ಈದ್ ಮಿಲಾದ್ ಉನ್-ನಬೀ ಸಂಭ್ರಮ
ವಾಡಿ:ಸೆ.೧೬: ಪಟ್ಟಣದ ಮುಸ್ಲಿಂ ಬಾಂಧವರು ಈದ್ ಎ-ಮಿಲಾದ್ ಉನ್-ನಬೀ ಹಬ್ಬವನ್ನು ಸಂಭ್ರಮ ಸಡಗರದಿಂದ ರವಿವಾರ ಆಚರಿಸಿದರು. ಮಿಲಾದ್ ವೃತ್ತದಿಂದ ಪ್ರಾರಂಭವಾದ ಈದ್ ಮಿಲಾದ್ ಉನ್- ನಬೀ ಮೆರವಣಿಗೆ ವಿವಿಧ ರಸ್ತೆಗಳಲ್ಲಿ ಸಂಚರಿಸಿ ಸಂಭ್ರಮ ಹೆಚ್ಚಿಸಿತು.
ಹಲಕರಟಿ ದರ್ಗಾದ ಪೀಠಾಧಿಪತಿ ಹಜರತ್ ಚಿಸ್ತಿ ಯಮುನಿ ಸೈಯದ್ ಖ್ವಾಜಾ ಖಾದ್ರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಹಾಬಾದ ಡಿವೈಎಸ್ಪಿ ಶಂಕರ್ ಗೌಡ ವಿ. ಪಾಟೀಲ್, ವಾಡಿ ಠಾಣೆಯ ಪಿಎಸ್‌ಐ ತಿರುಮಲೇಶ್ ಕುಂಬಾರ್, ಜಾಮಿಯಾ ಮಸೀದಿ ಅಧ್ಯಕ್ಷ ಜಾಫರ್ ಹುಸೇನ್ ಸಾಬ್, ಮುಖಂಡರಾದ ಸೈಯದ್ ಮಹೆಮೂದ ಸಾಹೇಬ್, ಬಶೀರ್ ಖುರೇಶಿ, ರಮೇಶ್ ಕಾರಬಾರಿ, ಬಸವರಾಜ ಪಂಚಾಳ, ಭೀಮರಾಯ ದೋರೆ, ಭಗವಾತ ಸುಳೆ, ಸೂರ್ಯಕಾಂತ ರದ್ದೇವಾಡಿ, ಎಚ್ ಆರ್ ವಿಭಾಗದ ಶಶಿಕಾಂತ, ಎಸಿಸಿ ಕಾರ್ಖಾನೆಯ ಅಧಿಕಾರಿ ಪಕೀರಪ್ಪ ಸಾಬ್ ಸೇರಿದಂತೆ ಹಲವರು ಇದ್ದರು.