ವರ್ಷಕ್ಕೊಮ್ಮೆಯಾದರೂ ಹೃದಯ, ಕಿಡ್ನಿ, ನರರೋಗಗಳ ತಪಾಸಣೆ ಮಾಡಿಸಿಕೊಳ್ಳಿ: ಡಾ. ವಿರುಪಾಕ್ಷ
ಸಂಜೆವಾಣಿ ವಾರ್ತೆ,
ವಿಜಯಪುರ, ಫೆ.27: ಹೃದಯˌಕಿಡ್ನಿ ಮತ್ತು ನರರೋಗಳ ಕುರಿತು ವರ್ಷಕ್ಕೋಮ್ಮೆಯಾದರೂ ತಪಾಸಣೆ ನಡೆಸಿಕೊಳ್ಳುವುದರಿಂದ ಜೀವಹಾನಿ ತಪ್ಪಿಸಲು ಸಾಧ್ಯ ಎಂದು ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ಸೂಪರ್ ಸ್ಪೇμÁಲಿಟಿ ಆಸ್ಪತ್ರೆಯ ನರಶಾಸ್ತ್ರ ವಿಭಾಗದ ಡಾ. ವಿರುಪಾಕ್ಷ ಹೇಳಿದ್ದಾರೆ.
ಇಚಿಡಿ ತಾಲೂಕಿನ ಹೊರ್ತಿ ಗ್ರಾಮದಲ್ಲಿ ಬಿ.ಎಲ್.ಡಿ. ಇ ಸೂಪರ್ ಸÉ್ಪೀಶಾಲಿಟಿ ಆಸ್ಪತ್ರೆˌಹೊರ್ತಿ ಪ್ರಾಥಮಿಕ ಆರೋಗ್ಶ ಕೇಂದ್ರ, ಹೊರ್ತಿ ಗ್ರಾಮ ಪಂಚಾಯತಿ ಮತ್ತು ಪಿ.ಕೆ.ಪಿ.ಎಸ್ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಅವರು ಮಾತನಾಡಿದರು.
ಹೃದಯ, ಕಿಡ್ನಿ ಮತ್ತು ನರಗಳು ದೇಹದ ಪ್ರಮುಖ ಅಂಗಗಳು. ಇವುಗಳ ಆರೋಗ್ಯವನ್ನು ನಿರ್ಲಕ್ಷ್ಯಿಸಬಾರದು. ಈ ಅಂಗಗಳಿಗೆ ತೊಂದರೆಯಾದರೆ ಮನುಷ್ಶ£ Àಜೀವಕ್ಕೆ ಅಪಾಯ ಇರುತ್ತದೆ. ಹೀಗಾಗಿ ಈ ಮಾರಕ ಕಾಯಿಲೆಗಳ ಕುರಿತು ಜಾಗೃತಿಯಾಗಿರಬೇಕು. ಅಲ್ಲದೇ, ಜನರು ವರ್ಷಕ್ಕೊಮ್ಮೆಯಾದರೂ ತಪಾಸಣೆಗೆ ಒಳಪಡಬೇಕು ಎಂದು ಹೇಳಿದರು.
ಬಿ.ಎಲ್.ಡಿ.ಇ ಸೂಪರ್ ಸ್ಪೇμÁಲಿಟಿ ಆಸ್ಪತ್ರೆಯ ಡಾ. ಮಿಲಿಂದˌಡಾ. ಧ್ರುವˌ ಡಾ. ಸಾಯಿಸಿದ್ದಾರ್ಥ ರೋಗಿಗಳ ಆರೋಗ್ಯ ತಪಾಸಣೆ ನಡೆಸಿದರು. ಶುಶ್ರೂಷಕ ಸಿಬ್ಬಂದಿಯಾದ ಶಶಿಕಾಂತˌದ್ರಾಕ್ಷಾಯಿಣಿ ಶಟಗಾರ, ಆಶಾ ಕಾರ್ಯಕರ್ತೆಯರುˌಪ್ರಯೋಗಾಲಯ ಸಿಬ್ಬಂದಿ ವೈದ್ಯರಿಗೆ ನೆರವಾದರು. ಈ ಶಿಬಿರದಲ್ಲಿ ಹೃದ್ರೋಗ ಸಮಸ್ಯೆಯ 54, ನರಸಂಬಂಧಿ ಕಾಯಿಲೆಯ 69, ಕಿಡ್ನಿಸಮಸ್ಯೆ 74 ರೋಗಿಗಳು ಸೇರಿದಂತೆ ಸುಮಾರು 200ಕ್ಕೂ ಹೆಚ್ಚು ರೋಗಿಗಳ ಆರೋಗ್ಯ ತಪಾಸಣೆ ನಡೆಸಲಾಯಿತು.
ಜಿ. ಪಂ. ಮಾಜಿ ಸದಸ್ಯ ಮಹಾದೇವ ಪೂಜಾರಿ(ಗಡ್ಡದ) ಶಿಬಿರ ಉದ್ಘಾಟಿಸಿದರು. ಗ್ರಾ. ಪಂ. ಅಧ್ಶಕ್ಷೆ ಜಯಶ್ರೀ ಬೋಸಗಿ ಅಧ್ಯಕ್ಷತೆ ವಹಿಸಿದ್ದರು.
ಉಪಾಧ್ಯಕ್ಷ ಶರಣಬಸಪ್ಪ ಡೊಳ್ಳಿ, ಆರ್.ಎಂ. ಓಡಾ. ಅಶೋಕ ಕೋರೆ, ಹೊರ್ತಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಎಂಒ ಡಾ. ಜಹನಕಟವಟ್ಟೆ, ಪಿ.ಕೆ.ಪಿ.ಎಸ್. ಮುಖ್ಯಕಾರ್ಯ ನಿರ್ವಹಣಾಧಿಕಾರಿ ಅಣ್ಣಾರಾಯ ಪೂಜಾರಿ, ಡಾ. ಸೋಮು ಪೂಜಾರಿ, ಬಿ.ಎಲ್.ಡಿ.ಇ ಸೂಪರ್ ಸ್ಪೇμÁಲಿಟಿ ಆಸ್ಪತ್ರೆಯ ಶಾಂತೇಶ ಸಲಗಾರೆ, ಶ್ರೀಕಾಂತ ಪೂಜಾರಿ, ಪಿ.ಕೆ.ಪಿ.ಎಸ್ ಸಿಬ್ಬಂದಿ ರೇವಣಸಿದ್ದ ನಿಂಬಾಳೆ, ಕುಮಾರ ದಶವಂತ, ಶಿವಾನಂದ ಬನ್ನಿ, ಅಜೀತ ಪೂಜಾರಿ, ಲಕ್ಷ್ಮಣ್ಣ ಕವಸಾಪೂರ, ಮಲ್ಲು ಕೋಳಿ, ಅಣ್ಣಾಸಾಹೇಬ ಇಂಡಿˌ ಅನೀಲ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.
ಸಾಮಾಜಿಕ ಕಾರ್ಯಕರ್ತ ಪ್ರೀತು ದಶವಂತ ಸ್ವಾಗತಿಸಿದರು. ಪಿ.ಆರ್.ಎ. ಚನ್ನಬಸವ ಕೊಟಗಿ ವಂದಿಸಿದರು.