ವಿಜಯಪುರ, ಆಲಮಟ್ಟಿ ವಿವಿಧ ರೇಲ್ವೆ ನಿಲ್ದಾಣಗಳ ಪುನರಾಭಿವೃದ್ದಿಗೆ ಪ್ರಧಾನಮಂತ್ರಿ ಚಾಲನೆ: ಸಂಸದ ರಮೇಶ ಜಿಗಜಿಣಗಿ
ಸಂಜೆವಾಣಿ ವಾರ್ತೆ,
ವಿಜಯಪುರ,ಫೆ.27:ದೇಶದ ಪ್ರಧಾನಮಂತ್ರಿಗಳು ಸಾಮಾಜಿಕ ಜಾಲತಾಣ ಮೂಲಕ ಅಮೃತ ಭಾರತ ಯೋಜನೆ ಮೂಲಕ ದೇಶದ ವಿವಿಧ ನಿಲ್ದಾಣಗಳ ಪುನರಾಭಿವೃದ್ದಿ, ರಸ್ತೆ ಮೇಲ್ಸೇತುವೆ ಹಾಗೂ ಕೆಳಸೇತುವೆಗಳ ಸಮರ್ಪಣೆ, ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿದ್ದು, ದೇಶದ ರೈಲು ನಿಲ್ದಾಣಗಳು ಅತ್ಯಾಧುನಿಕ ತಂತ್ರಜ್ಞಾನದಿಂದ ಸುಂದರ, ಸ್ವಚ್ಚ ಅಂತರಾಷ್ಟ್ರೀಯ ಗುಣಮಟ್ಟದ ಸಾರ್ವಜನಿಕರಿಗೆ ಉತ್ತಮ ಮೂಲಭೂತ ಸೌಕರ್ಯಗಳಿಂದ ಕೂಡಿದ ರೈಲು ನಿಲ್ಧಾಣವಾಗಿ ರೂಪಗೊಳ್ಳಲಿದೆ ಎಂದು ಸಂಸದ ರಮೇಶ ಜಿಗಜಿಣಗಿ ಅವರು ಹೇಳಿದರು.
ಸೋಮವಾರ ನಗರದ ರೈಲ್ವೆ ನಿಲ್ಧಾಣದಲ್ಲಿ ಏರ್ಪಡಿಸಿದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹುಬ್ಬಳ್ಳಿ ವಿಭಾಗದ ನವೀಕರಣಗೊಂಡಿರುವ 7 ನಿಲ್ಧಾಣಗಳು ಮತ್ತು ಮೇಲ್ಸೇತುವೆ ಹಾಗೂ ಕೆಳಸೇತುವೆಗಳ ಶಂಕುಸ್ಥಾಪಣೆ ಹಾಗೂ ಉದ್ಘಾಟನೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಮಂತ್ರಿಗಳು ಲೋಕಾರ್ಪಣೆಗೊಳಿಸಿದ್ದಾರೆ. ಜಿಲ್ಲೆಯ ವಿಜಯಪುರ ಮತ್ತು ಆಲಮಟ್ಟಿ ರೇಲ್ವೆ ನಿಲ್ದಾಣಗಳ ಪುನರ್‍ಅಭಿವೃದ್ದಿಗೆ ಶಂಕು ಸ್ಥಾಪನೆ ಹಾಗೂ ಮಿಂಚನಾಳ, ಕ್ಯಾತನಕೇರಿ ಮತ್ತು ನಿಂಬಾಳ ರೇಲ್ವೆ ಅಂಡರ್‍ಪಾಸ್‍ಗಳನ್ನು ಇಂದು ಸಮರ್ಪಿಸಲಾಗಿದೆ ಎಂದು ಹೇಳಿದರು.
ವಿಜಯಪುರ ಜಿಲ್ಲೆಗೆ ಈಗಾಗಲೇ ಗದಗ ವರೆಗೆ ದ್ವಿಪಥÀ ಹಳಿಗಳ ಜೋಡಣೆ ಹಾಗೂ ರೈಲ್ವೆ ವಿದ್ಯುದ್ದೀಕರಣಕ್ಕೆ ಕ್ರಮಕೈಗೊಳ್ಳಲಾಗಿದೆ. ರೈಲುಗಳ ದಟ್ಟಣೆಯನ್ನು ಸರಳೀಕರಣಗೊಳಿಸಲು ಅಲಿಯಾಬಾದ ಹತ್ತಿರ ಗೂಡ್‍ಶೆಡ್‍ನ್ನು ನಿರ್ಮಿಸಿ ಕಾರ್ಯಾರಂಭವಾಗಿವೆ. ಇನ್ನೂ ಹೆಚ್ಚು ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು ಎಂದು ಅವರು ಹೇಳಿದರು.
ಅಮೃತ್ ಭಾರತ ಯೋಜನೆ ಸ್ಕೀಂ ಅಡಿ ರೈಲ್ವೇ ಸ್ಟೇಷನ ಸ್ಥಿತಿ ಗತಿ ಕುರಿತು ವಿವಿಧ ಶಾಲಾ ಮಕ್ಕಳಿಗಾಗಿ ಪ್ರಬಂಧ ಸ್ಪರ್ಧೆ ಹಾಗೂ ಇತರ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ರೈಲ್ವೆ ಇಲಾಖೆ ಸೀನಿಯರ್ ಡಿವಿಜಿನಲ್ ಪರ್ಸನಲ್ ಆಫೀಸರ್ ಆಸೀಫ ಹಫೀಜ್, ಅಡಿಷನಲ್ ಡಿವಿಜನ್ ರೈಲ್ವೇ ಮ್ಯಾನೇಜರ್ ಸಂಜಯಕುಮಾರ ಸಿಂಗ್, ಸ್ಟೇಷನ್ ಮಾಸ್ಟರ್ ಪಿ.ಟಿ ನಾಯಕ, ವಿ.ಬಿ ಗ್ರಾಮಪುರೋಹಿತ ರೈಲ್ವೆ ಸಿಬ್ಬಂದಿಗಳು ಹಾಗೂ ಇತರರು ಉಪಸ್ಥಿತರಿದ್ದರು.
