ಜಲ ಬಿರಾದರಿ ಸಂಸ್ಥೆ ನೇತೃತ್ವದಲ್ಲಿ ಬಾವಿಗಳ ಸ್ವಚ್ಚತಾ ಕಾರ್ಯಕ್ರಮ
ವಿಜಯಪುರ, ಫೆ.26:ಕರ್ನಾಟಕ ಜಲ ಬಿರಾದರಿ ಸಂಸ್ಥೆ ಹಾಗೂ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆರ್ಕಿಟೆಕ್ಟ್ ವಿಜಯಪುರ ಶಾಖೆ ಇವರ ನೇತೃತ್ವದಲ್ಲಿ ಸೋಮವಾರ ಬೆಳಗ್ಗೆ ವಿಜಯಪುರ ನಗರದ ಪಿ. ಜಿ.ಹಳಕಟ್ಟಿ ಇಂಜಿನಿಯರಿಂಗ್ ಕಾಲೇಜ್ ಎದುರಿನ ಪ್ರದೇಶದಲ್ಲಿರುವ ಚಾಬುಕ್ ಸವಾರ್ ದರ್ಗಾ ಬಳಿ ಇರುವ ಐತಿಹಾಸಿಕ ಭಾವಿ ಪುನರುಜ್ಜೀವನ ಅಭಿಯಾನಕ್ಕೆ ಚಾಲನೆ ನೀಡಿ ಸ್ವಚ್ಛತಾ ಕಾರ್ಯ ಆರಂಭಿಸಲಾಯಿತು.
ಮಹಾನಗರ ಪಾಲಿಕೆಯ ಮೇಯರ್, ಉಪಮೇಯರ್, ಅಪರ ಜಿಲ್ಲಾಧಿಕಾರಿಗಳು, ಮಹಾನಗರ ಪಾಲಿಕೆಯ ಆಯುಕ್ತರು ಹಾಗೂ ವಾರ್ಡಿನ ಸದಸ್ಯರಾದ ಕೋರಿ ಇವರ ಸಮ್ಮುಖದಲ್ಲಿ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಜಲ ಬಿರಾದರಿ ಸಂಸ್ಥೆಯ ಅಧ್ಯಕ್ಷ ಪೀಟರ್ ಅಲೆಕ್ಸಾಂಡರ್ ಅವರು ಮಾತನಾಡುತ್ತಾ, ನಗರದಲ್ಲಿರುವ ಐತಿಹಾಸಿಕ ಬಾವಿಗಳು ಪುನರುಜ್ಜೀವನ ಮಾಡಿದರೆ ನೀರಿನ ಹಾಹಾಕಾರ ತಪ್ಪಿಸಲು ಸಾಧ್ಯವಾಗಬಹುದು ಎಂದರು. ನೀರು ಬಾವಿಗಳು ರಕ್ಷಣೆ ಮಾಡಿ ಸರಿಯಾದ ನಿರ್ವಹಣೆ ಮಹಾನಗರಪಾಲಿಕೆಯಿಂದ ನಿರ್ವಹಣೆ ಮಾಡಬೇಕೆಂದು ಅಧಿಕಾರಿಗಳಿಗೆ ಮನವಿ ಮಾಡಿದರು.
ಅದೇ ರೀತಿ ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಗೂಳಪ್ಪ ಶೆಟ್ಟಿಗಾರ ಅವರು ಮಾತನಾಡಿ, ಈ ಕಾರ್ಯಗಳಿಂದ ಬಾವಿ ಸುತ್ತಮುತ್ತಲಿನ ಬಡಾವಣೆಯಲ್ಲಿರುವ ಸಾರ್ವಜನಿಕರಿಗೆ ಸ್ವಚ್ಚ ಗಾಳಿ ಬರುತ್ತದೆ. ಸೊಳ್ಳೆಗಳ ಕಾಟ ತಪ್ಪಿ ಜನರ ಆರೋಗ್ಯ ಹಾಳಾಗುವುದನ್ನು ತಪ್ಪಬಹುದು. ಒಟ್ಟಾರೆ ಉತ್ತಮ ಕಾರ್ಯವಾಗಿದೆ. ಪರಿಸರ ರಕ್ಷಣೆಯಾಗುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಗೂಳಪ್ಪ ಶೆಟಗಾರ ಅವರಿಗೆ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅವರು ಸನ್ಮಾನಿಸಿದರು.
ಹಾಗೆಯೇ ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಅವರನ್ನು ಕೂಡಾ ಜಲ ಬಿರಾದರಿ ಅಧ್ಯಕ್ಷ ಪೀಟರ್ ಅಲೆಕ್ಸಾಂಡರ್ ಸನ್ಮಾನಿಸಿದರು.
ಕರ್ನಾಟಕ ಜಲ ಬಿರಾದರಿ ಕಾರ್ಯದರ್ಶಿ ಬಾಳು ಜೇವೂರ ಕಾರ್ಯಕ್ರಮ ನಿರೂಪಿಸಿದರು.
ಸ್ವಚ್ಛತಾ ಕಾರ್ಯದಲ್ಲಿ
ಪಾಟೀಲ ಫೌಂಡೇಶನ್ ಸಂಸ್ಥೆ, ರಾಷ್ಟ್ರೀಯ ಅಪರಾಧ ನಿಯಂತ್ರಣ ಮಂಡಳಿ, ರಾಜೇಂದ್ರ ಫೌಂಡೇಶನ್, ಹ್ಯಾಪಿ ಕೇಕ್ , ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಆಂಡ್ ಕಲ್ಚರಲ್ ಹೇರಿಟೈಜ್, ಕ್ರಾಂತಿ ಅಸೋಸಿಯೇಷನ್,ಈ ಎಲ್ಲಾ ಸಂಸ್ಥೆಯಿಂದ ಬೆಂಬಲಿಸಿ ಸ್ವಯಂ ಸೇವಕರು ಭಾಗವಹಿಸಿದ್ದರು.
ಜಲ ಬಿರಾದರಿ ಪದಾಧಿಕಾರಿಗಳಾದ ಮಂಥನ ಜೋಶಿ, ಪ್ರವೀಣಗೌಡ ಪಾಟೀಲ, ಮಹಾಂತೇಶ ಕೆರೂಟಗಿ, ಆಕಾಶ ರಾಮತೀರ್ಥ, ನೂಹ್ ಪಠಾಣ, ಅಮೀನ ಹುಲ್ಲೂರು, ಸತೀಶ ದೇಶಮುಖ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಜನ ಸ್ವಯಂಸೇವಕರು ಸ್ವಚ್ಛತೆಯಲ್ಲಿ ತೊಡಗಿದ್ದರು.