ಬಿಜೆಪಿ ಅಧ್ಯಕ್ಷರಾಗಿ ರವೀಂದ್ರ ಸಜ್ಜನಶೆಟ್ಟಿ ಆಯ್ಕೆ
ಚಿತ್ತಾಪುರ:ಫೆ.26:ಭಾರತೀಯ ಜನತಾ ಪಕ್ಷದ ತಾಲೂಕು ಅಧ್ಯಕ್ಷರನ್ನಾಗಿ ರವೀಂದ್ರ ಸಜ್ಜನಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ಶಿವರಾಜ್ ಪಾಟೀಲ ರದ್ದೆವಾಡಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಕ್ಷದ ಹಿರಿಯರು ಮಾಜಿ ಶಾಸಕರು ಯುವಕರು ಆಶೀರ್ವಾದಿಂದ ಪಕ್ಷವು ಅಧ್ಯಕ್ಷ ಸ್ಥಾನದ ಜವಾಬ್ದಾರಿ ಕೊಟ್ಟಿದ್ದಾರೆ ಆ ಸ್ಥಾನಕ್ಕೆ ಕಪ್ಪು ಚುಕ್ಕೆ ಬರದ ಹಾಗೆ ಜವಾಬ್ದಾರಿಯಿಂದ ಮುನ್ನಡೆಸಿಕೊಂಡು ಹೋಗುತ್ತೇನೆ. ಬಿಜೆಪಿ ಜಿಲ್ಲಾಧ್ಯಕ್ಷರ ಆದೇಶದ ಮೇರೆಗೆ ಮಾ.4ರಂದು ಅಧಿಕಾರ ಸ್ವೀಕರಿಸಲಾಗುವುದು. ನಂತರ ತಾಲೂಕು ಪದಾಧಿಕಾರಿಗಳು ಹಾಗೂ ಪಕ್ಷದ ಎಲ್ಲ ಮೋರ್ಚಾ ಅಧ್ಯಕ್ಷರ ಹಾಗೂ ಪದಾಧಿಕಾರಿಗಳ ಆಯ್ಕೆ ಮಾಡಲಾಗುವುದು ಎಂದು ನೂತನ ಅಧ್ಯಕ್ಷರು ತಿಳಿಸಿದ್ದಾರೆ.