ಸಂಜೀವಿನಿ ಫಾರ್ಮಸಿ ಕಾಲೇಜಿನಲ್ಲಿ ರೋಟರಿ ದಿನಾಚರಣೆ
ವಿಜಯಪುರ,ಫೆ.26:ರೋಟರಿ ದಿನಾಚಣೆಯ ಅಂಗವಾಗಿ ನಗರದ ಸಂಜೀವಿನಿ ಶಿಕ್ಷಣ ಸಂಸ್ಥೆ ಮತ್ತು ರೋಟರಿ ಕ್ಲಬ್ ಆಫ್ ಬಿಜಾಪುರ ಉತ್ತರ ಹಾಗೂ ಜಿಲ್ಲಾ ಆಸ್ಪತ್ರೆ ಇವರ ಸಂಯುಕ್ತ ಆಶ್ರಯಯದಲ್ಲಿ ಸಂಜೀವಿನಿ ಫಾರ್ಮಸಿ ಕಾಲೇಜಿನಲ್ಲಿ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು.
ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ರಾಜಶೇಖರ ಡಂಬಳ ಮುಖ್ಯ ಅತಿಥಿಗಳಾಗಿ ಮಾತನಾಡಿ, ವಿಶ್ವದಲ್ಲಿ ಪೊಲಿಯೋ ನಿರ್ಮೂಲನಕ್ಕಾಗಿ ರೋಟರಿ ಸಂಸ್ಥೆಯ ಕೊಡುಗೆ ಅಪಾರವಾದದ್ದು ಎಂದರು.
ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಶಿವಾನಂದ ಮಾಸ್ತಿಹೊಳಿ ಮಾತನಾಡಿ, ರಕ್ತದಾನದ ಬಗ್ಗೆ ಜಾಗೃತಿ ಮೂಡಿಸಿದರು. ಇದೇ ಸಂದರ್ಭದಲ್ಲಿ ಸಂಜೀವಿನಿ ಫಾರ್ಮಸಿ ನರ್ಸಿಂಗ್ ಪ್ಯಾರಾಮೆಡಿಕಲ್ ವಿದ್ಯಾರ್ಥಿಗಳು ರಕ್ತದಾನ ಮಾಡಿದರು.
ರೋಟರಿ ಕ್ಲಬ್‍ನ ಅಧ್ಯಕ್ಷ ಮಲ್ಲು ಕಲಾದಗಿ, ಸಂಸ್ಥೆಯ ಅಧ್ಯಕ್ಷ ಡಾ. ಸಿದ್ದಪ್ಪ ಸೊನ್ನದ, ಪ್ರಾಚಾರ್ಯ ಬಸವರಾಜ ಸೊನ್ನದ ರಕ್ತದಾನ ಮಾಡುವ ಮೂಲಕ ಮಾದರಿಯಾದರು.
ಕಾರ್ಯದರ್ಶಿ ರಾಜ ಶಹಾ, ಡಾ. ಪ್ರಾಣೇಶ ಜಾಗೀರದಾರ, ಸಂತೋಷ ಔರಸಂಗ, ಮೋಹನ ಬಗಲಿ, ವಾಡೇಕರ ಉಪಸ್ಥಿತರಿದ್ದರು.