ಭಕ್ತಿಭಾವದ ಕರ್ಪೂರದಾರತಿ

ಸಂಜೆವಾಣಿ ವಾರ್ತೆ
ಹಿರಿಯೂರು.ಫೆ.೨೭ :  ನಗರದ ಸುಪ್ರಸಿದ್ಧ ದಕ್ಷಿಣ ಕಾಶಿ ಶ್ರೀ ತೇರು ಮಲ್ಲೇಶ್ವರ ಸ್ವಾಮಿಯ ಜಾತ್ರೆ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ಕರ್ಪೂರದಾರತಿ ಪೂಜಾ ಕಾರ್ಯಕ್ರಮವು ಭಕ್ತಿ ಭಾವದಿಂದ ಜರುಗಿತು. ಮೊದಲನೆ ಆರತಿ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರಾದ  ಆರ್ ನಾಗೇಂದ್ರ ನಾಯ್ಕ್. ಒಂದು ಲಕ್ಷ ಐವತೈದು ಸಾವಿರ ರೂಪಾಯಿಗಳಿಗೆ ಕೂಗಿ ನೆರವೇರಿಸಿದರು ಎರಡನೆ ಆರತಿ  ಮಹಂತೇಶ್ ವಕೀಲರು  ಎಪ್ಪತ್ತಾರು ಸಾವಿರ ರೂಪಾಯಿಗಳಿಗೆ ಕೂಗಿ ನೆರವೇರಿಸಿದರು. ಮೂರನೇ ಆರತಿ ಗೂಯಿಲಾಳು ಮಹಂತೇಶ್ ರವರು ಅರವತ್ತು ಸಾವಿರ ರೂಪಾಯಿಗಳಿಗೆ ಕೂಗಿ ನೆರವೇರಿಸಿದರು ನಂತರ ಅನೇಕ ಸುಮಂಗಲೆಯರು ಕರ್ಪೂರದಾರತಿ ಕಾರ್ಯಕ್ರಮವನ್ನು ನಡೆಸಿದರು ತಹಶೀಲ್ದಾರ್ ರಾಜೇಶ್ ಕುಮಾರ್ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಸಾವಿರಾರು ಭಕ್ತ ಜನಸ್ತೋಮ ಈ ಸಂದರ್ಭದಲ್ಲಿ ನೆರೆದಿದ್ದರು.