ವಿದ್ಯಾರ್ಥಿಗಳಿಗೆ ಸಮಯ ಪರಿಪಾಲನೆ ಮುಖ್ಯ
ಸಂಜೆವಾಣಿ ವಾರ್ತೆ
ಸಂಡೂರು :ಫೆ:26: ವಿದ್ಯಾರ್ಥಿಗಳಲ್ಲಿ ವಿನಯ ವಿಧೆಯತೆ ಸಮಯ ಪರಿಪಾಲನೆ ಗ್ರಂಥಾಲಯಗಲ ಬಳಕೆ ಗುರುಹಿರಿಯರಿಗೆ ಗೌರವ ನೀಡುವುದು ಬಹಳ ಪ್ರಮುಖವಾದ ಘಟ್ಟಗಳಾಗಿವೆ. ಇವೆಲ್ಲವನ್ನು ಪರಿಪಾಲಿಸಿ ಗುರುವಿನ ಮಾರ್ಗದರ್ಶನದಂತೆ ನಡೆದುಕೊಂಡರೆ ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ಹೊಂದುವುದರಲ್ಲಿ ಯಾವುದೇ ಸಂದೇಹವಿಲ್ಲ. ವಿದ್ಯಾರ್ಥಿಗಳ ಜೀವನ ಬದುಕು ಸುವರ್ಣಮಯವಾಗಿದ್ದು, ಸುವರ್ಣಮಯವಾದ ಜೀವನವನ್ನು ವಿದ್ಯಾರ್ಥಿಗಳು ಹೊಂದಿ ತಮ್ಮ ಬದುಕಿನ ಜೀವನವನ್ನು ಸಾರ್ಥಕ ಮಾಡಿಕೊಳ್ಳಬೇಕಾದುದು ಪ್ರತಿಯೊಬ್ಬ ವಿದ್ಯಾರ್ಥಿಗಳ ಕರ್ತವ್ಯವಾಗಿದೆ ಎಂದು ಎಸ್.ಇ.ಎಸ್. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಬಿ. ಶ್ರೀನಿವಾಸ ರವರು ತಿಳಿಸಿದರು.
ಅವರು ಕಪ್ಪಲಕುಂಟೆ ರಸ್ತೆಯಲ್ಲಿರುವ ಸರರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿವಿಧ ಸಮೀತಿಗಳ ಉದ್ಘಾಟನೆ, ಪ್ರಥಮ ವóರ್ಷದ ಪದವಿ ವಿದ್ಯರ್ಥಿಗಳಿಗೆ ಸ್ವಾಗತ ಸಮರಂಭರವನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದ ಸಮಾರಂಭದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ|| ಎಚ್. ಬಸವರಾಜ ಮಾತನಡಿ ರ್ಯಂಕ್ ಪಡೆದ ವಿದ್ಯಾರ್ಥಿಗಳು ನಿಮಗೆ ಸ್ಪೂರ್ತಿಯಾಗಬೇಕು. ವಿದ್ಯರ್ಥಿಗಳು ಸಾಧನೆ ಮಾಡಿದರೆ ಮಾತ್ರ ಕಾಲೇಜಿಗೆ ಒಳ್ಳೆಯೊ ಹೆಸರು ಬರಲು ಸಾಧ್ಯ ಎಂದು ತಿಳಿಸಿದರು. ಕಾಲೇಜು ಅಭಿವೃದ್ದಿ ಸಮಿತಿಯ ಸದಸ್ಯರಾದ ಜಿ. ವಿರೇಶ ಉಚಿತ ಕಾನೂನು ಸಲಹೆಗಾರ್ತಿ ವಕೀಲರಾದ ಜಿ.ಕೆ. ರೇಖಾ ಸಿ.ಎಂ. ಸಿಗ್ಗಾವಿ ಮಲ್ಲಿಕಾರ್ಜುನ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ವಿಶ್ವವಿದ್ಯಾನಿಲಯದ ಮಟ್ಟದಲ್ಲಿ ನೇ ರ್ಯಾಂಕ್ ಪಡೆದ ಬಿ.ಎಸ್. ವಿದ್ಯರ್ಥಿನಿ ಕುಮಾರಿ ಅಪ್ಸರ ಅವರಿಗೆ ಸನ್ಮಾನ ಮಡಲಾಯಿತು. ನಂತರ ಕಾಲೇಜು ಮಟ್ಟದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರಥಮ ಸ್ಥಾನ ಪಡೆದ ಬಿ.ಎ. ಬಿ.ಕಾಂ ಬಿ.ಬಿ.ಎ. ವಿದ್ಯರ್ಥಿಗಳಿಗೆ ಹಾಗೂ ಕ್ರೀಡೆಯಲ್ಲಿ ಸಾಧನೆ ಮಡಿದ ವಿಂದ್ಯಾರ್ತಿಗಳಿಗೆ ಸನ್ಮನಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಸಂಚಾಲಕರದಾ ಡಾ|| ಇ.ಜಿ. ರೇಖಾ ರವರು ಪ್ರಸ್ತಾವಿಕ ನುಡಿನ್ನಾಡಿ ಈ ಮೂರು ವರ್ಷದ ಅವಧಿಯ್ಲಲಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ತಿಳಿಸಿದರು. ಭವಿಷ್ಯ ರೂಪಿಸಿಕೊಳ್ಳಬೆಕಾದರೆ ಸಾಧನೆ ಮತ್ತು ಛಲ ಈ ಎರೆಡು ವಿದ್ಯರ್ಥಿಗಳಲ್ಲಿ ಇರಬೆಕಾಗಿದೆ. ಅಂದರೆ ಮಾತ್ರ ಏನಾದರೂ ಪ್ರಗತಿ ಸಾಧಿಸಲು ಸಾಧ್ಯ ಎಂದು ತಿಳಿಸಿದರು. ಇಂಗ್ಲಷ್ ವಿಭಗದ ಸಹಾಯಕ ಅಧ್ಯಾಪಕರಾದ ಅಸ್ಮಾ ತಬಸ್ಸುಮ್ ರವರು ಸ್ವಗತ ಕೊರಿದರು. ಶಂಕರೆಗೌಡ ಹಾಗೂ ಇ.ಜಿ. ಕಿಶೋರ್ ಅವರು ಕಾರ್ಯಕ್ರಮವನ್ನ ನಿರೂಪಿಸಿದರು. ಇತಿಹಾಸ ವಿಭಾಗದ ಉಪನ್ಯಾಸಕ ಮುರುಳಿದರ ವಂದಿಸಿದರು. ದೈಹಿಕ ಶಿಕ್ಷಣ ಉಪನ್ಯಾಸಕರಾದ ಲಿಂಗನಾಯಕ ಅವರು ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು.