ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ಸಿಬ್ಬಂದಿಗೆ ಸನ್ಮಾನ
ಸಂಜೆವಾಣಿ ವಾರ್ತೆ,
ವಿಜಯಪುರ,ಸೆ.೧೬:೨೦೨೩-೨೪ ನೇ ಸಾಲಿನ ಪ್ರತಿಭಾ ಪುರಸ್ಕಾರ ಸಮಾರಂಭವು ಪಿ.ಡಿ.ಜೆ ‘ಬ’ ಶಾಲಾ ಆವರಣದಲ್ಲಿ ಈಚೆಗೆ ನಡೆಯಿತು.
ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜೀವನದಲ್ಲಿ ಹಲವು ಸಮಸ್ಯೆಗಳು ಎದುರಾದರೂ ಧೃತಿಗೆಡದೆ ಗಮನಹರಿಸಿದರೆ ಮಾತ್ರ ಯಶಸ್ವಿ ಸಾಧ್ಯ. ಯಶಸ್ಸಿನ ಮೊದಲ ಹೆಜ್ಜೆ ಎಂದರೆ ಸತತ ಪ್ರಯತ್ನ, ದೃಢವಾದ ಆತ್ಮವಿಶ್ವಾಸ ಹಾಗೂ ಸಂಸ್ಕಾರದಿAದ ಕೂಡಿದರೆ ಮಾತ್ರ ಸಂಪೂರ್ಣವಾದ ಜಗತ್ತನ್ನೇ ಗೆಲ್ಲಬಹುದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ವಿದ್ಯಾರ್ಥಿ ಜೀವನದಲ್ಲಿ ಸಂಸ್ಕಾರ ಅತ್ಯಂತ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಹಾಗೆಯೇ ಯಶಸ್ಸು ಎಂಬುದು ನಿಮ್ಮ ಮನೆಯ ಬಾಗಿಲನ್ನು ತಟ್ಟುತ್ತದೆ ಎಂಬುದನ್ನು ನೆನಪಿರಲಿ ಎಂದು ನುಡಿದರು.
ಇಂದಿನ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ತಹಸೀಲ್ದಾರ ಪ್ರಶಾಂತ ಚನಗೊಂಡ ಅವರು ಮಾತನಾಡಿ, ವಿದ್ಯಾರ್ಥಿಗಳು ಸತತವಾದ ಪ್ರಯತ್ನದಿಂದ ಜೀವನದಲ್ಲಿ ತಮ್ಮ ಗುರಿಯನ್ನು ಸಾಧಿಸಬಹುದೆಂದು ಹೇಳಿದರು. ಗುರು ಶಿಷ್ಯರ ಸಂಬAಧವೇ ಈ ಪ್ರತಿಭಾ ಪುರಸ್ಕಾರವಾಗಿದೆ. ಹಾಗೂ ಗುರುಗಳಿಗೆ ಮಕ್ಕಳ ಏಳಿಗೆಯನ್ನು ಕಾಣುವುದೇ ಒಂದು ಸಡಗರ, ಸಂಭ್ರಮವಾಗಿದೆ ಎಂದು ಹೇಳಿದರು.
ಬಿ.ಡಿ.ಈ ಸಂಸ್ಥೆಯ ಅಧ್ಯಕ್ಷÀ ಕೆ.ಬಿ. ಕುಲಕರ್ಣಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಧಿಸಿಯೇ ಸಾಧಿಸುತ್ತೇನೆ. ಬಡತನ ಸಿರಿತನ ಎಂಬ ಯಾವುದೇ ಅಡೆತಡೆಗಳು ನಿಲ್ಲಲಾರವು. ಹಾಗೆಯೇ ಕೆಸರಿನಲ್ಲಿ ಕಮಲ ಅರಳುವುದು ಎಷ್ಷು ಸತ್ಯವೋ ಪರಿಶ್ರಮವಿದ್ದಲ್ಲಿ ಪ್ರತಿಭೆಗಳು ಅರಳುವುದು ಅಷ್ಟೇ ಸತ್ಯ ಹಾಗೂ ವಿದ್ಯಾರ್ಥಿ ಜೀವನದಲ್ಲಿ ತಾಳ್ಮೆ ಬಹಳ ಮುಖ್ಯವಾದದ್ದು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತನ್ನು ಹೇಳಿದರು.
ಬಿ.ಡಿ.ಈ ಸಂಸ್ಥೆಯ ಗೌರವ ಕಾರ್ಯದರ್ಶಿ ಹಾಗೂ ಖ್ಯಾತ ನ್ಯಾಯವಾದಿ ಎಂ.ಕೆ. ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಬಿ.ಡಿ.ಈ ಸಂಸ್ಥೆಯ ಉಪಾಧ್ಯಕ್ಷ ಎ.ಡಿ. ದೇಶಪಾಂಡೆ, ಜಂಟಿ ಕಾರ್ಯದರ್ಶಿ ಆರ್.ಪಿ. ಚಿಕ್ಕಲಕಿ ಹಾಗೂ ಬಿ.ಡಿ.ಈ ಸಂಸ್ಥೆಯ ಸದಸ್ಯರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಪಿಡಿಜೆ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯೆ ಡಿ.ಕೆ. ಕುಲಕರ್ಣಿ ಅವರು ಹಾಗೂ ಪಿ.ಡಿ.ಜೆ ಪ್ರೌಢಶಾಲೆ “ಬ” ಮುಖ್ಯಾಧ್ಯಾಪಕಿ ಕೆ.ಎಂ. ಸೀತಿಮನಿ ಗುರುಮಾತೆಯವರು ವೇದಿಕೆ ಮೇಲೆ ಇದ್ದರು.
ಇದೇ ಸಂದರ್ಭದಲ್ಲಿ ನಿವೃತ್ತ ಸಿಬ್ಬಂದಿ ಹಾಗೂ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೂ ಸನ್ಮಾನಿಸಲಾಯಿತು.
ಎ.ಎನ್.ಉಮ್ಮವಗೋಳ, ಎ.ಎಮ್.ಮಾಂಗ, ಜಿ.ಜಿ. ಗಾಡಗೀಳ, ಕುಮಾರಿ ಎ.ಎಮ್. ಹಿರೇಮಠ, ಪಿ.ಕೆ.ಆಶ್ರೀತ, ಎ.ಜಿ.ಕೋಲಾಟಕರ, ಕುಮಾರಿ ಎ.ಎನ್. ಜಕ್ಕುಂಡಿ, ಕುಮಾರಿ. ಆರ್.ಆರ್. ಉಪ್ಪಾರ, ಉಪಸ್ಥಿತರಿದ್ದರು.