ಉಪಾಧ್ಯಕ್ಷರ ಅವಿರೋಧ ಆಯ್ಕೆ
ಸಂಜೆವಾಣಿ ವಾರ್ತೆ
ನಂಜನಗೂಡು: ಫೆ.27:- ತಾಲ್ಲೂಕಿನ ಉಪಾಧ್ಯಾಯರ ಸಹಕಾರ ಸಂಘದ ನೂತನ ಉಪಾಧ್ಯಕ್ಷರಾಗಿ ಎಸ್.ಸನ್ಮತಿ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಜಯಲಕ್ಷ್ಮಿ ಘೋಷಿಸಿದರು.
ತಾಲ್ಲೂಕು ಸಹಕಾರ ಸಂಘದ ಅಧ್ಯಕ್ಷ ಶಿವಲಿಂಗಯ್ಯ, ಬಿ.ಆರ್.ಸಿ ಬಾಲರಾಜು ಶಿ,ಸಂ, ಅಧ್ಯಕ್ಷ ಧರ್ಮರತ್ನಾಕರ, ಜಿಲ್ಲಾ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ಹೆಚ್.ಎಸ್.ಮಹೇಶ್, ರಂಗನಾಥನ್ ಎಂ.ಎ. ರಾಜುಸ್ವಾಮಿ, ಸಿದ್ದೇಶ್, ರಾಜೇಂದ್ರ, ಹನುಮಂತನಾಯಕ, ಎಂ.ಎಸ್.ಶ್ರೀಪತಿ, ಗೋಪಾಲ್ ರಾವ್, ಜಯಪಾಲ ಸಹಕಾರ ಸಂಘದ ಸಿಬ್ಬಂದಿಗಳಾದ ಕೃಷ್ಣಸ್ವಾಮಿ, ಗೋಪಿ, ಗಣೇಶ ಕಾರ್ಯದರ್ಶಿ ಶಿವಕುಮಾರ್ ಎಲ್ಲರು ಶುಭ ಕೋರಿದರು.