ದೊಡ್ಡ ಅಂತಾಪುರ ಗ್ರಾಮದಲ್ಲಿ ಮಲಿಯಮ್ಮ ರಥೋತ್ಸವ
ಸಂಜೆವಾಣಿ ವಾರ್ತೆ
ಸಂಡೂರು :ಫೆ:26:  ಸಂಡೂರು ತಾಲ್ಲೂಕಿನ ತೋರಣಗಲ್ಲು ಹೋಬಳಿಯ ದೊಡ್ಡ ಅಂತಪುರ ಗ್ರಾಮದಲ್ಲಿ ಭಾರತ ಹುಣ್ನಿಮೆ ಪ್ರಯುಕ್ತ ಮಲಿಯಮ್ಮ ದೇವಿಯ 8ನೇ ವರ್ಷದ ಮಹಾರೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಬಣೆಯಿಂದ ನೆರವೇರಿತು. ವಿವಿಧ ಬಗೆಯಿಂದ ರಥೋತ್ಸವಕ್ಕೆ ಅಲಂಕಾರ ಮಾಡಲಾಗಿತ್ತು. ಮಲಿಯಮ್ಮ ದೇವಸ್ಥಾನದಿಂದ ಪಲ್ಲಕ್ಕಿ ಮೆರವಣಿಗೆಯಲ್ಲಿ ಸಾಗಿಬಂದ ದೇವಿಯ ಉತ್ಸವ ಮೂರ್ತಿಯನ್ನು ಮಹಾರಥದಲ್ಲಿ ಪ್ರತಿಷ್ಠಾಪಿಸಲಾಯಿತು. ನಂತರ ಭಕ್ತರ ಹರ್ಷೋದ್ಗಾರದ ನಡೆಉವೆ ದೇವಿಯ ರಥೊತ್ಸವ ಪ್ರಾರಂಬವಾಯಿತು. ಗ್ರಾಮದ ರಸ್ತೆಯುದ್ದಕ್ಕೂ ಮೆರೆದಿದ್ದ ರತೋತ್ಸವವನ್ನು ಕಣ್ತುಂಬಿಕೊಂಡರು. ಹಾಗೂ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಡೊಳ್ಳು, ನಗಾರಿ, ಸಮಾಳ ನಂದಿಕೋಲು ಕೋಲಾಟ ಭಜನೆ ಸೇರಿದಂತೆ ಇತರೆ ಕಲಾ ತಂಡಗಳು ಭಾಗವಹಿಸಿ ಮೆರಗು ತಂದವು.
ಈ ಸಂದರ್ಭದಲ್ಲಿ ಚಿಕ್ಕಂತಾಪುರ, ಕೋಡಾಲು ತುಮಟಿ, ವಿಠಲಾಪುರ, ಮಾಳಾಪುರ, ರಾಜಾಪುರ, ಮೆಟ್ರಿಕಿ ಹಾವಿನ ಮಡಗು ಕೆರೆರಾಂಪುರ ಕೊರವಟ್ಟಿ, ಲಿಂಗದಹಳ್ಳಿ, ಸುಲ್ತಾನಪುರ ಗ್ರಾಮಗಳು ಸೇರಿದಂತೆ ವಿವಿದ ಗ್ರಾಮಗಳ ಭಕ್ತರು ರಥೋತ್ಸವದಲ್ಲಿ ಭಾಗವಹಿಸಿದರು.