ಸನಾತನ ಪರಂಪರೆಯಡಿ ನಡೆದ ಭವ್ಯ ಶೋಭಾಯಾತ್ರೆ
ತಾಳಿಕೋಟೆ:ಸೆ.೧೬: ಪಟ್ಟಣದ ತಿಲಕ ರಸ್ತೆಯಲ್ಲಿ ಹಿಂದೂ ಮಹಾ ಗಣಪತಿ ಮಹಾ ಮಂಡಳಿಯ ವತಿಯಿಂದ ಪ್ರತಿಷ್ಠಾಪಿಸಲಾದ ಗಣೇಶ ಮೂರ್ತಿಯ ವಿಸರ್ಜನಾ ಮೇರವಣಿಗೆಯ ಭವ್ಯ ಶೋಭಾಯಾತ್ರೆಯು ರವಿವಾರರಂದು ಸನಾತನ ಧರ್ಮ ಸಂಸ್ಕೃತಿ, ಸಂಸ್ಕಾರದAತೆ ಜರುಗಿತು.
ಭವ್ಯ ಶೋಭಾಯಾತ್ರೆಗೆ ಹಿಂದೂ ಮಹಾ ಗಣಪತಿ ಮಹಾ ಮಂಡಳಿಯ ಗೌರವಾಧ್ಯಕ್ಷರಾದ ಗುಂಡಕನಾಳ ಹಿರೇಮಠದ ಶ್ರೀ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಗೌರವ ಉಪಾಧ್ಯಕ್ಷ ಕೆಸರಟ್ಟಿಯ ಶ್ರೀ ಸೋಮಲಿಂಗ ಮಹಾ ಸ್ವಾಮಿಗಳು, ಗೌರವ ಕಾರ್ಯದರ್ಶಿ ವೇ.ಸಂತೋಷಬಟ್ ಜೋಶಿ, ಮತ್ತು ಬಿಜೆಪಿ ಜಿಲ್ಲಾ ಅಧ್ಯಕ್ಷ ಆರ್.ಎಸ್.ಪಾಟೀಲ(ಕೂಚಬಾಳ) ಅವರು ಮಹಾ ಪೂಜಾ ಕಾರ್ಯಕ್ರಮವನ್ನು ನೇರವೇರಿಸಿ ಚಾಲನೆ ನೀಡಿದರು.
ದಶಮಾನೋತ್ಸವ ಸಂಭ್ರಮವನ್ನು ಮುಗಿಸಿ ೧೧ನೇ ವರ್ಷಕ್ಕೆ ಪಾದಾರ್ಪಣೆ ಮಾಡಿರುವ ಹಿಂದೂ ಮಹಾ ಗಣಪತಿ ಮಹಾ ಮಂಡಳಿಯು ತನ್ನದೇ ಆದ ಸನಾತನ ಧರ್ಮ ಪ್ರಚಾರದಂತೆ ಮತ್ತು ಆಶಯದಂತೆ ಪ್ರತಿವರ್ಷವೂ ಗಣೇಶ ಉತ್ಸವವನ್ನು ಆಚರಿಸುತ್ತಾ ಬಂದಿದೆ ೯ ದಿನಗಳ ವರೆಗೆ ಆಚರಿಸಲಾಗುವ ಈ ಉತ್ಸವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುವದರೊಂದಿಗೆ ಹಾಗೂ ಭಾರತ ಮಾತೆಗೆ ಉಡಿ ತುಂಬುವ ಕಾರ್ಯಕ್ರಮ, ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಅಲ್ಲದೇ ಹಿಂದೂ ಸಮಾವೇಶ, ಸಂತ ಸಮಾವೇಶ ಅಲ್ಲದೇ ಗೋ ಪೂಜಾ ಕಾರ್ಯಕ್ರಮಗಳನ್ನೋಳಗೊಂಡು ಸನಾತನ ಧರ್ಮದ ಹಾದಿಯಲ್ಲಿ ಮಂಡಳಿಯು ಸಾಗಿದೆ ಅಲ್ಲದೇ ಈ ಭಾರಿ ಡಿಜೆ ಕುಣಿತಕ್ಕೆ ಬ್ರೇಕ್ ಹಾಕುವದರೊಂದಿಗೆ ಕೇವಲ ಡೋಲುಗಳ ಮೂಲಕ ಮೇರವಣಿಗೆಗೆ ಚಾಲನೆ ನೀಡಿ ಮೇರವಣಿಗೆಯಲ್ಲಿ ಪುರುಷರಷ್ಟೇ ಅಲ್ಲದೇ ಮಹಿಳೆಯರೂ ಕೂಡಾ ಸುತ್ತಗಟ್ಟಿ ನಿಂತಿ ನೋಡುವಂತೆ ವ್ಯವಸ್ಥೆ ಮಾಡಿ ಧಾರ್ಮಿಕ ಆಚರಣೆಯ ಬಗ್ಗೆ ಜಾಗೃತಿ ಮೂಡಿಸಿದ್ದು ಕಂಡುಬAದಿತು.
ಮೇರವಣಿಗೆಯುದ್ದಕ್ಕೂ ಗಣಪತಿ ಬಪ್ಪ ಮೋರಯ್ಯ, ಮಂಗಳ ಮೂರ್ತಿ ಮೋರಯ್ಯ ಎಂಬ ಯುವ ಸಮೂಹದ ಜೈಕಾರ ನೋಡುಗ ಎಲ್ಲ ಜನರನ್ನು ಭಕ್ತಿಯ ಮಾರ್ಗದತ್ತ ಕೊಂಡೋಯುವAತೆ ಎದ್ದು ಕಾಣುತ್ತಿತ್ತು.
ಮೇರವಣಿಗೆಯಲ್ಲಿ ಖಾಕಂಡಕಿಯ ಜೈ ಹನುಮಾನ ಕರಡಿ ಮತ್ತು ಶಂಬಾಳ ವಾದನ ಮತ್ತು ತೋಗತಿಯರ ಕುಣಿತ, ಕಂಪಲಿಯ ಗಂಗೋತ್ರಿ ರಾಮ ಡೋಲ, ಶ್ರೀ ಗುರು ಪುಟ್ಟರಾಜ ಕಲಾತಂಡದಿAದ ಸಂಪೂರ್ಣ ರಾಮಾಯಣ ಆಟ, ನಾಸಿಕ ಡೋಲ, ಪುರವಂತರ ಕುಣಿತ, ವೇಷಗಾರ, ಒಳಗೊಂಡAತೆ ವಿವಿಧ ಕಲಾ ತಂಡಗಳು ಭಾಗವಹಿಸಿ ನೋಡುಗರರ ಗಮನ ಸೇಳೆದವು.
ಈ ಗಣೇಶ ವಿಸರ್ಜನಾ ಶೋಭಾಯಾತ್ರೆಯು ಬಸ್ ನಿಲ್ದಾಣದ ಮುಂಭಾಗದ ರಸ್ತೆಯ ಮೂಲಕ ಶ್ರೀ ಬಸವೇಶ್ವರ ಸರ್ಕಲ್, ಡಾ.ಬಿ.ಆರ್.ಅಂಬೇಡ್ಕರ್ ಸರ್ಕಲ್, ಶ್ರೀ ಅಂಬಾಭವಾನಿ ಮಂದಿರ ರಸ್ತೆ, ಕತ್ರಿ ಬಜಾರ, ಬಾಲಾಜಿ ಮಂದಿರ ರಸ್ತೆ, ಶ್ರೀ ವಿಠ್ಠಲ ಮಂದಿರ, ಶಿವಾಜಿ ಮಹಾರಾಜರ ವೃತ್ತದ ಮೂಲಕ ಮಹಾರಾಣಾಪ್ರತಾಪಸಿಂಹ್ ಸರ್ಕಲ್‌ಗೆ ಆಗಮಿಸಿ ಮುಕ್ತಾಯಗೊಳಿಸಲಾಯಿತು.
ಜನರ ಆಶಯದಂತೆ ಮಂಡಳಿ ತಿರ್ಮಾನ
ಗಣೇಶ ಮೂರ್ತಿಯನ್ನು ರಸ್ತೆಗೆ ತಂದು ಕೂಡ್ರಿಸುವದರೊಂದಿಗೆ ಸ್ವಾತಂತ್ರö್ಯ ಸಂಗ್ರಾಮಕ್ಕೆ ಶಕ್ತಿ ತುಂಬಿದ ಬಾಲಗಂಗಾಧರ ತಿಲಕ ಅವರ ಆಸೆ ಮತ್ತು ಕನಸ್ಸನ್ನು ಸಾಕಾರಗೊಳಿಸುವದರ ಜೊತೆಗೆ ಒಗ್ಗಟ್ಟಿನ ಭಲ ತುಂಬುವದು ಮೂಲ ಉದ್ದೇಶವಾಗಿದ್ದರೂ ಕೂಡಾ ಈಗೀನ ಟ್ರೇಂಡ್ ಎಲ್ಲವೂ ಬುಡಮೇಲು ಮಾಡುವಂತೆ ಗಣೇಶ ಉತ್ಸವವಾಗಿಬಿಟ್ಟಿದೆ ಸದ್ಯ ಸಾರಾಯಿ ಕುಡಿದು ಡಿಜೆ ನಾದದ ಮುಂದೆ ಯುವಕರು ಹೆಜ್ಜೆ ಹಾಕಿ ಮೋಜು ಮಸ್ತಿ ಮಾಡುವದು ವಾಡಿಕೆಯಾಗಿ ಇದನ್ನು ಸರಿದಾರಿಗೆ ತರಬೇಕು ಸನಾತನ ಧರ್ಮದ ಪರಂಪರೆ ಉಳಿಯಬೇಕು ಹಿಂದೂ ಸಮಾಜ ಜಾಗೃತಿ ಗೊಳ್ಳಬೇಕೆಂಬ ಉದ್ದೇಶದೊಂದಿಗೆ ಕಳೆದ ೧೧ ವರ್ಷಗಳ ಹಿಂದೆ ತ್ರಿಮೂರ್ತಿ ಶ್ರೀಗಳ ನೇತೃತ್ವದಲ್ಲಿ ಹಿಂದೂ ಮಹಾ ಗಣಪತಿ ಮಹಾ ಮಂಡಳಿಯನ್ನು ರಚಿಸಿ ಪ್ರತಿಷ್ಠಾಪಿಸಲಾದ ಗಣೇಶ ಮೂರ್ತಿಯ ಭವ್ಯ ಶೋಭಾಯಾತ್ರೆಗೆ ಜಿಲ್ಲೆಯ ವಿವಿಧ ಮೂಲೆಗಳಿಂದ ಜನತೆ ಆಗಮಿಸಿ ವಿಕ್ಷೀಸುತ್ತಾ ಸಾಗಿದ್ದಾರೆ. ಆನರ ಆಶಯದಂತೆ ಈ ಭಾರಿ ಡಿಜೆ ಕುಣಿತಕ್ಕೆ ಬ್ರೇಕ್ ಹಾಕಿ ಡೋಲು, ವಿವಿಧ ಕುಣಿತಗಳನ್ನು ಹೆಚ್ಚಿಸಿ ಜನರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಎಲ್ಲ ಗಣೇಶ ಮೂರ್ತಿಗಳು ರಾತ್ರಿಹೊತ್ತು ಮೇರವಣಿಗೆ ಪ್ರಾರಂಬಿಸಿ ಮರುದಿನ ನಸುಕಿನ ಜಾವ ವಿಸರ್ಜನೆ ಮಾಡಿದರೆ ಹಿಂದೂ ಮಹಾ ಗಣಪತಿ ಮಹಾ ಮಂಡಳಿಯವರು ಮಧ್ಯಾಹ್ನದ ಸಮಯದಲ್ಲಿಯೇ ಮೇರವಣಿಗೆಗೆ ಚಾಲನೆ ನೀಡಿ ಎಲ್ಲ ನೋಡುಗ ಜನರ ಪ್ರೀತಿಗೆ ಪಾತ್ರರಾಗಿದ್ದಾರೆಂದರೆ ತಪ್ಪಾಗಲಾರದು.
ದಾರಿಯುದ್ದಕ್ಕೆ ಪ್ರಸಾದ ಸೇವೆ
ಹಿಂದೂ ಮಹಾ ಗಣಪತಿ ಮಹಾ ಮಂಡಳಿಯ ವತಿಯಿಂದ ನಡೆಯುವ ಗಣೇಶ ಮೂರ್ತಿಯ ವಿಸರ್ಜನಾ ಮೇರವಣಿಗೆ ನಡೆಯುವ ದಾರಿಯುದ್ದಕ್ಕೆ ಅನೇಕ ಯುವಕರು ಅಲ್ಲದೇ ವಿವಿಧ ಸಮಾಜ ಬಾಂದವರು ಕರಿಗಡಬು, ಬೊಂದೆ ಉಚಿಡಿ, ಅನ್ನ ಪ್ರಸಾದ ಅಲ್ಲದೇ ವಿವಿಧ ತರಹದ ಪ್ರಸಾದದ ವ್ಯವಸ್ಥೆ ಮಾಡಿ ಭಕ್ತಿಯ ಪರಾಕಾಷ್ಠೇಯನ್ನು ಮೇರೆದರು.
ಕ್ರೇನ್ ಮೂಲಕ ಹೂವಿನ ಹಾರ ಹಾಕಿ ಸ್ವಾಗತ
ಗಣೇಶ ಮೂರ್ತಿಯ ಭವ್ಯ ಶೋಭಾಯಾತ್ರೆಯ ಸಮಯದಲ್ಲಿ ಪಟ್ಟಣದ ಜನರು ಕ್ರೇನ್ ಮೂಲಕ ಬೃಹತ್ ಆಕಾರದ ಹೂವಿನ ಹಾರವನ್ನು ಗಣೇಶ ಮೂರ್ತಿಗೆ ಹಾಕಿ ಸ್ವಾಗತಕೋರಿದರು.