ಪ್ರಶಸ್ತಿ ಪುರಸ್ಕಾರಗಳಿಂದ ಸಾಧಕರಿಗೆ ಹೆಚ್ಚಿನ ಪ್ರೋತ್ಸಾಹ :ಪ್ರೊ.ವಿಜಯಕುಮಾರ ಸೂರ್ಯಾನ್
ಬೀದರ:ಫೆ.26:ಔರಂಗಾಬಾದ ನಲ್ಲಿರುವ ಬಳವಂತರಾವ ವರಾಳೆ ಸ್ಮರಣಾರ್ಥ ಪ್ರತಿಷ್ಠಾನದ ವತಿಯಿಂದ ಶಿಕ್ಷಣ ಕ್ಷೇತ್ರದಲ್ಲಿ ಅದ್ಭುತ ಸೇವೆ ಸಲ್ಲಿಸಿರುವ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವ ಭಾಲ್ಕಿಯ ಚನ್ನಬಸವೇಶ್ವರ ಪದವಿ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲ ಪೆÇ್ರ. ವಿಜಯ ಕುಮಾರ ಸೂರ್ಯಾನರವರಿಗೆ 2024 ನೆ ಸಾಲಿನ ನಾವು ಭಾರತೀಯ ವಿಶೇಷ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿರುವ ಹಿನ್ನೆಲೆಯಲ್ಲಿ ಇಂದು ಜೈಹಿಂದ್ ಹಿರಿಯ ನಾಗರಿಕರ ವತಿಯಿಂದ ಗೌರವ ಸನ್ಮಾನ ನೀಡಲಾಯಿತು.
ಸನ್ಮಾ ನ ಸ್ವೀಕರಿಸಿ ಮಾತನಾಡಿದ ಪೆÇ್ರ. ವಿಜಯಕುಮಾರ ಸೂರ್ಯಾನರವರು ರಾಷ್ಟ್ರ ಮಟ್ಟದ ವಿಶೇಷ ಪ್ರಶಸ್ತಿಯನ್ನು ನೀಡಿರುವುದು ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ಶಿಕ್ಷಣ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಇನ್ನೂ ಹೆಚ್ಚು ಸಕ್ರೀಯವಾಗಿರುವುದಕ್ಕೆ ಇದು ಪ್ರೇರಣೆಯಾಗಿದೆ ಎಂದರು. ಹಿರಿಯ ಉದ್ಯಮಿ
ಆರ್. ಆರ್. ಮುನಿಗ್ಯಾಲ ರವರು ಅಧ್ಯಕ್ಷತೆ ವಹಿಸಿದ್ದರು.
ಕಾರ್ಯದರ್ಶಿ ವೀರಭದ್ರಪ್ಪ ಉಪ್ಪಿನ ನಿರೂಪಿಸಿದರು. ಕೊನೆಯಲ್ಲಿ ಕೋಷಾಧ್ಯಕ್ಷರಾದ ಗಂಗಪ್ಪ ಸಾವಳೆಯವರು ಕೊನೆಯಲ್ಲಿ ವಂದಿಸಿದರು. ರಾಜೇಂದ್ರ ಸಿಂಗ್ ಪವಾರ, ರಾಮಕೃಷ್ಣ ಸಾಲೆ, ಕಲ್ಪನಾ ವಿನಾಯಕ ದೇಶಪಾಂಡೆ, ಬಸವರಾಜ್ ಘುಲೆ, ಗುಂಡೆ ರಾವ ದೇಶಮುಖ, ಶಂಕರ್ ಚಿದ್ರಿ, ಎಂ.ಎನ್.ಕುಲಕರ್ಣಿ, ಸುಧಾಕರ ಗಾದಗಿ, ಮಚೆಂದ್ರ ಎಕ್ಲಾರ್, ವೈಭವ, ಸಿಮ್ರಾನ್, ಮುಂತಾದವರು ಭಾಗವಹಿಸಿದ್ದರು