ಭಾರತ ವಿಶ್ವಗುರುವಾಗಿ ರೂಪಿಸಲು ಬಿಜೆಪಿ ಬೆಂಬಲಿಸುವುದು ಅಗತ್ಯ :ಕಿಚಡಿ ಕೊಟ್ರೇಶ್
ಸಂಜೆವಾಣಿ ವಾರ್ತೆ
ಹೊಸಪೇಟೆ ಫೆ26: ಭಾರತವನ್ನು ವಿಶ್ವಗುರುವಾಗಿಸಲು ಪ್ರತಿಯೊಬ್ಬ ಯುವಕರು ಹಾಗೂ ದೇಶವಾಸಿಗಳು ಬಿಜೆಪಿ ಗೆಲುವಿಗೆ ಶ್ರವಿಸುವುದು ಅಗತ್ಯವಾಗಿದೆ ಎಂದು ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಕಿಚಡಿ ಕೊಟ್ರೇಶ್ ಹೇಳಿದರು.
ದೆಹಲಿ ಸೇ ಗ್ರಾಮತಕ್ಕ ಚಲೋ ಹಾಗೂ ಮತ್ತೊಮ್ಮೆ ಮೋಧಿ ಸರ್ಕಾರ ಗೋಡೆ ಬರಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ನರೇಂದ್ರ ಮೋದಿಯವರು ಸದೃಢ ರಾಷ್ಟ್ರ ನಿರ್ಮಾಣದಲ್ಲಿ ತಮ್ಮನು ತಾವು ತೊಡಗಿಸಿಕೊಂಡಿದ್ದು ಉತ್ತಮ ಗುರಿಯೊಂದಿಗೆ ಸಾಗುತ್ತಿದ್ದಾರೆ, ಈ ಬೆಳೆವಣಿಗೆ ಹಾಗೂ ವಿದೇಶಗಳಲ್ಲಿ ಅವರು ಹೊಂದಿದ ಭಾಂಧವ್ಯದ ಫಲವಾಗಿ ಭಾರತ ಇಂದು ವಿಶ್ವಗುರುವಾಗುವ ಹಂತಕ್ಕೆ ಬಂದು ನಿಂತಿದ್ದು ಮತ್ತೊಮ್ಮೆ ಮೋದಿಯವರು ಪ್ರಧಾನಿಯಾಗಲು ಪ್ರೇರಣೆ ನೀಡುವಂತೆ ಹಾಗೂ ವಾಸ್ತವವನ್ನು ದೇಶದ ಜನತೆಗೆ ತಿಳಿಸುವ ಕೆಲಸವನ್ನು ಪ್ರತಿಯೊಬ್ಬ ಕಾರ್ಯಕರ್ತರು ನಿರ್ವಹಿಸಬೇಕು ಅದರಲ್ಲೂ ಯುವ ಮೊರ್ಚಾ ಕಾರ್ಯಕರ್ತರು ಹಗಲಿರುಳು ಶ್ರಮಿಸಬೇಕಾಗಿದೆ ಎಂದರು.
ಹಂಪಿ ಗ್ರಾಮ ಪಂಚಾಯಿತಿಯ ಪ್ರತಿ ಮನೆ, ಗೋಡೆಗಳಿಗೆ ಮತ್ತೊಮ್ಮೆ ಮೋದಿ ಸರ್ಕಾರ ಎಂದು ಬರಹಗಳನ್ನು ಹಾಕಿ ಘೋಷಣೆಯನ್ನು ಕೂಗುವದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿದೇಶಿ ಪ್ರವಾಸಿಗರಾದ ದಕ್ಷಿಣ ಕೋರಿಯಾದ ಸೋನೈನ್‍ಜಿಂಗ್, ಪೋಲ್ಯಾಂಡ್ ದೇಶದ ಕಿಲಿಯಾವಿಲಿಯಂ ಸಹ ಸ್ವ-ಇಚ್ಛೆಯಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮೋದಿ ಪರ ಘೋಷಣೆ ಕೂಗಿದ್ದು ವಿಶೇಷವಾಗಿತು.  
ಹೊಸಪೇಟೆ ತಾಲೂಕು ಯುವ ಮೋರ್ಚಾ ಅಧ್ಯಕ್ಷ ಶ್ರೀಕಾಂತ ಪೂಜಾರ್, ಜಿಲ್ಲಾ ಉಪಾಧ್ಯಕ್ಷ ವೀರೇಶ್, ಪ್ರಧಾನ ಕಾರ್ಯದರ್ಶಿ ಸಚೀನ್‍ಕುಮಾರ, ಪ್ರದೀಪ್‍ಕುಮಾರ, ಕಾರ್ಯದರ್ಶಿ ಬಿ.ಮಹಾಲಕ್ಷ್ಮೀ, ಸೂರಜ್, ದೊರೆರಾಜ್, ಶಿವಕುಮಾರ, ಲೋಕೇಶ್, ವಿ.ರಮೇಶ್ ಷಣ್ಮುಖಯ್ಯ, ಸತ್ಯವೇಲು, ವಿರೂಪಾಕ್ಷಿ ಸೇರಿದಂತೆ ಇತರರು ಇದ್ದು ಹಂಪಿ ಗ್ರಾಮ ಪಂಚಾಯಿತಿಯ ಭಾಗಗಳಲ್ಲಿ ಗೋಡೆ ಬರಹ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
One attachment • Scanned by Gmail