ಪ್ರತಿಭೆ ಎಲ್ಲರಲ್ಲಿ ಇರುತ್ತದೆ ಗುರುತಿಸಿಕೊಂಡು ಪ್ರಯತ್ನ ಮಾಡಬೇಕು
ಸೈದಾಪುರ:ಫೆ.26:ಪ್ರತಿಭೆ ಎಲ್ಲರಲ್ಲಿ ಇರುತ್ತದೆ. ಇದನ್ನು ಗುರುತಿಸಿಕೊಂಡು ಆತ್ಮವಿಶ್ವಾಸದೊಂದಿಗೆ ಪ್ರಯತ್ನ ಮಾಡಬೇಕು. ನಿಂದನೆಗೆ ಕಿವಿಗೊಡದೆ ಛಲದೊಂದಿಗೆ ಮುಂದೆ ಸಾಗಬೇಕು. ಇದೊಂದು ಅಂತ್ಯಂತ ಸುಲಭದ ಕೆಲಸವಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಸಣ್ಣ ಸಿದ್ರಾಮಪ್ಪಗೌಡ ಬೆಳಗುಂದಿ ಅಭಿಪ್ರಾಯಪಟ್ಟರು.
ಪಟ್ಟಣದ ಮಲ್ಹಾರ ಕಾರಡ್ಡಿ ಬಸವಂತ್ರಾಯ ಮತ್ತು ಸಿದ್ದಪ್ಪ ಸ್ಮಾರಕ ವಿದ್ಯಾ ವರ್ಧಕ ಪದವಿ ಪೂರ್ವ ಕಾಲೇಜಿನ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಆಯೋಜಿಸಲಾದ ಬೀಳ್ಕೊಡುಗೆ ಕಾರ್ಯಕ್ರಮ ಚಾಲನೆ ನೀಡಿ ಮಾತನಾಡಿದರು. ತಂದೆ ತಾಯಿಗಳು ಮಕ್ಕಳ ಬದುಕಿನ ಕನಸನ್ನು ಕಂಡಿರುತ್ತಾರೆ. ಅವರಿಗೆ ಗೌರವ ತರುವ ರೀತಿಯ ವರ್ತನೆ ನಮ್ಮದಾಗಬೇಕು. ಅಂದಾಗ ನಾವು ಕಲಿತ ಶಿಕ್ಷಣಕ್ಕೆ ಮಹತ್ವ ಬರುತ್ತದೆ ಎಂದು ಕಿವಿ ಮಾತುಗಳನ್ನು ಹೇಳಿದರು.
ಲಿಂಗೇರಿ ಸ್ಟೇಷನ ಮುರಾರ್ಜಿ ವಸತಿ ಶಾಲೆಯ ಪ್ರಾಂಶುಪಾಲ ಸುರೇಶ ತಳಿಬಿಡಿ ಮಾತನಾಡಿ, ಗ್ರಾಮೀಣ ಭಾಗದ ಮೊದಲನೇ ತಲೆಮಾರಿನ ವಿದ್ಯಾರ್ಥಿಗಳಾದ ನಮ್ಮ ಕನಸು ನನಸಾಗಬೇಕಾದರೆ ಗುರುಗಳ ಮಾರ್ಗದಶನ ಅತ್ಯವಶ್ಯಕವಾಗಿದೆ. ಅವರನ್ನು ಗೌರವದಿಂದ ಕಾಣುವ ಜೊತೆಗೆ ಸತತ ಪರಿಶ್ರಮದಿಂದ ಪ್ರಯತ್ನ ಮಾಡಿದಾಗ ಮಾತ್ರ ಉತ್ತಮ ಸಾಧನೆ ನಮ್ಮದಾಗುತ್ತದೆ ಎಂದು ಹೇಳಿದರು.
ಪಿಯುಸಿ ನಂತರ ಮುಂದಿನ ವಿದ್ಯಾಭ್ಯಾಸಕ್ಕಾಗಿ ಅನುಕೂಲವಾಗಲೆಂದು ಗಡಿ ಗ್ರಾಮೀಣ ಭಾಗದವರಿಗಾಗಿ ಸಂಸ್ಥೆಯವರು ನೂತನವಾಗಿ ಕಲಾ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯವನ್ನು ಪ್ರಾರಂಭ ಮಾಡಿದ್ದಾರೆ. 2024-25ನೇ ಶೈಕ್ಷಣಿಕ ವರ್ಷದಲ್ಲಿ ಕಾರ್ಯ ನಿರ್ವಹಿಸುತ್ತಿದ್ದೂ ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.
ಲಿಂಗಾರೆಡ್ಡಿ ನಾಯಕ ಮುಖ್ಯಗುರುಗಳು ವಿ.ವ.ಪ್ರೌ.ಶಾಲೆ ಸೈದಾಪುರ