ಚೆನ್ನಬಸವಣ್ಣ ಶುದ್ಧ ಜ್ಞಾನಮಾರ್ಗದ ಬೋಧಕ
ಚನ್ನಮ್ಮನ ಕಿತ್ತೂರ,ಫೆ.26. ಬಸವಣ್ಣನವರೇ ತನ್ನ ಗುರುವೆಂದೂ ಇಷ್ಟಲಿಂಗವನ್ನು ದಯಪಾಲಿಸಿ ತನ್ನನ್ನು ಉದ್ಧರಿಸಿದ ಮಹಾತ್ಮರೆಂದೂ ಹೇಳಿಕೊಂಡ ಚೆನ್ನಬಸವಣ್ಣ ಶುದ್ಧ ಜ್ಞಾನಮಾರ್ಗದ ಬೋಧಕನಾಗಿ ಹೆಸರು ಪಡೆದಿದ್ದಾನೆಂದು ಧಾರವಾಡ ಮುರಘಾಮಠದ ಡಾ. ಮಲ್ಲಿಕಾರ್ಜುನ ಸ್ವಾಮಿಜೀ ಹೇಳಿದರು.
ತಾಲೂಕಿನ ಬೈಲೂರು ಗ್ರಾಮದ ಚಿನ್ಮಯ ಜ್ಞಾನಿ ಶ್ರೀ ಚನ್ನಬಸವೇಶ್ವರ ಜಾತ್ರಾ ಮಹೋತ್ಸವ ಹಾಗೂ ವಚನ ಸಾಹಿತ್ಯ, ಗುರುವಂದನಾ ಸಂಭ್ರಮ ಮತ್ತು ಚನ್ನಬಸವೇಶ್ವರ ಮೂರ್ತಿ, ನೂತನ ಕಲ್ಲಿನ ಬಾಗಿಲು ಅನಾವರಣ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ ಸತ್ಕಾರ ಸ್ವೀಕರಿಸಿ ಮಾತನಾಡಿ ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ನಮ್ಮ ಜೀವನ ಒಳ್ಳೆಯದ್ದಾಗುತ್ತದೆ ಎಂದರು.
ಗಂದಿಗವಾಡದ ಮೃತ್ಯಂಜಯ ಸ್ವಾಮಿಜಿ ಮಾತನಾಡಿ ನಿಜಗುಣಾನಂದ ಶ್ರೀಗಳು ಸಾವಿರ ಇತಿಹಾಸ ಹೊಂದಿದ ಈ ಗ್ರಾಮಕ್ಕೆ ಚನ್ನಬಸವಣ್ಣನವರು ಆಗಮಿಸಿದ್ದರು. ಅಂತಹ ಶರಣರನ್ನು ಈ ಗ್ರಾಮಕ್ಕೆ ಪರಿಚಯಿಸಿ ಸಾಹಿತ್ಯ ಲೋಕದೆಡೆಗೆ ಕೊಂಡ್ಯೊವ ಕಾರ್ಯ ಮಾಡಿದ್ದಾರೆಂದರು.
ನಿಷ್ಕಲ ಮಂಟಪ ಬೈಲೂರ ನಿಜಗುಣಾನಂದ ಸ್ವಾಮಿಜೀ ಮಾತನಾಡಿ ಗುರುಭಕ್ತಿ ಇಲ್ಲದಿದ್ದರೆ ಸಂಸ್ಕಾರ ಹೋಗುತ್ತದೆ. ಗುರು ಇಲ್ಲದಿದ್ದರೆ ವಿದ್ಯೆಯಿಲ್ಲ. ಅದಕ್ಕಾಗಿ ಗುರುಗಳನ್ನು ನಾವೆಲ್ಲರೂ ಮರೆಯಬಾರದು..ಸ್ವಾಮಿಎಂದು ಪಟ್ಟಕಟ್ಟಿಕೊಂಡವರು ತಂದೆ-ತಾಯಿಗೆ ಎಂದು ಗುರುವಾಗುವುದಿಲ್ಲ. ಆತ ಮಗನೇ ಆಗಿರುತ್ತಾನೆಂದರು.
ಮಾಜಿ ಜಿಪಂ ಸದಸ್ಯನಿ ರೋಹಿನಿ ಪಾಟೀಲ ಮಾತನಾಡಿ ಒಳ್ಳೆಯ ಸಂಸ್ಕಾರ ಪಡೆದ ನಮ್ಮ ದೇಶ, ಬಸವಾದಿ ತತ್ವ, ಶರಣರ ತತ್ವದಡಿಯಲ್ಲಿ ಮಹಿಳೆಯರಿಗೂ ಸರಿಸಮಾನ ಹಕ್ಕು ದೊರೆತದ್ದೂ ಬಸವಣ್ಣನವರ ಕಾಲದಲ್ಲಿ ಇಂತ ಪುಣ್ಯಭೂಮಿಯಲ್ಲಿ ವೀರರಾಣಿ ಚನ್ನಮ್ಮ ಹುಟ್ಟಿದ್ದು ನಮ್ಮೇಲ್ಲರ ಭಾಗ್ಯ. ನಾವೆಲ್ಲರೂ ಶಿವ-ಶರಣರ ಹಾದಿಯಲ್ಲಿ ನಡೆಯಬೇಕೇಂದರು.
ಪ್ರಾಸ್ತಾವಿಕವಾಗಿ ಅತ್ತಿವೇರಿ ಮಠದ ಶ್ರೀ ಮಾತೆ ಬಸವೇಶ್ವರಿ, ಬಾಲ್ಕಿಯ ಗುರುಬಸವ ಪಟ್ಟ್ದದದೇವರು,, ನೇಗಿನಹಾಳ ಬಸವಪ್ರಕಾಶ ಸ್ವಾಮಿಜೀ, ಗುಳೇದಗುಡ್ಡದ ಗುರುಬಸವ ದೇವರು, ಗಂದಿಗವಾಡದ ಜಯಮೃತ್ಯಂಜಯ ಸ್ವಾಮಿಜೀ, ಇನ್ನೂ ಹಲವರು ಸ್ವಾಮಿಜೀಗಳು ಮಾತನಾಡಿದರು.
ಇದಕ್ಕೂ ಪೂರ್ವದಲ್ಲಿ ಸಾಮೂಹಿಕ ಕಲ್ಯಾಣಮಹೋತ್ಸವ ಹಾಗೂ ಕಳಸಾರೋಹಣ ಏರ್ಪಟ್ಟಿತ್ತು.
ಉದ್ಘಾಟಕರಾಗಿ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ, ಅಧ್ಯಕ್ಷತೆ ಗ್ರಾಪಂ ಅಧ್ಯಕ್ಷ ಬಸವರಾಜ ಲದ್ದಿಮಠ ವಹಿಸಿಕೊಂಡಿದ್ದರು.
ಆರ್ಶೀವಚನ ಬಾಲ್ಕಿಯ ಹಿರೇಮಠದ ನಾಡೋಜ ಡಾ.ಶ್ರೀ ಬಸವಲಿಂಗ ದೇವರು,
ವೇದಿಕೆಯಲ್ಲಿ ಹಾಸನ ಜಿಲ್ಲೆ ಬೇಲೂರು ಮಹಾಂತ ಸ್ವಾಮಿ, , ಅವರೊಳ್ಳಿಯ ಶ್ರೀ ಚನ್ನಬಸವ ದೇವರು.
ಈ ವೇಳೆ ಗ್ರಾಮದ ಹಿರಿಯರು, ಯುವಕರು, ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷ, ಸರ್ವಸದಸ್ಯರು, ಪಿಡಿಓ ಜಯರಾಮ ಕಾದ್ರೋಳ್ಳಿ,ಅಶೋಕ ಮಾಳಗಿ, ರಮೇಶ ಮೊಕಾಶಿ, ಶ್ರೀಶೈಲ ಶರಣಪ್ಪನವರ, ಸಮಾಜ ಕಲ್ಯಾಣ ಅಧಿಕಾರಿ ಸಿ.ಬಿ.ಯಮನೂರ, ರಾಜಾಸಲೀಂ ಕಾಶೀಮನವವರ, ಕಿರಣ ವಾಳದ, ರಾಜು ಜಾಗಂಟಿ, ಬಸವರಾಜ ಚಿನಗುಡಿ, ಶಿಕ್ಷಕ ಈರಣ್ಣಾ ನಂದಿಹಳ್ಳಿ, ಸುತ್ತಮುತ್ತಲಿನ ಗ್ರಾಮಸ್ಥರು, ಸಾರ್ವಜನಿಕರು ಉಪಸ್ಥಿತರಿದ್ದರು.