ಗಣೇಶ ಹಬ್ಬದ ಪ್ರಯುಕ್ತ ಸಾತಿಹಾಳದಲ್ಲಿ ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾಟ
ದೇವರಹಿಪ್ಪರಗಿ :ಸೆ.೧೬:ತಾಲ್ಲೂಕಿನ ಸಾತಿಹಾಳ ಗ್ರಾಮದಲ್ಲಿ ಗಜಾನನ ಯುವಕ ಮಂಡಳಿಯಿAದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದ ಮೈದಾನದಲ್ಲಿ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಹೊನಲು ಬೆಳಕಿನ ರಾಜ್ಯಮಟ್ಟದ ಕಬ್ಬಡಿ ಪಂದ್ಯಾವಳಿ ಯಶಸ್ವಿಯಾಗಿ ಸಂಪನ್ನಗೊAಡಿತು. ಶನಿವಾರ ರಾತ್ರಿ ಆರಂಭವಾದ ಪಂದ್ಯಾವಳಿ ಭಾನುವಾರ ಬೆಳಿಗ್ಗೆ ಮುಕ್ತಾಯಕೊಂಡಿತು.
ಹುಣಸಿಗಿ ತಾಲೂಕಿನ ತೋಳದಿನ್ನಿ ಯುವಕ ಸಂಘ ಪ್ರಥಮ, ಗಜಾನನ ಯುವಕ ಮಂಡಳಿ ಸಾತಿಹಾಳ ದ್ವಿತೀಯ, ದೇವರ ಹಿಪ್ಪರಗಿ ಯುವಕ ತಂಡ ತೃತಿಯ ಸ್ಥಾನ ಗಳಿಸಿದರು.
ಗಜಾನನ ಯುವಕ ಮಂಡಳಿಯಿAದ ಮೊದಲನೇ ಬಾರಿಗೆ ಕಬ್ಬಡ್ಡಿ ಪಂದ್ಯಾವಳಿಯನ್ನು ಏರ್ಪಡಿಸಲಾಯಿತು. ಜೆಡಿಎಸ್ ಮುಖಂಡರಾದ ಹಣಮಂತ್ರಾಗೌಡ ಬಿರಾದಾರ ಉದ್ಘಾಟಿಸಿದರು.
ಯುವಕರು ದುಶ್ಚಟಗಳಿಂದ ದೂರವಿದ್ದು ಇಂತಹ ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಮಾಜದಲ್ಲಿ ಒಳ್ಳೆಯ ಪ್ರಜೆಗಳಾಗಿ ಒಳ್ಳೆಯ ಕ್ರೀಡಾಪಟುಗಳಾಗಿ ಹೊರ ಹೊಮ್ಮಬೇಕು.ಹಾಗೂ ದಾನಿಗಳು ತುಂಬು ಹೃದಯದ ಸಹಕಾರ ನೀಡುವುದರಿಂದ ಇಂತಹ ಪಂದ್ಯಾವಳಿಗಳು ಆಯೋಜಿಸಲು ಸಾಧ್ಯವಾಗುತ್ತದೆ.ಎಂದು ರವಿಚಂದ್ರ ಹಾದಿಮನಿ ತಿಳಿಸಿದರು.
ಪ್ರಥಮ ದರ್ಜೆ ಗುತ್ತಿಗೆದಾರರಾದ ಸಾತಯ್ಯ ಡೋಣರು ಮಠ ಅಧ್ಯಕ್ಷತೆ ವಹಿಸಿದರು.ಮುಖ್ಯ ಅತಿಥಿಗಳಾಗಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಸಿದ್ದು ಬಳ್ಳಾ, ಸಿದ್ದರಾಮ ಅವಟಿ, ಅಮಿತ ಪವರ್, ಮಹಾದೇಶ ಅವಟಿ, ಬ್ಲಾಕ್ ಕ್ರಾಂಗೆಸ್ ಅಧ್ಯಕ್ಷರು ಬಳಸಾಹೇಬ್ ಪಾಟೀಲ್, ಕೆ. ಬಿ. ಪಾಟೀಲ್ ಕಾಂಗ್ರೆಸ್ ಮುಖಂಡರು ವಿನಾಯಗೌಡ ಪಾಟೀಲ್, ಕರವೇ ತಾಲೂಕ ಅಧ್ಯಕ್ಷರ ಪ್ರಕಾಶ ಡೋಣೂರುಮಠ, ಶರಣಗೌಡ ಬಿರಾದಾರ್, ಯಮನಪ್ಪ ಕಡೆಮನಿ. ಶಿವಾನಂದ ಬ ಅವಟಿ. ಸಂತೋಷ ಸಾಸಟ್ಟಿ, ಶಿದ್ರಾಮಯ್ಯ್ ಮಠ, ಸುನಿಲ್ ಮಾಗಿ, ಬಿರು ದೇವೂರ,ಸಾತಿಹಾಳ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.