ಮಹದಾಯಿ ಕಾಮಗಾರಿ ಆರಂಭಿಸದಿದ್ದರೆ ಚುನಾವಣೆ ಪ್ರಚಾರಕ್ಕೆ ಬಿಡೆವು
ನವಲಗುಂದ,ಫೆ26: ಮಹದಾಯಿ ಕಳಸಾ ಬಂಡೂರಿ ಯೋಜನೆಯನ್ನು ಲೋಕಸಭಾ ಚುನಾವಣಾ ಮುನ್ನ ಆರಂಭ ಮಾಡದಿದ್ದರೆ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಬಿಡುವುದಿಲ್ಲ ಎಂದು ಮಲ್ಲಪ್ರಭಾ ಕಳಸಾ ಬಂಡೂರಿ ಮಹದಾಯಿ ರೈತ ಹೋರಾಟ ಪಕ್ಷಾತೀತ ಹೋರಾಟ ಸಮಿತಿಯ ಪದಾಧಿಕಾರಿಗಳು ಎಚ್ಚರಿಕೆ ನೀಡಿದರು.
ಹುಬ್ಬಳ್ಳಿಯಲಿಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ನಿವಾಸದ ಬಳಿ ಸಚಿವರಿಗೆ ಮನವಿ ನೀಡಿ ಲೋಕಸಭಾ ಚುನಾವಣೆ ಒಳಗಾಗಿ ಮಹದಾಯಿ ಯೋಜನೆ ಜಾರಿ ಆಗಬೇಕು, ಬ್ಯಾಂಕ್ ಗಳಲ್ಲಿ ಕಟ್ ಬಾಕಿ ರೈತರಿಗೆ ಸಾಲ ಸಿಗಬೇಕು, ರೈತರ ಅನೇಕ ಬೇಡಿಕೆ ಈಡೇರಿಕೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಅವರು ಆಗ್ರಹಿಸಿದರು.
ಮಹದಾಯಿ ಹೋರಾಟ ಸಮಿತಿ ಅಧ್ಯಕ್ಷ ಯಲ್ಲಪ್ಪ ದಾಡಿಬಾಯಿ, ಸುಭಾಸಚಂದ್ರಗೌಡ ಪಾಟೀಲ್, ಮಲ್ಲೇಶ್ ಉಪ್ಪಾರ, ಬಸನಗೌಡ ಹುಣಸಿಕಟ್ಟ, ಗೋವಿಂದರೆಡ್ಡಿ ಮೊರಬದ, ರವಿ ತೋಟದ, ಮುರಗೇಪ್ಪ್ ಪಲ್ಲೆದ, ಸಾಯಿಬಾಬ ಆನೆಗುಂದಿ , ಶಿವಣ್ಣ ಹುಬಳ್ಳಿ ಇತರರು ಇದ್ದರು.