ಜಿಲ್ಲೆ ವಿಭಜಿಸುವುದಾದಲ್ಲಿ ಸಿಂದಗಿಗೆ ಆದ್ಯತೆ ನೀಡಿ
ಈ ಸಂದರ್ಭದಲ್ಲಿ ಶಾಸಕರ ಅಶೋಕ ಮನಗೂಳಿ ಮಾತನಾಡಿ ಸಚಿವರಿಗೆ ಇಂಡಿ ಜಿಲ್ಲೆಯನ್ನಾಗಿ ಸೃಜಿಸುವ ನಿಟ್ಟಿನಲ್ಲಿ, ಇಂಡಿ ಬದಲಾಗಿ ಸಿಂದಗಿಯನ್ನು ಪರಿಗಣಿಸಿ ಎಂಬ ರಾಜಕೀಯ ಕೂಗು ನಮ್ಮದಾಗಿಲ್ಲ. ಈ ವಿಷಯದಲ್ಲಿ ನಾವು ರಾಜಕೀಯ ಮಾಡಲಾರೆವು. ಒಂದು ವೇಳೆ ವಿಜಯಪುರ ಜಿಲ್ಲೆಯನ್ನು ಇಬ್ಭಾಗಿಸುವ ಇರಾದೆ ಸರ್ಕಾರದದ್ದಾರೆ, ಜಿಲ್ಲೆಯಾಗುವ ಎಲ್ಲ ಅರ್ಹತೆಗಳನ್ನು ಹೊಂದಿರುವ ಸಿಂದಗಿಯನ್ನು ಜಿಲ್ಲೆ ಮಾಡಬೇಕು ಎಂದು ಸಚಿವರಿಗೆ ಮನವಿ ಮಾಡಿದರು.
ಈ ಹೋರಾಟ ಸಮಿತಿಯಿಂದ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲು ತಾವುಗಳು ಅವಕಾಶ ಒದಗಿಸುವುದರೊಂದಿಗೆ ನಮ್ಮ ಬೇಡಿಕೆಯನ್ನು ಬೆಂಬಲಿಸಬೇಕು ಎಂದು ಇತರ ನಾಯಕರು ಒತ್ತಾಯಿಸಿದರು.
ಸಮಿತಿಯ ಮನವಿ ಸ್ವೀಕರಿಸಿದ ಸಚಿವರು, ಸಧ್ಯ ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದು, ಜಿಲ್ಲಾ ವಿಭಜನೆ ಕುರಿತು ಸರ್ಕಾರದ ಮುಂದೆ ಯಾವ ಪ್ರಸ್ತಾವಗಳೂ ಇಲ್ಲ. ನಿಮ್ಮ ಹೋರಾಟಕ್ಕೆ ಆಧ್ಯತೆಯೂ ಸಿಗದು. ಚುನಾವಣೆ ಮುಗಿದ ನಂತರದಲ್ಲಿ ನಿಮ್ಮ ಬೇಡಿಕೆಯನ್ನು ಸರ್ಕಾರಕ್ಕೆ ತಿಳಿಸಿ, ನಿಮ್ಮ ಸೂಕ್ತವಾದ ಜಿಲ್ಲೆ ಇಬ್ಭಾಗಿಸಿದರೆ ಮಾತ್ರ ಸಿಂದಗಿಯನ್ನು ಜಿಲ್ಲೆ ಮಾಡಿ ಎಂಬ ಬೇಡಿಕೆಯನ್ನು ಪರಿಗಣಿಸುವುದಾಗಿ ಭರವಸೆ ನೀಡಿದರು.