ರಾಂತ ಪ್ರಾಚಾರ್ಯ ಬಸವರಾಜ್, ಚಿನ್ನರಾಜು, ರಾಮಚಂದ್ರಪ್ಪ ಮತ್ತಿತರರಿದ್ದರು.