29ರಿಂದ ವಿವಿಧ ಸ್ಪರ್ಧೆ, ಪರೀಕ್ಷೆ, ಪ್ರವಚನಹರಿದಾಸ ಸಾಹಿತ್ಯ ಪ್ರಚಾರ ವಾಹಿನಿ: ಮಾ. 10ರಂದು 23ನೇ ವಾರ್ಷಿಕೋತ್ಸವ
ಕಲಬುರಗಿ:ಫೆ.26: ವಿಶ್ವಮಧ್ವ ಮಹಾಪರಿಷತ್ತಿನ ಅಂಗಸAಸ್ಥೆಯಾಗಿರುವ ನಗರದ ಹರಿದಾಸ ಸಾಹಿತ್ಯ ಪ್ರಚಾರ ವಾಹಿನಿಯ 23ನೇ ವಾರ್ಷಿಕೋತ್ಸವದ ಅಂಗವಾಗಿ
ಫೆ. 29ರಿಂದ ಮಾರ್ಚ್ 9ರವರೆಗೆ ವಿವಿಧ ಸ್ಪರ್ಧೆ, ಪರೀಕ್ಷೆ ಮತ್ತು ಪ್ರವಚನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಬ್ರಹ್ಮಪುರದ ನ್ಯೂ ರಾಘವೇಂದ್ರ ಕಾಲೋನಿಯ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ಫೆ. 29ರಿಂದ ಮಾ. 4ರವರೆಗೆ ಪ್ರತಿದಿನ ಸಂಜೆ 6 ಗಂಟೆಗೆ ವಿದ್ವಾನ್ ಸುಸ್ವರಂ ನಾಗರಾಜಾಚಾರ್ಯ ಆದೋನಿ ಅವರಿಂದ ಹರಿದಾಸರು ಕಂಡ ಶ್ರೀನಿವಾಸ' ಕುರಿತು ಹಾಗೂ ಮಾ. 5ರಿಂದ 9ರವರೆಗೆ ಪಂ. ಅಭಯಾಚಾರ್ಯ ಪಾಟೀಲ ಅವರಿಂದಹರಿದಾಸರು ಕಂಡ ಶ್ರೀಕೃಷ್ಣ’ ಪ್ರವಚನ ನಡೆಯಲಿದೆ.
ಮಾರ್ಚ್ 1ರಂದು ಸಂಜೆ 4-30ಕ್ಕೆ ಮಹಿಳಾ ಭಜನಾ ಮಂಡಳಿಯವರಿಗೆ ದಿ. ವೆಂಕಟಾಚಾರ್ಯ ಘಂಟಿ ಸ್ಮರಣಾರ್ಥ ರಂಗೋಲಿ ಸ್ಪರ್ಧೆ, ಮಾ. 2ರಂದು ಮಧ್ಯಾಹ್ನ 3 ಗಂಟೆಗೆ ಕೀರ್ತಿಶೇ ಪದ್ಮಾವತಿ ವ್ಯಾಸಮುದ್ರ ಸ್ಮರಣಾರ್ಥ ಹರಿಕಥಾಮೃತಸಾರ'ದ ಲಿಖಿತ ಸ್ಪರ್ಧೆ. ಮಾ. 3ರಂದು ಸಂಜೆ 4 ಗಂಟೆಗೆ ದಿ. ಹಣಮಂತರಾವ ಕಂಪ್ಲಿ ಸ್ಮರಣಾರ್ಥದಾಸವಾಣಿ ಪ್ರವೀಣರು ಸ್ಪರ್ಧೆ’ (ಅಂತ್ಯಾಕ್ಷರಿ), ದಿ. 4ರಂದು ಕೀರ್ತಿಶೇಷ ಜಯಶ್ರೀ ನಾಡಗೌಡ ಸ್ಮರಣಾರ್ಥ ಪ್ರಬಂಧ ಸ್ಪರ್ಧೆ (ಅಂತ್ಯಾಕ್ಷರಿ), 6ರಂದು ಮಧ್ಯಾಹ್ನ 3 ಗಂಟೆಗೆ ದ್ರೌಪದಿಬಾಯಿ ಪೂಜಾರ ಮೋತಕಪಲ್ಲಿ ಸ್ಮರಣಾರ್ಥ `ದಾಸರ ಹಾಡಿನ ಸ್ಪರ್ಧೆ’ ಆಯೋಜಿಸಲಾಗಿದೆ.
ಮಾ. 10ರಂದು ಶೋಭಾಯಾತ್ರೆ
ಮಾರ್ಚ್ 10ರಂದು ಸಂಜೆ 5 ಗಂಟೆಗೆ ಬ್ರಹ್ಮಪುರ ಉತ್ತರಾದಿ ಮಠದಿಂದ ಶ್ರೀ ವೆಂಕಟೇಶ್ವರ ದೇವಸ್ಥಾನದವರೆಗೆ ಶ್ರೀದೇವಿ, ಭೂದೇವಿ ಸಹಿತ ಶ್ರೀನಿವಾಸನ ಹಾಗೂ ದಾಸರ ಭಾವಚಿತ್ರದ ಶೋಭಾಯಾತ್ರೆ ನಡೆಯಲಿದೆ. ನಂತರ 6 ಗಂಟೆಗೆ ಹರಿದಾಸ ಸಾಹಿತ್ಯ ಪ್ರಚಾರ ವಾಹಿನಿಯ 23ನೇ ವಾರ್ಷಿಕೋತ್ಸವ ಹಾಗೂ ವಿವಿಧ ಪ್ರಶಸ್ತಿ ಪ್ರದಾನ ಸಮಾರಂಭ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ನಡೆಯಲಿದೆ. ಬೆಂಗಳೂರಿನ ಶ್ರೀನಿವಾಸ ಉತ್ಸವ ಬಳಗದ ಸಂಸ್ಥಾಪಕ ಅಧ್ಯಕ್ಷರಾದ ಡಾ. ವಾದಿರಾಜ ತಾಯಲೂರು, ರಾಘವೇಂದ್ರ ನಾಡಗೌಡ ವಕೀಲರು, ವಿಶ್ವಮಧ್ವ ಮಹಾಪರಿಷತ್ ಕಲಬುರಗಿ ಘಟಕದ ಅಧ್ಯಕ್ಷ ಡಿ.ಕೆ. ಕುಲಕರ್ಣಿ ಅತಿಥಿಗಳಾಗಿ ಆಗಮಿಸುವರು. ವಾಹಿನಿಯ ಅಧ್ಯಕ್ಷರಾದ ಪಂ. ಗೋಪಾಲಾಚಾರ್ಯ ಅಕಮಂಚಿ ಅಧ್ಯಕ್ಷತೆ ವಹಿಸುವರು.
ವಿಪ್ರಶ್ರೀ, ಶ್ರೀ ಜಗನ್ನಾಥ ವಿಠಲ ಪ್ರಶಸ್ತಿ ಪ್ರದಾನ, ಅರ್ಚಕರು, ಯುವ ಕಲಾವಿದರಿಗೆ ಸನ್ಮಾನ, 2023-24ನೇ ಸಾಲಿನ ಅತ್ಯುತ್ತಮ ಭಜನಾ ಮಂಡಳಿ ಪ್ರಶಸ್ತಿ ಪ್ರದಾನ, ಸಾಧಕರಿಗೆ ಸನ್ಮಾನ, `ಹರೇ ಶ್ರೀನಿವಾಸ’ ಸ್ಟಿಕರ್ ಬಿಡುಗಡೆ ನಡೆಯಲಿದೆ.
ಸದ್ಭಕ್ತರು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕೃತಾರ್ಥರಾಗಬೇಕೆಂದು ಹರಿದಾಸ ಸಾಹಿತ್ಯ ಪ್ರಚಾರ ವಾಹಿನಿಯ ಸಂಚಾಲಕ ಭೀಮಭಟ್ಟ ಬೆಂಕಿ ಮೋತಕಪಲ್ಲಿ ಕೋರಿದ್ದಾರೆ.