1 ಕೋಟಿ 20 ಲಕ್ಷ ರೂ ವೆಚ್ಚದ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ
ಬೀದರ:ಫೆ.26:ವಿಠ್ಠಲಪುರ ಬಸಲಾಪುರ ಗ್ರಾಮಸ್ಥರ ಬಹುದಿನದ ಬೇಡಿಕೆಯಾಗಿದ್ದ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಈ ಎರಡು ಗ್ರಾಮಗಳು ಸೇರಿದಂತೆ ಈ ಮಾರ್ಗವಾಗಿ ಸಂಚರಿಸುವ ವಾಹನ ಸವಾರರಿಗೆ ಅನುಕೂಲವಾಗಲಿದೆ ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ.ಶೈಲೇಂದ್ರ ಬೆಲ್ದಾಳೆ ಅವರು ಹೇಳಿದರು.
ಬೀದರ್ ದಕ್ಷಿಣ ಕ್ಷೇತ್ರದ ವಿಠ್ಠಲಪುರ ಬಸಲಾಪುರ ಮಧ್ಯದ ಕಲ್ಯಾಣ ಕರ್ನಾಟ ಪ್ರದೇಶ ಅಭಿವೃದ್ಧಿ ಯೋಜನೆ ಅಡಿ 1ಕೋಟಿ, 20 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಈ ರಸ್ತೆಯು ಜನರ ಬಹುದಿನಗಳ ಬೇಡಿಕೆಯಾಗಿತ್ತು ರಸ್ತೆ ಇಲ್ಲದ ಕಾರಣ ರಸ್ತೆಯಲ್ಲಿ ಬರುವ ವಾಹನಗಳು, ಸಾರ್ವಜನಿಕರಿಗೆ ತೊಂದರೆ ಯಾಗಿತ್ತು. ಮಳೆಗಾಲದಲ್ಲಿ ಜನ ಈ ರಸ್ತೆಯಲ್ಲಿ ತಿರುಗಾಡಲು ಸಮಸ್ಯೆ ಅನುಭವಿಸುತ್ತಿದ್ದರು. ಹೀಗಾಗಿ ಇಂದು ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಗ್ರಾಮಗಳಲ್ಲಿ ಹೆಚ್ಚಿನ ಮೂಲಭೂತ ಸೌಲಭ್ಯಗಳು ದೊರಕಿಸುವ ನಿಟ್ಟಿನಲ್ಲಿ ಕಾರ್ಯ ಮಾಡಲಾಗುವುದು. ಗ್ರಾಮಗಳು ಅಭಿವೃದ್ಧಿ ಆದರೆ ದೇಶ ಅಭಿವೃದ್ಧಿ ಹೊಂದಲಿದೆ. ಸಂಬಂಧಪಟ್ಟ ಗುತ್ತಿಗೆದಾರರು ಗುಣಮಟ್ಟದ ರಸ್ತೆ ನಿಗದಿತ ಕಾಲಮಿತಿಯೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಸ್ಥಳದಲ್ಲೆ? ಹಾಜರಿದ್ದ ಗುತ್ತಿಗೆದಾರರು ಹಾಗೂ ಎಂಜಿನಿಯರ್‍ಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಮೀನಕೇರಾ ಮುಖಂಡರಾದ ಬಸವರಾರ ಬೋರಾಳ, ಶೀವಕುಮಾರ ಸ್ವಾಮಿ, ಸಂಜುಕುಮಾರ ಮಾಶೆಟ್ಟಿ, ಘಾಳೇಪ್ಪ ಚಟ್ಟನಳ್ಳಿ, ರಾಜು ಪಸಾರ, ವೀರಶೆಟ್ಟಿ ಕಲ್ವಾ, ಇಂದ್ರಜೀತ ನಿರಂಜಿ, ವಿಜಯಕುಮಾರ , ದೇವಿಂದ್ರಪ್ಪ ಕಟ್ಟಿಮನಿ, ಪ್ರಭು ನಾಯಕ, ರಾಜಕುಮಾರ ಸಿಂದನಕೇರಾ, ಬಸವರಾಜ ನೀಲಾ, ಸಂತೋಷ ರೆಡ್ಡಿ, ಪ್ರವೀಣ ತರಿ, ಜಗದೀಶ ರೋಡ್ಡಾ, ಮಹೇಶ್ ಹಚ್ಚಿ, ಇಮ್ರಾನ ಪಟೇಲ್, ಪಾಂಡುರಂಗ ಸಾಯಿ ರೆಡ್ಡಿ, ಸಚೀನ್, ರಾಚಂದ್ರ ಸುತಾರ, ಉಮೇಶ, ಮಹೇಶ, ಮತ್ತಿತರರು ಉಪಸ್ಥಿತರಿದ್ದರು.