ಸಮರ್ಪಕ ನೀರು ಪೂರೈಕೆಗೆ ಆಗ್ರಹ
ಸಂಜೆವಾಣಿ ವಾರ್ತೆ
ಸಂಡೂರು :ಫೆ:26 ಸಂಡೂರ ತಾಲ್ಲೂಕಿನ ತೋರಣಗಲ್ಲು ಹೋಬಳಿಯ ತಾಳೂರು ಗ್ರಾಮದ 3 ಮತ್ತು 4ನೇ ವಾರ್ಡ್‍ಗಳಲಿ 15 ದಿನಗಳಿಂದ ನೀರಿನ ಸಮಸ್ಯೆ ತಲೆದೂರಿದ್ದು, ಗ್ರಾ.ಫಂ ವಿರುದ್ದ ಮಹಿಳೆಯರು ಖಾಲಿ ಕೊಡಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು. ಗ್ರಾಮದ ಇತರೆ ವಾರ್ಡಿನ ಜನರು ಎಲ್ಲಾ ಸಾರ್ವಜನಿಕ ನಳಗಳಿಗೆ ಮೋಟಾರು ಅಳವಡಿಸಿ ನೀರನ್ನು ಪಡೆಯುವುದರಿಂದ ನಮ್ಮ ವಾರ್ಡಿಗೆ ಸ್ವಲ್ಪವಾದರೂ ನೀರು ಬರುತ್ತಿಲ್ಲ. ನೀರಿಗಾಗಿ ಕೆಲಸ ಬಿಟ್ಟು ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಮೊಟಾರ ಅಳವಡಿಸುವವರ ವಿರುದ್ದ ಗ್ರಾ.ಪಂ ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.
ಪ್ರತಿಕ್ರಿಯೆ :
ಈ ವಾರ್ಡುಗಳಿಗೆ ನೀರು ಪೂರೈಸುವ ಕೊಳವೆ ಬಾವಿಯಲ್ಲಿ ನೀರು ಬತ್ತಿದರಿಂದ ನೀರಿನ ಸಮಸ್ಯೆ ಉಂಟಾಗಿದೆ. ಜನರ ಅನುಕೂಲಕ್ಕಾಗಿ ಬೇರೆ ಕೊಳವೆ ಬಾವಿಯಿಂದ ನೀರನ್ನು ಪೂರೈಸಲಾಗುವುದು. ಸಾರ್ವಜನಿಕ ನಳಗಳಿಗೆ ಮೊಟಾರು ಅಳವಡಿಸುವವರ ವಿರುದ್ದ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪಿ.ಡಿ.ಓ. ಬೂದುಗುಂಪಿ ಪಕೀರಪ್ಪ ಪ್ರತಿಕ್ರಿಯಿಸಿದರು. ಪ್ರತಿಭಟೆನಯ ಸಂದರ್ಭದಲ್ಲಿ ನೀಲಮ್ಮ ಗಂಗಮ್ಮ ಯಲ್ಲಮ್ಮ ದಾನಮ್ಮ ಶಕುಂತಲಾ ರೂಪ ಗಂಗಮ್ಮ ನಾಗಮ್ಮ ಗೌರಮ್ಮ ರಾಜಮ್ಮ ಹುಸೇನ್ ಬಿ ಇತರರು ಉಪಸ್ಥಿತರಿದ್ದರು.
One attachment • Scanned by Gmail