ಪ್ರತಾಪ್ ಸಿಂಹ ರವರಿಗೆ ಕ್ರಿಶ್ಚಿಯನ್ ಸಮುದಾಯದಿಂದ ರೈಲಿಗೆ ಮನವಿ
ಸಂಜೆವಾಣಿ ನ್ಯೂಸ್
ಮೈಸೂರು: ಫೆ.27:- ಕ್ರಿಶ್ಚಿಯನ್ ಸಮುದಾಯದ ಪುಣ್ಯ ಕ್ಷೇತ್ರ ವೆಲಂಕಣಿ ತಮಿಳುನಾಡಿನ ನಾಗಪಟ್ಟಿಣಂ ಜಿಲ್ಲೆಗೆ ಮೈಸೂರು -ವೆಲಂಕಣಿ ನೇರ ರೈಲಿಗೆ ಮನವಿ ಮೈಸೂರು ಡಿವಿಜನ್ ಕ್ಯಾಥೋಲಿಕ್ ಕ್ರಿಶ್ಚಿಯನ್ ಅಸೋಸಿಯೇಷನ್(ರಿ)ಹಾಗೂ ಮೈಸೂರು ಧರ್ಮ ಪ್ರಾಂತ್ಯ ಕ್ರೈಸ್ತಜನರ ಅಭಿವೃದ್ಧಿ ಸಂಘ(ರಿ) ಸಂಘದ ಅಧ್ಯಕ್ಷರು ಜೆ.ಸ್ಟೀಫನ್ ಸುಜೀತ್ ಸಂಸದರ ಜೊತೆ ದೂರವಾಣಿ ಮುಕಾಂತರ ಸಂಭಾಷಣೆ ಮಾಡಿ ಅವರ ನಿರ್ದೇಶನದಂತೆ ಅವರ ಕಚೇರಿಯಲ್ಲಿ ಸಂಸದರ ಆಪ್ತ ಸಹಾಯಕರ ಬಳಿ ಮನವಿ ಪತ್ರವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಸಂಸದರ ಆಪ್ತ ಸಹಾಯಕ ರಾಜು, ಸಂಘದ ಅಧ್ಯಕ್ಷರು ಜೆ.ಸ್ಟೀಫನ್ ಸುಜೀತ್,ಸಂಘದ ಪದಾಧಿಕಾರಿಗಳು ಎಲ್ವಿನ್,ಜಾನ್ ಫರ್ನಾಂಡಿಸ್ ಬೆನ್ನ,ಅಂಬ್ರುಸ್ ಜಾರ್ಜ್, ಮರಿಯಾ ಫ್ರಾನ್ಸಿಸ್,ಸ್ಟಾಲಿನ ಜಿಗ್ಲೆರ್, ಪ್ರಶಾಂತ್ ಆರೋಗ್ಯ ರಾಜ್, ಸಂತೋಷ್ ಮತ್ತು ಹಿರಿಯ ನಾಗರೀಕರಾದ ಸವರಿದಾಸ್ ಡಾಮಿನಿಕ್, ಮರಿ ಜೋಸೆಫ್, ಚಿನ್ನಪ್ಪ, ಫೇಡ್ರಿಕ್ ಡಿಸೋಜಾ, ಸೈಮನ್ ಉಪಸ್ಥಿತರಿದ್ದರು.