ರೇವಣಸಿದ್ದೇಶ್ವರ ಮಹಾ ರಥೋತ್ಸವ
ಕಲಬುರಗಿ:ಫೆ.26: ನಗರದ ಮಕ್ತಂಪುರ ಗದ್ದುಗೆಮಠದ ಶ್ರೀ ರೇವಣಸಿದ್ದೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಹಮ್ಮಿಕೊಂಡಿರುವ ಗುಡ್ಡಾಪೂರದ ದಾನಮ್ಮ ದೇವಿಯ ಜೀವನ ದರ್ಶನ ಪ್ರವಚನದಲ್ಲಿ ಶ್ರೀ.ಮ.ನಿ.ಪ್ರ ಚರಲಿಂಗ ಮಹಾಸ್ವಾಮೀಜಿ ನೇತೃತ್ವದಲ್ಲಿ ಶ್ರೀ ರೇವಣಸಿದ್ದೇಶ್ವರ ಮಹಾ ರತೋತ್ಸವ ಜರುಗಿತು.
ಈ ಸಂದರ್ಭದಲ್ಲಿ ಗುರು ಬಸವ ಮಠದ ಪೂಜ್ಯ ಶ್ರೀ ಶಿವಾನಂದ ಮಹಾಸ್ವಾಮೀಜಿ, ಕೆಲ್ಲೂರುನ ಪೂಜ್ಯ ಶ್ರೀ ಶಶಿಕುಮಾರ ದೇವರು, ತಾರಿಹಾಳನ ಪೂಜ್ಯಶ್ರೀ ಅಡವಿಶ ದೇವರು , ದೋಟಿಹಾಳನ ಶ್ರೀ ಚಂದ್ರಶೇಖರ್ ದೇವರು, ಪೂಜ್ಯಶ್ರೀ ಶಿವಬಸವ ದೇವರ ಧಾರವಾಡ ಮೃತ್ಯುಂಜಯ ದೇವರು ಕೊಲ್ಲೂರು, ಧಾರವಾಡನ ಪೂಜ್ಯಶ್ರೀ ಸರಪಭೂಷಣ ದೇವರು, ಪೂಜ್ಯ ಲಿಂಗರಾಜಪ್ಪ ಅಪ್ಪಾ, ಶ್ರೀ ಮಠದ ಹಿರಿಯರಾದ ರೇಣುಕಾನಂದ ಚೌದರಿ, ಅನವಿರಯ್ಯ ಕಾಳಗಿ, ಸಂಗಣ್ಣ ಉದ್ನೂರ್, ಗುಂಡಪ್ಪ ಗೌಳಿ, ಶರಣು ಪಪ್ಪಾ, ವೀರೇಶ ಸುಲೇಪೇಟೆ, ವಿಶ್ವನಾಥ ಚಿಂಚಪೂರ ಸೇರಿದಂತೆ ಅಕ್ಕನಬಳಗದ ತಾಯಂದಿರು, ಹಿರಿಯರು, ಮಹಿಳೆಯರು, ಯುವಕರು ಹಾಗೂ ಭಕ್ತಾಧಿಗಳು ಇದ್ದರು.