ಗ್ರಾಮೀಣ ಕ್ರೀಡೆಗಳನ್ನು ಉಳಿಸಿ: ಶಾಸಕ ಮಂಜು
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಫೆ.27: ನಮ್ಮ ಪೂರ್ವಜರು ನೀಡಿರುವ ಹಾಗೂ ಅಳಿವಿನ ಅಂಚಿನಲ್ಲಿರುವ ಗ್ರಾಮೀಣ ಪ್ರದೇಶದ ಕ್ರೀಡೆಗಳನ್ನು ಉಳಿಸಿ ನಮ್ಮ ಮುಂದಿನ ತಲೆಮಾರಿಗೂ ತೆಗೆದುಕೊಂಡು ಹೋಗುವ ಕೆಲಸವನ್ನು ನಾವುನೀವೆಲ್ಲರೂ ಮಾಡಬೇಕಿದೆ ಎಂದು ಶಾಸಕ ಹೆಚ್.ಟಿ.ಮಂಜು ಕರೆ ನೀಡಿದರು.
ಅವರು ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಸೋಮನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಲಗೋರಿ ಫೆಡರೇಷನ್ ಆಫ್ ಇಂಡಿಯಾ ಮತ್ತು ಕರ್ನಾಟಕ ರಾಜ್ಯ ಲಗೋರಿ ಅಸೋಷಿಯೇಷನ್ ಮತ್ತು ಮಂಡ್ಯ ಜಿಲ್ಲಾ ಲಗೋರಿ ಅಸೋಷಿಯೇಷನ್ ಸಹಯೋಗದಿಂದ ರಾಜ್ಯಮಟ್ಟದ ಲಗೋರಿ ಪಂದ್ಯಾವಳಿಗಳನ್ನು ಉದ್ಘಾಟಿಸಿ ಮಾತನಾಡಿದರು.
ನಾವೆಲ್ಲರೂ ಚಿಕ್ಕ ವಯಸ್ಸಿನಿಂದಲೂ ಲಗೋರಿ, ಚಿನ್ನಿದಾಂಡು, ಕಬ್ಬಡ್ಡಿ, ಗೋಲಿ, ಮರಕೋತಿ, ಬುಗುರಿ, ಹರಳುಮಣೆ, ಚೌಕಾಬಾರ, ಅಣ್ಣೆಕಲ್ಲು ಸೇರಿದಂತೆ ಹಲವಾರು ಗ್ರಾಮೀಣ ಆಟಗಳನ್ನು ಆಡಿದ ಪರಿಣಾಮ ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಂತನಾಗಿದ್ದೇವೆ. ಅಳಿವಿನ ಅಂಚಿನಲ್ಲಿರುವ ಈ ಗ್ರಾಮೀಣ ಪ್ರದೇಶದ ಅಪರೂಪದ ಕ್ರೀಡೆಗಳು ನಮ್ಮ ಪೂರ್ವಜರ ಕೊಡುಗೆಗಳಾಗಿದ್ದು ಅವುಗಳನ್ನು ಉಳಿಸಿ ನಾವು ನಮ್ಮ ಮುಂದಿನ ತಲೆಮಾರಿಗೂ ಕೊಂಡೋಯ್ಯುವ ಕೆಲಸ ಮಾಡಬೇಕು. ಗ್ರಾಮೀಣ ಕ್ರೀಡೆಗಳನ್ನು ಪೆÇ್ರೀತ್ಸಾಹಿಸುವ ದೃಷ್ಟಿಯಿಂದ ರಾಷ್ಟ್ರ ಮಟ್ಟದಿಂದಲೂ ಲಗೋರಿ ಅಸೋಷಿಯೇಷನ್ ಸ್ಥಾಪನೆ ಮಾಡಿದ್ದು. ಇಂದು ಸುಮಾರು 26 ಕ್ಕೂ ಹೆಚ್ಚು ತಂಡಗಳು ಭಾಗವಹಿಸಿರುವುದು ಸಂತಸ ತಂದಿದೆ. ಶಿಕ್ಷಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಕ್ರೀಡೆ ಅಳವಡಿಸಿದಾಗ ಆಧುನಿಕ ಶಿಕ್ಷಣ ಪದ್ದತಿಗೆ ಅವಶ್ಯಕವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಹಾಸನ ಡಿಡಿಪಿಐ ಜವರೇಗೌಡ, ತಹಶೀಲ್ದಾರ್ ನಿಸರ್ಗಪ್ರಿಯ, ಆರ್,ಟಿ.ಓ ಮಲ್ಲಿಕಾರ್ಜುನ್, ಲಗೋರಿ ಫೆಡರೇಷನ್ ಆಫ್ ಇಂಡಿಯಾ ಸಂಸ್ಥಾಪಕ ದೊಡ್ಡಣ್ಣ ಬರಮೇಲು, ರಾಜ್ಯ ಪ್ರಾ.ಶಾ.ಶಿಕ್ಷಕರ ಸಂಘದ ಉಪಾದ್ಯಕ್ಷ, ಎಲ್.ಎಸ್.ಧರ್ಮಪ್ಪ, ತಾಲ್ಲೂಕು ಕಸಾಪ ಅಧ್ಯಕ್ಷ ಪೂರ್ಣಚಂದ್ರತೇಜಸ್ವಿ, ತಾಲ್ಲೂಕು ಎಸ್ಸಿಎಸ್ಟಿ ನೌಕರರ ಸಂಘದ ಅಧ್ಯಕ್ಷ ಕಟ್ರಯೋಗೇಶ್, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಪಿ.ಬಿ.ನಾಗರಾಜು, ಜಿಲ್ಲಾ ಲಗೋರಿ ಅಸೋಷಿಯೇಷನ್ ಅಧ್ಯಕ್ಷ ಜಿ.ಜೆ.ತುಳಸಿರಾಮ, ತಾಲ್ಲೂಕು ಅಧ್ಯಕ್ಷ ಜಿ.ಎಸ್.ಮಂಜು, ಗೌರವಾದ್ಯಕ್ಷ ಸಂತೇಬಾಚಹಳ್ಳಿರಂಗಸ್ವಾಮಿ, ಪ್ರಧಾನ ಕಾರ್ಯದರ್ಶಿ ಎಂ.ಎಸ್.ಮಹೇಶ್ ಕುಮಾರ್, ಖಜಾಂಚಿ ಕೆ.ಟಿ.ಹೇಮಣ್ಣ, ಉಪಾದ್ಯಕ್ಷ ಅಣ್ಣಯ್ಯ, ಬಿ.ಆರ್.ರಮೇಶ, ಎಂ.ನೇತ್ರಾವತಿ, ಸಹಕಾರ್ಯದರ್ಶಿ ಶಿವಪ್ರಕಾಶ್, ಗೀತ ಸಂಘಟನಾ ಕಾರ್ಯದರ್ಶಿ ಎಸ್.ಸಿ.ಬಸವರಾಜು, ಮಹದೇವಸ್ವಾಮಿ, ಬೋಜೇಗೌಡ, ವಿಮಲ, ಚನ್ನಕೇಶವ, ಮಂಜುನಾಥ, ಸುರೇಶ, ಪ್ರೇಮ್‍ಕುಮಾರ್ ಸೇರಿದಂತೆ ನೂರಾರು ಕ್ರೀಡಾಸಕ್ತರು ಭಾಗವಹಿಸಿದ್ದರು.