ಯುವಕರೇ ಭಾರತ ದೇಶದ ಭವಿಷ್ಯ:ನ್ಯಾ.ಪಾಟೀಲ
ತಾಳಿಕೋಟೆ:ಫೆ.27: ಮಕ್ಕಳಲ್ಲಿ ಯಾವ ಯಾವ ಭಲವಾದ ಆಸೆ ಹುಟ್ಟುತ್ತದೆಯೋ ಆ ಆಸೆ ಚಿಗುರಿ ದೊಡ್ಡದಾಗಿ ಗಿಡವಾಗಿ ಮರವಾಗಿ ಅದು ಸ್ವಚ್ಚವಾಗಿ ಪರಿಣಮಿಸುತ್ತದೆ ಅಂತಹ ಯುವಕರ ಪ್ರತಿಭೆಯನ್ನು ಗುರುತಿಸಿ ಶಿಕ್ಷಣವನ್ನು ನೀಡಿದರೆ ಭವ್ಯ ಭಾರತದ ಕನಸ್ಸು ನನಸಾಗಲಿಕ್ಕೆ ಸಾದ್ಯವೆಂದು ಕರ್ನಾಟಕ ರಾಜ್ಯ ಲೋಕಾಯುಕ್ತ ನ್ಯಾಯ ಮೂರ್ತಿ ಬಿ.ಎಸ್.ಪಾಟೀಲ(ಪಡೇಕನೂರ) ಅವರು ಹೇಳಿದರು.
ಶನಿವಾರರಂದು ತಾಲೂಕಿನ ನಾವದಗಿ ಗ್ರಾಮದ ರಾಜಗುರು ಶ್ರೀ ಪರ್ವತೇಶ್ವರ ಸಂಸ್ಥಾನ ಬೃಹನ್ ಮಠದ ಶ್ರೀ ರಾಜೇಂದ್ರ ಒಡೆಯರ ದೇವರ ಗುರು ಪಟ್ಟಾಧಿಕಾರ ಮಹೋತ್ಸವದ ಅಂಗವಾಗಿ ಆಯೋಜಿಸಲಾದ ಬೃಹತ್ ಯುವ ಜನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ಮಕ್ಕಳು ಹೀಗಾಗಬೇಕೆಂದು ಕನಸ್ಸು ಕಂಡಿದ್ದರೆ ಅದು ಹಾಗೆ ಆಗತ್ತದೆ ನಾನು ಈ ಮಾತನ್ನು ಹಲವಾರು ಯುನವರ್‍ಸಿಟಿಗಳಿಗೆ ಬೆಟ್ಟಿ ನೀಡಿದಾಗ ವಿಧ್ಯಾರ್ಥಿಗಳಿಗೆ ಹೇಳಿದ್ದೇನೆ ಅದರಂತೆ ನಮ್ಮ ಹಳ್ಳಿ ಮಕ್ಕಳಿಗೆ ಅವಶ್ಯವೆಂದು ಹೇಳುತ್ತಿದ್ದೇನೆ ಮನಸ್ಸು ಅನ್ನುವದು ಬಹಳ ಪ್ರಭಾವಶಾಲಿಯಾದಂತಹ ಸಾಧನ ಮತ್ತು ಅಸ್ತ್ರವಾಗಿದೆ ದೇವರು ಇಂತಹ ಸಾಮಥ್ರ್ಯ ಯಾವ ಜೀವಿಗೂ ಕೊಟ್ಟಿಲ್ಲಾ ಆದರೆ ದೇವರು ಮನುಷ್ಯರಿಗಾಗಿ ಭಲವಾದ ರೀತಿಯಲ್ಲಿ ಕೊಟ್ಟಿದ್ದಾನೆ ಆ ಮನಸ್ಸಿನ ಮೂಲಕ ನಾವು ವಿಚಾರಗಳನ್ನು ಮಾಡುತ್ತೇವೆ ಆ ವಿಚಾರಕ್ಕೆ ಅನುಗುಣವಾಗಿ ನಾವು ಕರ್ತುಗಳನ್ನು ಮಾಡುತ್ತೇವೆ ಕಾರ್ಯಗಳನ್ನು ಮಾಡುತ್ತೇವೆ ಮನಸ್ಸು, ವಿಚಾರಗಳು ಅದರಂತೆ ನಮ್ಮ ವಾಯುವಂತೆ ಈಗ ನಮ್ಮ ಕಾಯಕದಲ್ಲಿ ಕೈಲಾಸ ಕಾಣಬೇಕೆಂದರೆ ಆ ಕಾಯಕ ಏನು ಯಾವ ಕಾರ್ಯವನ್ನು ನಾವು ಮಾಡಬೇಕೆನ್ನುತ್ತೇವೆ ಅದನ್ನು ಮನಸ್ಸಿನಲ್ಲಿ ಮನನ ಮಾಡಬೇಕು ಯಾಕೆಂದರೆ ಅದು ವಿಚಾರದ ಶಕ್ತಿ ಏನಿದೆಯಲ್ಲಾ ಅದು ಮನಸ್ಸಿನಲ್ಲಿ ಮತ್ತೆ ಮತ್ತೆ ಪುನರ್ ಬರಬೇಕು ಈ ವಿಚಾರಗಳನ್ನು ಪದೇ ಪದೇ ಪ್ರತಿದ್ವನಿಸಿದಾಗ ಸಾಧಿಸಬೇಕೆಂಬ ಛಲ ಮುಟ್ಟಲು ಸಾದ್ಯವಾಗುತ್ತದೆ ಇದರಿಂದ ಅವನನ್ನು ಮುನ್ನುಗ್ಗಿಸುವದರ ಜೊತೆಗೆ ಹೆಚ್ಚು ಹೆಚ್ಚು ಕೆಲಸ ಮಾಡಲು ಪ್ರೇರೆಪಿಸುತ್ತದೆ ಇದರಿಂದ ಆತ ಗುರಿ ಮುಟ್ಟುವವರೆಗೆ ನಿಲ್ಲದೇ ಗುರಿಯನ್ನು ಮುಟ್ಟುತ್ತಾನೆಂದರು. ವಿದ್ಯಾರ್ಥಿಗಳು ತಮ್ಮ ವಿಚಾರ ಶಕ್ತಿಯನ್ನು ಸಮರ್ಥಿಸಿಕೊಳ್ಳಬೇಕು ತಂದೆ ತಾಯಂದಿರರು ಕಷ್ಟ ಪಟ್ಟು ಶಾಲೆಗೆ ಕಳುಹಿಸುತ್ತಾರೆ ಇದನ್ನು ಅರ್ಥೈಸಿಕೊಂಡು ವಿದ್ಯಾರ್ಥಿಗಳು ಮುನ್ನಡೆಯಬೇಕು ಎಂದರು. ನಾನು ಶಾಲೆ ಕಲಿಯುವಾಗ ನಮ್ಮ ಊರಿನಲ್ಲಿಯ ಶಾಲೆಯ ಸ್ವಂತ ಬಿಲ್ಡಿಂಗ್ ಇರಲಿಲ್ಲಾ ನನ್ನ ತಂದೆತಾಯಿ ನಿತ್ಯ ನನಗೆ ಶಾಲೆಗೆ ಕಳುಹಿಸಿ ಹೊಲದಲ್ಲಿ ಕಷ್ಟ ಪಟ್ಟು ಕೆಲಸ ಮಾಡುತ್ತಿದ್ದರು ಇದನ್ನು ನೋಡಿದ ನಾನು ನನ್ನನ್ನು ಶಾಲೆಗೆ ಕಳುಹಿಸಿ ತಂದೆ ತಾಯಿ ಇಷ್ಟೊಂದು ಕಷ್ಟ ಪಡುತ್ತಿದ್ದಾರಲ್ಲಾ ನಾನು ಓದಬೇಕು ಕಷ್ಟಪಟ್ಟು ಸಾದಿಸಬೇಕು ಎಂದು ಪದೇ ಪದೇ ಮನಸ್ಸಿನಲ್ಲಿ ಹೊಳೆಯುತ್ತಿತ್ತು ಅಂತಹ ಭಲವಾದ ಛಲದೊಂದಿಗೆ ನಾನು ಪಿಯುಸಿಯವರೆಗೆ ಕನ್ನಡ ಮಿಡಿಯಂನಲ್ಲಿ ಕಲಿತೆ ನಂತರ ಕರ್ನಾಟಕ ಯುನವರ್ ಸಿಟಿ ಕಾಲೇಜ್ ಸೇರಿಕೊಂಡೆ ಇಂಗ್ಲೀಷ ಮೀಡಿಯಂ ವಿಷಯ ಆಯ್ಕೆ ಮಾಡಿಕೊಂಡೆ ಸಾಕಷ್ಟು ಜನರು ನನಗೆ ಬೈಯುತ್ತಿದ್ದರು ಕನ್ನಡ ಮೇಡಂ ಕಲಿತು ಇಂಗ್ಲೀಷ ಯಾಕೆ ತೊಗೊಂಡೆ ಎನ್ನುತ್ತಿದ್ದರು. ಆದರು ನನ್ನ ಛಲ ಬಿಡಲಿಲ್ಲಾ ಇದರಿಂದ ಅಂದು ಇಡೀ ಯುನವರ್‍ಸಿಟಿಗೆ ಕರ್ನಾಟಕಕ್ಕೆ ಪಸ್ಟ್ ಕ್ಲಾಸ್‍ನಲ್ಲಿ ಬಂದೆ ಇದು ಯಾಕೆ ಹೇಳುತ್ತೇನೆ ಎಂದರೆ ನನ್ನ ಗುರಿ ಅಚಲವಾಗಿತ್ತು ಅದಕ್ಕಾಗಿ ಸಾಧನೆಯ ಮೇಟ್ಟಿಲು ನಿಶ್ಚಳವಾಗಿ ಹತ್ತುತ್ತಾ ಹೋದೆ ಎಂದು ತಮ್ಮ ಜೀವನದ ಇತಿಹಾಸವನ್ನು ವಿವರಿಸಿದ ಅವರು ನಮ್ಮ ಹಳ್ಳಿಯ ಜನರು ಚೆನ್ನಾಗಿ ಇರಬೇಕು ಎಂಬುದಾಗಿದ್ದರೆ ನಮ್ಮಲ್ಲಿ ಮೊದಲು ಕನಸುಗಳಿರಬೇಕು ಆ ದಿಶೆಯಲ್ಲಿ ಪ್ರಯತ್ನ ಮಾಡಬೇಕು ಎಂದ ಅವರು ಇಂದಿನ ಯುವಕರು ದುಶ್ಚಟಗಳಿಗೆ ಬಲಿಯಾಗುತ್ತಾ ಸಾಗಿದ್ದಾರೆ ಯಾಕೆಂದರೆ ನಮ್ಮಲ್ಲಿ ಇಚ್ಚೆ ಎಂಬುದು ಇರಬೇಕು ನಾನು ಕಲಿಬೇಕು ನಾನು ಆರೋಗ್ಯವಂತನಾಗಬೇಕು ಎಲ್ಲರೊಂದಿಗೆ ನಾನು ಪ್ರೀತಿ ವಿಸ್ವಾಸಬೆಳೆಸಿಕೊಳ್ಳಬೇಕು ಅಂದಾಗ ಮಾತ್ರ ತುಂಬಾ ಜಾಣ್ಮೆ, ಕಳೆ, ಪ್ರೀತಿಗೆ ಪಾತ್ರವಾದಂತಹ ವ್ಯಕ್ತಿಯಾಗಿ ರೂಪಿಸಿಕೊಳ್ಳಲಿದ್ದಾರೆಂದ ಅವರು ಯಾವುದೋ ಒಂದು ಕೆಲಸಕ್ಕೆ ಹೋದಾಗ ಅಧಿಕಾರಿಗಳು ದುಡ್ಡು ಕೇಳುತ್ತಾರೆ ಸಾವಿರ ಕೇಳಿದರೆ ಐದನೂರಕ್ಕೆ ಬಗೆಹರಿಸಿಕೊಳ್ಳುತ್ತೀರಿ ಹತ್ತು ಸಾವಿರ ಕೇಳಿದರೆ ಐದು ಸಾವಿರಕ್ಕೆ ಬಗೆ ಹರಿಸಿಕೊಂಡು ಕೆಲಸ ಮಾಡಿಸಿಕೊಂಡು ಬರುತ್ತೀರಿ ಆದರೆ ಯಾರೂ ಕೂಡಾ ನಾನು ದುಡ್ಡು ಕೊಡುವದಿಲ್ಲಾ ಕೆಲಸ ಮಾಡದ್ದರೆ ನಾನು ಲೋಕಾಯುಕ್ತಕ್ಕೆ ಹೋಗುತ್ತೇನೆ ಕಂಪ್ಲೇಟ್ ಹಾಕುತ್ತೇನೆಂದು ಹೇಳುವದಿಲ್ಲಾ ಇಡೀ ವ್ಯವಸ್ಥೆಯನ್ನು ಕರೆಪ್ಶನ್ ಮಾಡಲಿಕ್ಕೆ ಅವಕಾಶ ಮಾಡಿಕೊಡುತ್ತಾ ಬಂದಿದ್ದೀರಿ ಇದರಿಂದ ವ್ಯವಸ್ಥೆಯನ್ನು ಇನ್ನಷ್ಟು ಹಾಳು ಮಾಡುತ್ತಾ ಬಂದಿದ್ದೀರಿ ಇದನ್ನು ಯಾವತ್ತಿಗೂ ಮಾಡಬೇಡಿ ಯಾರು ಕೆಲಸ ಮಾಡುವದಿಲ್ಲಾ ಅಂತವರ ಮೇಲೆ ನಿರ್ದಾಕ್ಷೀಣ ಲೋಕಾಯುಕ್ತಗೆ ಕಂಪ್ಲೇಟ್ ಮಾಡಿ ಜಿಲ್ಲೆಯಿಂದ ರಾಜ್ಯದವರೆಗೂ ಲೋಕಾಯುಕ್ತ ಬಲಿಷ್ಠವಾಗಿದೆ ಅಂತಹ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳುತ್ತದೆ ಎಂದರು.
ಸಮಾರಂಭದ ದಿಕ್ಸೂಚಿ ಭಾಷಣಕಾರರಾಗಿ ಆಗಮಿಸಿದ ತಾಳಿಕೋಟೆ ಶ್ರೀ ಖಾಸ್ಗತೇಶ್ವರ ಮಠದ ಬಾಲ ಶಿವಯೋಗಿ ಶ್ರೀ ಸಿದ್ದಲಿಂಗ ದೇವರು ಮಾತನಾಡಿ ಬಧುಕಿದ್ದಾಗ ನಾನು ಏನಾದರೂ ಮಾಡುತ್ತೇನೆ ಎಂಬ ಛಲವಿರಬೇಕು ಹಳ್ಳಿಯಲ್ಲಿ ಹುಟ್ಟಿದರೇನಾಯ್ತು ಬಡತನದಲ್ಲಿ ಹುಟ್ಟಿದ್ದರೇನಾಯ್ತು ಈ ಸಾಧನೆ ಮಾಡುವ ವಯಸ್ಸು ಕಳೆದು ಹೋದರೆ ಮತ್ತೇ ಸಿಗುವದಿಲ್ಲಾ ಇದನ್ನು ವಿಧ್ಯಾರ್ಥಿಗಳು ವಿಚಾರ ಮಾಡಬೇಕು ದೇಶದ ಬೆನ್ನೇಲು ಎಂದರೆ ಯೋಧ ಮತ್ತು ರೈತ ಆಗಿದ್ದಾರೆ ರೈತ ಇಲ್ಲದಿದ್ದರೆ ಮಣ್ಣು ತಿನ್ನಬೇಕಾಗುತ್ತದೆ ಯೋಧ ಇಲ್ಲ ಎಂದರೆ ಮಣ್ಣು ಸೇರಬೇಕಾಗುತ್ತದೆ ಇದನ್ನು ಎಲ್ಲರೂ ತಿಳಿದುಕೊಳ್ಳಬೇಕು ಯುವಕರು ಮನೆಯ ಮಗನಾಗಿ ಬಧುಕು ನಡೆಸುವಂತೆ ಬಧುಕಬಾರದು ದೇಶದ ಮಗನಾಗಿ ಬಧುಕುವಂತೆ ಆಗಬೇಕು ಅಂದಾಗ ನಿಜವಾದ ಮಗನಾಗಿ ಬಧುಕಲು ಸಾಧ್ಯವಾಗಲಿದೆ ಎಂದರು. ನಮ್ಮದೇ ತಾಲೂಕಿನ ಪಡೇಕನೂರ ಗ್ರಾಮದಲ್ಲಿ ಹುಟ್ಟಿ ರಾಜ್ಯ ಲೋಕಾಯುಕ್ತ ನ್ಯಾಯಮೂರ್ತಿಗಳಾಗಿ ಕೆಲಸ ಮಾಡುತ್ತಿರುವ ಬಿ.ಎಸ್.ಪಾಟೀಲ ಅವರನ್ನು ಆದರ್ಶವನ್ನಾಗಿಟ್ಟುಕೊಂಡು ಯುವಕರು ಮುನ್ನಡೆದರೆ ಜೀವನದಲ್ಲಿ ಸಾಧನೆಯ ಜೊತೆಗೆ ಸಾರ್ಥಕ ಬಧುಕನ್ನು ಕಾಣಲು ಸಾಧ್ಯವೆಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾವದಗಿ ಬೃಹನ್ ಮಠದ ಶ್ರೀ ರಾಜೇಂದ್ರ ಒಡೆಯರ ದೇವರು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಕೋಡೇಕಲ್ಲ ದುರದುಂಡೇಶ್ವರ ಮಠದ ಶ್ರೀ ಶಿವಕುಮಾರ ಮಹಾಸ್ವಾಮಿಗಳು, ಚಬನೂರಿನ ಶ್ರೀ ರಾಮಲಿಂಗಯ್ಯ ಮಹಾಸ್ವಾಮಿಗಳು, ಪುರಾಣ ಪ್ರವಚನಕಾರ ವೇ.ಶಶಿಧರ ಶಾಸ್ತ್ರೀಗಳು, ಮೊದಲಾದವರು ಇದ್ದರು.