ಬಸ್ ಸಂಚಾರಕ್ಕೆ ಅವಕಾಶ ನೀಡಲು ಮನವಿ
ಲಕ್ಷ್ಮೇಶ್ವರ,ಫೆ.26: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಲಕ್ಷ್ಮೇಶ್ವರ ಘಟಕದಿಂದ ಸಂಚರಿಸುವ ಲಕ್ಷ್ಮೇಶ್ವರ ಹುಬ್ಬಳ್ಳಿ ಬಸ್ಸುಗಳಿಗೆ ಸಂಚಾರದಟ್ಟಣೆಯ ನೆಪವಡ್ಡಿ ಬಸುಗಳನ್ನು ಬೈಪಾಸ್ ರಸ್ತೆ ಇಂಡಿ ಪಂಪು ಗೋಕುಲ್ ರಸ್ತೆ ಮೂಲಕ ಹೊಸೂರ್ ಬಸ್ ನಿಲ್ದಾಣಕ್ಕೆ ತಲುಪುತ್ತಿದೆ.
ಆದರೆ ಲಕ್ಷ್ಮೇಶ್ವರದಿಂದ ಹೊರಡುವ ಬಸ್ಸುಗಳಲ್ಲಿ ಲಕ್ಷ್ಮೇಶ್ವರ ರಾಮಗಿರಿ ಪಶುಪತಿಹಾಳ ಸಂಶಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಪ್ರಯಾಣಿಕರು ಹುಬ್ಬಳ್ಳಿ ಬಸ್ಸಿನಲ್ಲಿ ಪ್ರಯಾಣಿಸಿ ಗಬ್ಬೂರು ಕ್ರಾಸ್ ಮಾರ್ಗವಾಗಿ ಬಿಡ್ನಾಳ ಕ್ರಾಸು ಬಂಕಾಪುರ ಚೌಕು ನ್ಯೂ ಇಂಗ್ಲಿಷ್ ಹೈ ಸ್ಕೂಲ್ ಮಾರ್ಗವಾಗಿ ಹಳೆ ಬಸ್ ನಿಲ್ದಾಣಕ್ಕೆ ತಲುಪಿ ಅಲ್ಲಿಂದ ತಮ್ಮ ಕಾರ್ಯ ಚಟುವಟಿಕೆಗಳಿಗೆ ಅಡಿಯಾಗುತ್ತಿದ್ದಾರೆ.
ಆದರೆ ಸಂಚಾರದಟ್ಟಣೆಯ ನೆಪವಡ್ಡಿ ಮಾಡಿರುವ ಆದೇಶ ಪ್ರಯಾಣಿಕರನ್ನು ಹೈರಾಣ ಮಾಡುತ್ತಿದೆ ಬಹುತೇಕ ಪ್ರಯಾಣಿಕರು ಹಳೆ ಬಸ್ ನಿಲ್ದಾಣ ಸ್ವಲ್ಪ ಬೇಕಾದರೆ ಈಗ ಗೋಕುಲ್ ರಸ್ತೆಗೆ ಇಳಿದು ಇಲ್ಲವೇ ಹೊಸೂರ್ ಕ್ರಾಸ್ ಗೆ ಇಳಿದು ಪುನಃ ಹಳೆ ಬಸ್ ನಿಲ್ದಾಣಕ್ಕೆ ಬರಬೇಕಾದ ಅನಿವಾರ್ಯತೆ ಎದುರಾಗಿದೆ.
ಆದರೆ ಈಗ ಹುಬ್ಬಳ್ಳಿ ಗ್ರಾಮಾಂತರ ಪ್ರದೇಶ ಸವಣೂರು ಶಿಗ್ಗಾವಿ ತಲಘಟಗಿ ನವಲಗುಂದ ನರಗುಂದ ಬಿಜಾಪುರ ಬಾಗಲಕೋಟೆ ಮುಂಡರಗಿ ಶಿರಹಟ್ಟಿ ಸೇರಿದಂತೆ ನಗರ ಸಾರಿಗೆಯ ಎಲ್ಲಾ ಬಸ್ಸುಗಳು ಚೆನ್ನಮ್ಮ ವೃತ್ತವನ್ನು ಬಳಸಿಯೇ ಹೋಗುತ್ತಿವೆ ಸಾಕಷ್ಟು ಸಂಚಾರದಟ್ಟಣೆ ಆಗುತ್ತಿದೆ ಈಗ ಕೇವಲ ಲಕ್ಷ್ಮೇಶ್ವರ ಘಟಕದ ಹುಬ್ಬಳ್ಳಿ ಬಸ್ಸುಗಳಿಗೆ ಮಾತ್ರ ಸಂಚಾರಿ ಪೆÇಲೀಸರು ಪ್ರವೇಶ ನಿರಾಕರಿಸುತ್ತಿರುವುದರಿಂದ ಪ್ರಯಾಣಿಕರು ಹೈರಾಣ ಆಗುತ್ತಿದ್ದಾರೆ ಸಾವಿರಾರು ವಾಹನಗಳು ಚೆನ್ನಮ್ಮ ವೃತ್ತದ ಮುಖಾಂತರ ಹಳೆ ಬಸ್ ನಿಲ್ದಾಣದ ಬಳಿ ನಿಲುಗಡೆ ಆಗಿ ಹೊಸೂರು ಬಸ್ ನಿಲ್ದಾಣ ತಲುಪುತ್ತಿವೆ.
ಈಗ ಹುಬ್ಬಳ್ಳಿ ಧಾರವಾಡ ಪೆÇಲೀಸ್ ಆಯುಕ್ತರ ಆದೇಶವನ್ನು ಮುಂದಿಟ್ಟುಕೊಂಡು ಕೇವಲ ಲಕ್ಷ್ಮೇಶ್ವರ ಹುಬ್ಬಳ್ಳಿ ಮಧ್ಯದ ಬಸ್ಸುಗಳಿಗೆ ಹಳೆ ನಿಲ್ದಾಣಕ್ಕೆ ಬರದಂತೆ ಮಾಡಿರುವುದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.
ನಿತ್ಯವೂ ಬಟಾ ಬೈಲಿ ನಿಂತಿರುವ ಗಬ್ಬೂರು ಕ್ರಾಸಿನಲ್ಲಿ ನೂರಾರು ಪ್ರಯಾಣಿಕರು ಸುಡುಬಿಸಿಲಿನಲ್ಲಿ ಗ್ರಾಮಾಂತರ ಸಾರಿಗೆ ಬಸ್ಸುಗಳಿಗೆ ಮತ್ತು ನಗರ ಸಾರಿಗೆ ಬಸ್ಸುಗಳಿಗೆ ಕಾಯ್ದು ಸುಸ್ತಾಗುತ್ತಿದ್ದು ಪ್ರಯಾನಿಕರ ಹಿತ ದೃಷ್ಟಿಯಿಂದ ಸಂಚಾರಿ ಪೆÇಲೀಸರು ಮತ್ತು ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಆಗೊಮ್ಮೆ ಈಗೊಮ್ಮೆ ಬಂದು ಹೋಗುವ ಲಕ್ಷ್ಮೇಶ್ವರ ಹುಬ್ಬಳ್ಳಿ ಬಸ್ಸುಗಳಿಗೆ ಗಬ್ಬೂರು ಮುಖಾಂತರ ಹಳೆ ಬಸ್ ನಿಲ್ದಾಣಕ್ಕೆ ಬರಲು ಅನುಮತಿ ನೀಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಈ ಕುರಿತು ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಘಟಕದ ಅಧ್ಯಕ್ಷರಾದ ಪ್ರವೀಣ್ ಬಾಳಿಕಾಯಿಯವರು ಹುಬ್ಬಳ್ಳಿಯಲ್ಲಿ ಹೃದಯ ಭಾಗವಾಗಿರುವ ಹಳೆ ಬಸ್ ನಿಲ್ದಾಣಕ್ಕೆ ಲಕ್ಷ್ಮೇಶ್ವರದಿಂದ ಹೊರಡುವ ಹುಬ್ಬಳ್ಳಿ ಬಸ್ಸುಗಳಿಗೆ ಅವಕಾಶ ನೀಡಬೇಕು ಎಂದು ಹುಬ್ಬಳ್ಳಿ ಧಾರವಾಡ ಸಂಚಾರ ಪೆÇಲೀಸ್ ಆಯುಕ್ತರಲಿ ಮನವಿ ಮಾಡಿದ್ದಾರೆ.