ಪ್ರಧಾನ ಮಂತ್ರಿ ವಿಡಿಯೋ ಕಾನ್ಫೆರೆನ್ಸ್ ಮೂಲಕ ರೈಲ್ವೆ ನಿಲ್ದಾಣಗಳ ಪುನರಾಭಿವೃದ್ಧಿ, ರಸ್ತೆ ಮೇಲ್ಸೇತುವೆಗಳು, ಕೆಳಸೇತುವೆಗಳ ಚಾಲನೆ
ಕಲಬುರಗಿ:ಫೆ.26: ಭಾರತ ಸರ್ಕಾರz ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ವಿಡಿಯೋ ಕಾನ್ಫೆರೆನ್ಸ ಮೂಲಕ ಅಮೃತ್ ಭಾರತ ಸ್ಟೇಷನ್ ಯೋಜನೆಯಡಿ 554 ರೈಲ್ವೆ ನಿಲ್ದಾಣಗಳ ಪುನರಾಭಿವದ್ಧಿ ಮತ್ತು 1500 ರಸ್ತೆ ಮೇಲ್ಸೇತುವೆಗಳ ಮತ್ತು ರಸ್ತೆ ಕೆಳೆಸೇತುವೆಗಳ ಚಾಲನೆ ನೀಡಿದರು.
ಸೋಮವಾರದಂದು ಕಲಬುರಗಿ ಜಿಲ್ಲೆಯ ಅಫಜಲಪೂರ ತಾಲೂಕಿನ ಸ್ಟೇಶನ ಗಾಣಗಾಪುರದಲ್ಲಿ ಅಮೃತ ಭಾರತ ಸ್ಟೇಶನ್ ಯೋಜನೆಯಡಿ 554 ರೈಲ್ವೆ ನಿಲ್ದಾಣಗಳು, ಪುನರಾಭಿವೃದ್ದಿ ಮತ್ತು 1500 ರಸ್ತೆ ರೈಲ್ವೆ ಮೇಲ್ಸೇತುವೆ ಮತ್ತು ರಸ್ತೆ ಕೆಳಸೇತುವೆಗಳ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮವನ್ನು ಭಾರತ ಸರ್ಕಾರ ನರೇಂದ್ರ ಮೋದಿ ವಿಡಿಯೋ ಕಾನ್ಪರೆನ್ಸ್ ಮೂಲಕ ಉದ್ದೇಶಿಸಿ ಮಾತನಾಡಿದರು.
ಕುಶಲ ಮಾಲಿಕಯ್ಯ ಗುತ್ತೇದಾರ ಮಾತನಾಡಿ, 550 ರೈಲ್ವೆ ನವೀಕರಣಕ್ಕೆ ಮಾಡುವದಕ್ಕೆ ವಿಶೇಷವಾದಂತಹ ಬಜೆಟ ಕೊಟ್ಟಿದ್ದಾರೆ ಹಾಗೂ 22 ಕೋಟಿ ರೂಪಾಯಿಯನ್ನು ಪುನರ ನಿರ್ಮಾಣ ಸ್ಟೇಶನ ಗಾಣಗಾಪುರಕ್ಕೆ ರೈಲ್ವೆ ಸ್ಟೇಶನ್ ಸಿಗುವ ಸೌಲಭ್ಯಗಳನ್ನ ನೀಡಲಾಗುತ್ತದೆ ಎಂದರು.
ವಿಧಾನ ಪರಿಷತ್ ಸದಸ್ಯರಾದ ಬಿ.ಜಿ.ಪಾಟೀಲ ರವರು ಮಾತನಾಡಿದರು.
ಸಮಾಜದ ಮುಖಂಡರಾದ ಶರಣಪ್ಪ ಹದನೂರ ಮಾತನಾಡಿ, ಇಲ್ಲಿನ ಸಾರ್ವಜನಿಕರಿಗೆ,ಅಂಗವಿಕಲರಿಗೆ,ವೃದ್ಧರಿಗೆ, ರೈಲು ಕ್ರಾಸ್ ಮಾಡಲು ಎಕ್ಸಲೇಟರ್ ಲಿಪ್ಟ್ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು.
ಈ ಕಾರ್ಯಕ್ರಮದಲಿ ಸೀನಿಯರ್ ಡಿ ಸಿ ಎಂ ಸೊಲ್ಲಾಪುರ ಹಾಗೂ ಅಮನ್ ಕುಮಾರ ವಿಭಾಗೀಯ ಮ್ಯಾಕೆನಿಕಲ್ ಇಂಜಿನಿಯರ್ ಎಲ್.ಕೆ. ರೈನಾವಲೆ ಸೇರಿದಂತೆ ರೈಲ್ವೆ ಇಲಾಖೆಯ ಅಧಿಕಾರಿಗಳು ಸಾರ್ವಜನಿಕರು,ಸಿಬ್ಬಂದಿ ವರ್ಗದವರು ಹಾಜರಿದ್ದರು.