ಸಮಸ್ಯೆಗಳ ಮನವಿಗೆ ಸ್ಪಂದಿಸಲು ಸೂಚನೆ
ಕೋಲಾರ,ಸೆ,೧೬-ದಿವ್ಯಾಂಗರು ಸಮಾಜದಲ್ಲಿ ಎದುರಿಸುತ್ತಿರುವ ನಾನಾ ಸಮಸ್ಯೆಗಳ ನ್ನು ಬಗೆಹರಿಸಲು, ಜಿಲ್ಲಾ ಕಾನೂನು ಸೇವಗಳ ಪ್ರಾಧಿಕಾರಕ್ಕೆ ಮನವಿಯನ್ನು ಸಲ್ಲಿಸಿದರೆ, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ಈಡೇರಿಸುವ ಕೆಲಸವನ್ನು ಮಾಡಲಾಗುತ್ತದೆ ಎಂದು ಜಿಲ್ಲಾ ಕಾನೂನು ಸೇವಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಮೂರ್ತಿ ಸುನಿಲ್ ಎಸ್ ಹೊಸಮನಿ ಮನವಿ ಮಾಡಿದರು.
ನಗರದ ಪತ್ರಕರ್ತರ ಭವನದ ಎದುರು ಬೆನ್ನು ಉರಿ ವಿಶೇಷ ಚೇತನ ಕ್ಷೇಮಾಭಿವೃದ್ಧಿ ಸಂಘ, ದಿ ಅಸೋಸಿಯೇಷನ್ ಆಫ್ ಪೀಪಲ್ ವಿಥ್ ಡಿಸೆಬಿಲಿಟಿ ಎಪಿಡಿ ಕೋಲಾರ, ಎಚ್ಸಿಎಲ್ ಫೌಂಡೇಶನ್ ಬೆಂಗಳೂರು, ಸ್ವಾಭಿಮಾನಿ ವಿಕಲಚೇತನ ಕ್ಷೇಮಾಭಿವೃದ್ಧಿ ಸಂಘ, ಸ್ವರ್ಣ ಭೂಮಿ ಫೌಂಡೇಶನ್, ಎಸ್ ಸಿ ಐ ನವಜೀವನ ಸೇವಾ ಸಂಸ್ಥೆ ಬೆಂಗಳೂರು, ರೋಟರಿ ನಂದಿನಿ, ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಕೋಲಾರ, ಕರ್ಬಾಜ್ ಮಾಗಡಿ ಇನಾಟಿ ಫೌಂಡೇಶನ್ ಬೆಂಗಳೂರು ಆಶ್ರಯದಲ್ಲಿ ವಿಶ್ವ ಬೆನ್ನು ಹುರಿ ಅಪಘಾತ ದಿನಾಚರಣೆ ಹಾಗೂ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ವಿಶ್ವ ಬೆನ್ನುಹುರಿ ಅಪಘಾತ ದಿನಾಚರಣೆ ಕಾರ್ಯಕ್ರಮ ಯಶಸ್ವಿಯಾಗಲು ಅರಿವು ಜಾಗೃತಿ ಬಹು ಮುಖ್ಯವಾಗಿರಬೇಕು, ಕಾರ್ಯಕ್ರಮವನ್ನು ಮೂರು ಜಿಲ್ಲೆಗಳಲ್ಲಿ ಪ್ರಾರಂಭವಾಗಿದ್ದು, ರಾಜ್ಯದಲ್ಲಿ ಮುಂದೆ ಈ ಕಾರ್ಯಕ್ರಮಗಳು ಯಶಸ್ವಿಗೊಳಿಸುವಂತೆ ಮಾಡಿಕೊಳ್ಳೋಣ ಎಂದು ತಿಳಿಸಿದರು.
ದಿವ್ಯಾಂಗರು ಕಾರ್ಯಕ್ರಮದ ಅರಿವು ಪಡೆದುಕೊಂಡು, ಜಾಗೃತರಾಗಬೇಕು ಈ ನಿಟ್ಟಿನಲ್ಲಿ ಸಮಾಜದಲ್ಲಿ ನೆಮ್ಮದಿ ಜೀವನ ಸಾಧಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಇನ್ನು ನಗರದ ಪತ್ರಕರ್ತರ ಭವನದ ಎದುರು ದಿವ್ಯಾಂಗರು ವೀಲ್ ಚೇರ್ಗಳ ಮೂಲಕ ಪತ್ರಕರ್ತರ ಭವನದಿಂದ ಕೆಎಸ್‌ಆರ್ಟಿಸಿ ಬಸ್ ನಿಲ್ದಾಣದ ವೃತ್ತದವರೆಗೂ ಜಾತ ನಡೆಸಿ ಅರಿವು ಮೂಡಿಸಿ, ದಿವ್ಯಾಂಗರು ಎನ್ನುವ ಅನುಕಂಪ ಬೇಡ ನಮಗೆ ಅವಕಾಶವನ್ನು ನೀಡಿ ಎಂದು ಘೋಷ ವಾಕ್ಯಗಳನ್ನು ಕೂಗುತ್ತಾ ಜಾಥಾದಲ್ಲಿ ಸಾಗಿದ್ದು ವಿಶೇಷವಾಗಿತ್ತು.
ಜಾಥಾದಲ್ಲಿ ಎಚ್ವಿ ಚನ್ನಕೃಷ್ಣಪ್ಪ, ಪ್ರಶಾಂತ್ ಕುಮಾರ್ ಎಂ, ಹೆನ್ರಿ ಜೋಸೆಫ್, ಶೆರಾನ್ ಮ್ಯಾಥ್ಯ, ಶಿವಕುಮಾರ್, ಸುಪ್ರೀಂ, ಸುಧಾ ಬಿಎನ್ ಗಿರಿಜಾ ಎನ್ ಇದ್ದರು.